ಅಪರಿಚಿತ ವಾಹನ ಡಿಕ್ಕಿ 
ರಾಜ್ಯ

ಎಳನೀರು ಟೆಂಪೋ ಪಲ್ಟಿ ಚಾಲಕನಿಗೆ ಗಾಯ / DABASPETE

ದಾಬಸ್​ಪೇಟೆ : ರಾಷ್ಟ್ರೀಯ ಹೆದ್ದಾರಿ 48ರ ಜಿಂದಾಲ್​ ಶಾಲೆ ಬಳಿ ಸೋಮವಾರ ರಾತ್ರಿ ಎಳನೀರು ಹೊತ್ತೊಯ್ಯುತ್ತಿದ್ದ ಟೆಂಪೋ ಸಿಮೆಂಟ್​ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಟೆಂಪೋ ಚಾಲಕನ ಕಾಲಿಗೆ ಗಾಯವಾಗಿದೆ.
ಟೆಂಪೋಗೆ ಕ್ಯಾಂಟರ್​ ಅಡ್ಡ ಬಂದ ಕಾರಣ ಅಪಘಾತ ತಪ್ಪಿಸಲು ಕ್ಯಾಂಟರ್​ ಚಾಲಕ ಯತ್ನಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಸಿಮೆಂಟ್​ ಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರ ವ್ಯತ್ಯಯ: ಹೆದ್ದಾರಿಯ ಮಧ್ಯೆಯೇ ವಾಹನ ಉರುಳಿ ಬಿದ್ದಿದ್ದರಿಂದ ಕೆಲವು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮಾಹಿತಿ ತಿಳಿದ ತಣ ಸ್ಥಳಕ್ಕೆ ಧಾವಿಸಿದ ದಾಬಸ್​ಪೇಟೆ ಪೊಲೀಸರು, ಕ್ರೇನ್​ ಮೂಲಕ ವಾಹನ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ದಾಬಸ್​ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

ದಾಬಸ್​ಪೇಟೆ : ರಾಷ್ಟ್ರೀಯ ಹೆದ್ದಾರಿ 48ರ ಚಿಂದನ ಹೊಸಹಳ್ಳಿ ಬಳಿ ಸೋಮವಾರ ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ರಾಮು (30) ಎಂಬಾತ ಮೃತಪಟ್ಟಿದ್ದಾನೆ.ಹೊರರಾಜ್ಯದಿಂದ ಬಂದು ಸ್ಥಳಿಯ ಖಾಸಗಿ ಕಂಪನಿಯೊಂದರಲ್ಲಿ ಲೋಡಿಂಗ್​ ಮತ್ತು ಅನ್​ಲೋಡಿಂಗ್​ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ರಾಮುಗೆ ಅನಾರೋಗ್ಯ ಕಾರಣ ಕೆಲಸಕ್ಕೆ ರಜೆ ಹಾಕಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ. ದಾಬಸ್​ಪೇಟೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀೆಗೆ ರವಾನಿಸಿದರು. ದಾಬಸ್​ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.