ಡಾ.ಕೋರೆ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ
- ಆ.1 ರಂದು ಡಾ.ಪ್ರಭಾಕರ ಕೋರೆ ಜನ್ಮದಿನ ಆಚರಣೆ
- ಅಂಕಲಿ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ
- ಆಚರಣೆ ಸಮಿತಿಯಿಂದ ಮಾಹಿತಿ
ಡಾ,ಪ್ರಭಾಕರ ಕೋರೆ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ
| ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ.ಆರ್.ಪಾಟೀಲ ಮಾಹಿತಿ | ಸುದ್ದಿಗೋಷ್ಠಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಶಿಕ್ಷಣ,ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುವ ಮೂಲಕ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತರಾದ ಡಾ. ಪ್ರಭಾಕರ ಕೋರೆ ಅವರ ೭೯ನೇ ಜನ್ಮದಿನ ಅಂಗವಾಗಿ ಅ.೧ ರಂದು ವಿವಿಧ ಸಾಮಾಜಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ.ಪ್ರಭಾಕರಣ್ಣಾ ಕೋರೆ ಹುಟ್ಟುಹಬ್ಬ ಆಚರಣಾ ಸಮಿತಿಯ ಅಧ್ಯಕ್ಷ ಮತ್ತು ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ.ಆರ್.ಪಾಟೀಲ ತಿಳಿಸಿದರು.
ತಾಲೂಕಿನ ಅಂಕಲಿ ಶಿವಾಲಯದ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮಾಹಿತಿ ನೀಡಿದರು.
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ.ಶಿವಶಕ್ತಿ ಶುಗರ್ ಲಿಮಿಟೆಡ್ ಸೌದತ್ತಿ ಹೆರ್ಮ್ಸ ಡಿಸ್ಟಲರಿ ಪ್ರೈವೇಟ್ ಲಿಮಿಟೆಡ್ ಯಡ್ರಾವ,ಡಾ ಪ್ರಭಾಕರ ಕೋರೆ ಕೋ ಆಪ್‌ರೇಟಿವ್ ಕ್ರೆಡಿಟï ಸೊಸೈಟಿ ಲಿಮಿಟೆಡï ಅಂಕಲಿ.ಇನಾಮದಾರ್ ಶುಗರ್ಸ ಲಿಮಿಟೆಡ್ ಮರಕಂಬಿ. ಮತ್ತು ಕೆಎಲïಇ ಸಂಸ್ಥೆಯ ಸಂಘ ಸಂಸ್ಥೆಗಳು. ಜನಶಕ್ತಿ ಫೌಂಡೇಶನ, ಹಾಗೂ ಕೆಎಲïಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಮತ್ತು ಚಿಕ್ಕೋಡಿ ಇವರ ಸಯುಕ್ತ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಡಾ. ಪ್ರಭಾಕರ ಕೋರೆ ಅವರ ಹುಟ್ಟು ಹಬ್ಬದಂದು ಉಚಿತ ರಕ್ತದಾನ ಶಿಬಿರ, ಪದ್ಮಶ್ರೀ ಪ್ರಶಸ್ತಿ ಪಡೆದ ಹಿನ್ನಲೆ ಸನ್ಮಾನ ಸಮಾರಂಭ, ವನಮಹೋತ್ಸವ. ರಾಷ್ಟ್ರಮಟ್ಟದ ಪುರುಷರ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ.ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ ವಹಿಸಲಿದ್ದು, ಅತಿಥಿಗಳಾಗಿ ಶಾಸಕ ಲಕ್ಷ್ಮಣ ಸವದಿ, ಮಾಜಿ ಸಚಿವೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್,ಶಾಸಕಿ ಶಶಿಕಲಾ ಜೊಲ್ಲೆ, ಕೆಎಲ್ಇ ಸಂಸ್ಥೆಯ ನಿರ್ದೇಶಕಿ ಡಾ.ಪ್ರೀತಿ ದೊಡ್ಡವಾಡ, ಕೋರೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಸೇರಿ ಜಿಲ್ಲೆಯ ಶಾಸಕರು,ವಿ.ಪ ಸದಸ್ಯರು, ಮಾಜಿ ಶಾಸಕರು,ಮಾಜಿ ಸಂಸದರು ಆಗಲಿಸಲಿದ್ದಾರೆ ಎಂದು ಹೇಳಿದರು.
ಆಚರಣೆ ಸಮಿತಿ ಕಾರ್ಯಾಧ್ಯಕ್ಷ ಭರತೇಶ ಬನವಣೆ ಮಾತನಾಡಿ ಆರೋಗ್ಯ, ಶಿಕ್ಷಣ, ಸಹಕಾರ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಡಾ. ಪ್ರಭಾಕರ ಕೋರೆ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಸುರೇಶ ಪಾಟೀಲ, ಅಜೀತರಾವ ದೇಸಾಯಿ, ತಾತ್ಯಾಸಾಹೇಬ ಕಾಟೆ,ಚೇತನ್ ಪಾಟೀಲ, ಮಹಾವೀರ ಮಿರ್ಜೆ, ಮಹಾವೀರ ಕಾತ್ರಾಳೆ,ಅಣ್ಣಾಸಾಹೇಬ ಪಾಟೀಲ,ಭರಮಗೌಡ ಪಾಟೀಲ, ಮಲ್ಲಪ್ಪಾ ಮೈಶಾಳೆ, ಅಣ್ಣಾಸಾಹೇಬ ಇಂಗಳೆ, ,ಮಹಾಂತೇಶ ಪಾಟೀಲ, ಭೀಮಗೌಡ ಪಾಟೀಲ,ಶ್ರೀಕಾಂತ ಉಮರಾಣೆ ,ಸಿದಗೌಡ ಮಗದುಮ್ಮ, ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಖಂಡಗಾವೆ, ದೇವೇಂದ್ರ ಕರೋಶಿ,ಶಿವಾನಂದ ಹಕಾರೆ,
ಸಂಜಯ ಕುಡಚಿ,ತಾತ್ಯಾಸಾಹೇಬ ಅಂಬಿ, ಪಿಂಟು ಹಿರೇಕುರುಬರ, ಸಚೀನ ಪೂಜೇರಿ, ಶಿವಶಕ್ತಿ ಶುಗರ್ಸನ ಅಧಿಕಾರಿಗಳಾದ ಬಿ.ಎ.ಪಾಟೀಲ, ಯುವರಾಜ ಪಾಟೀಲ,ಎನ.ಎಸ್.ಹಿರೇಮಠ, ರಾಹುಲ ಇಚಲಕರಂಜಿ ಇತರರಿದ್ದರು.