Drama helps in personality development
ಮಧುಗಿರಿ : ವ್ಯಕ್ತಿತ್ವ ವಿಕಸನಕ್ಕೆ ನಾಟಕ ಸಹಕಾರಿ ಎಂದು ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನೀಂದ್ರ ಕುವಾರ್ ಹೇಳಿದರು.
ಪಟ್ಟಣದ ಶ್ರೀ ಟಿವಿವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಣದಲ್ಲಿ ರಂಗ ಕಲೆಯ ಮಹತ್ವ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ರಂಗಭೂಮಿ ಸಹಕಾರಿ. ಪಾಠ ವಾಡುವ ಶಿಕ್ಷಕರು ತೋರುವ ಹಾವಭಾವಗಳು ಶಾಬ್ದಿಕ ಮತ್ತು ಅಶಾಬ್ದಿಕತೆಗಳು ಮಕ್ಕಳ ಮನಸ್ಸನ್ನು ಮಿಡಿದು ಜ್ಞಾನ ಸ್ವೀಕಾರಕ್ಕೆ ಸಿದ್ಧಗೊಳಿಸುತ್ತವೆ ಎಂದರು.
ರಂಗಶಿಕ್ಷಕ ಭಾನುಪ್ರಕಾಶ್ ವಾತನಾಡಿ, ನಾಟಕ ಸಂಕೀರ್ಣವಾದ ಕಲೆ. ಸಂಗೀತ, ಸಾಹಿತ್ಯ, ನೃತ್ಯ ಎಲ್ಲ ಪ್ರಕಾರಗಳನ್ನು ಸಂಪೂರ್ಣವಾಗಿ ಒಳಗೊಂಡಿದೆ. ನಟ ಮತ್ತು ಶಿಕ್ಷಕ ಇಬ್ಬರಲ್ಲೂ ಸಾಮೀಪ್ಯವಿದ್ದು ನಾಟಕಗಳಿಂದ ಏಕಾಗ್ರತೆ ಬರಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಶಿವಕುವಾರಸ್ವಾಮಿ ವಾತನಾಡಿ, ಮನೋವೈಜ್ಞಾನಿಕವಾಗಿ ಉತ್ತಮ ರೀತಿಯ ಸಂವಹನ ರೂಢಿಸಿಕೊಂಡರೆ ಪರಿಣಾಮಕಾರಿಯಾಗಿ ಶಿಕ್ಷಣ ಸಂವಹನಗೊಳ್ಳುತ್ತದೆ ಎಂದರು.
ಪ್ರಶಿಕ್ಷಣಾರ್ಥಿಗಳು ರಕ್ತದಾನ ಜೀವದಾನ, ಬಿಲ್ಲ ಹಬ್ಬ, ಅರಳುವ ಹೂಗಳು ನಾಟಕಗಳನ್ನು ಪ್ರದರ್ಶಿಸಿದರು.