ಸೇಡಂನ ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​. 
ರಾಜ್ಯ

ಕ್ಷೇತ್ರದ ಪ್ರಗತಿಗೆ ಡಾ.ಶರಣಪ್ರಕಾಶ ಪಣ

ಪ್ರಮುಖ ಮುಖ್ಯಾಂಶಗಳು

  • ಸೇಡಂ ಚಿತ್ರಣ ಬದಲಿಸುತ್ತಿರುವ ಜನನಾಯಕ
  • ಅಭಿವೃದ್ಧಿ ಹರಿಕಾರನಿಗೆ 59ನೇ ಜನ್ಮದಿನದ ಸಂಭ್ರಮ
ಸೇಡಂ: ಮತೇತ್ರದ ಶಾಸಕರಾಗಿ ನಾಲ್ಕನೇ ಬಾರಿಗೆ ಆಯ್ಕೆಯಾಗಿ ಎಡರನೇ ಅವಧಿಗೆ ರಾಜ್ಯ ಸರ್ಕಾರದ ಸಂಪುಟದಲ್ಲಿ ಕ್ರಿಯಾಶೀಲ ಸಚಿವರಾಗಿರುವ ಡಾ.ಶರಣಪ್ರಕಾಶ ಪಾಟೀಲ್​ ಅವರು ಸೋಮವಾರ 59ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಅವರ ಅಭಿಮಾನಿಗಳು ವಿವಿಧ ರೀತಿಯ ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಜನ್ಮದಿನ ಆಚರಿಸಲು ಮುಂದಾಗಿದ್ದಾರೆ.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಅವರು, ರಾಜ್ಯ ಸರ್ಕಾರದ ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ಖಾತೆಗಳ ಜವಾಬ್ದಾರಿ ಹೊಂದಿದರೂ ೇತ್ರವನ್ನು ಮರೆತಿಲ್ಲ. ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಕಷ್ಟ ಅರಿಯುತ್ತಿದ್ದಾರೆ. ಮಾದರಿ ಸೇಡಂ ನಿರ್ಮಾಣಕ್ಕೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದಾರೆ. ಇದೆಲ್ಲದರ ಮಧ್ಯೆ ಸದಾ ಜನರೊಟ್ಟಿಗೆ ಬೆರೆಯುವ ವ್ಯಕ್ತಿತ್ವ ಹೊಂದಿದ್ದಾರೆ.
2023ರಿಂದ ಇಲ್ಲಿವರೆಗೆ ಮತೇತ್ರದ ಅಭಿವೃದ್ಧಿಗಾಗಿ 1 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತರುವ ಮೂಲಕ ಜನರಿಂದ ಉತ್ತಮರೆನಿಸಿಕೊಂಡಿದ್ದಾರೆ. ಸೇಡಂನಲ್ಲಿ ಒಲಿಂಪಿಕ್​ ಮಾದರಿಯ ಈಜುಕೊಳ, ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೇಗೇರಿಸಿದ್ದು, ಬಸವೇಶ್ವರ ವೃತದಿಂದ ಕೋಡ್ಲಾ ಕ್ರಾಸ್​ವರೆಗೆ ಚತುಷ್ಪಥ ರಸ್ತೆ, ಬೀದಿ ದೀಪಗಳ ಅಳವಡಿಕೆ, ನೀಲಹಳ್ಳಿಯಲ್ಲಿ 75ಕೋಟಿ ವೆಚ್ಚದ ಜಿಟಿಟಿಸಿ ಕಾಲೇಜು ಸ್ಥಾಪನೆ, ಸರ್ಕಾರಿ ಆಸ್ಪತ್ರೆಯನ್ನು 100ರಿಂದ 150ಹಾಸಿಗೆಗೆ ಹೆಚ್ಚಿಸಿದ್ದು ಪ್ರಮುಖ ಯೋಜನೆಗಳಾಗಿವೆ. ಇದರೊಟ್ಟಿಗೆ ಕಾಗಿಣಾ ಏತ ನೀರಾವರಿ ಯೋಜನೆಗೆ ವೇಗ ನೀಡುವ ಮೂಲಕ ಕೆಲಸ ಆರಂಭಿಸಿದ್ದು, ಹೆಚ್ಚುವರಿಯಾಗಿ ಹಣ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಶ್ರಮಿಸುತ್ತಿದ್ದಾರೆ.
ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರ ಜನ್ಮದಿನ ಈ ಬಾರಿ ಬಸವ ಜಯಂತಿಯಂದೇ ಬಂದಿರುವುದರಿಂದ ಅತ್ಯಂತ ವಿಶೇಷವಾಗಿಸುವ ನಿಟ್ಟಿನಲ್ಲಿ ಅಭಿಮಾನಿಗಳು ಯೋಜನೆ ಹಾಕಿಕೊಂಡಿದ್ದಾರೆ. ನಗರದ ವಿವಿಧೆಡೆ ಅನ್ನದಾನ, ಶ್ರವಣ ದೋಷವುಳ್ಳ ಸುಮಾರು 25ಜನರಿಗೆ ಸಾಧನಾ ವಿತರಣೆ ಸೇರಿ ಅನೇಕ ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದಾರೆ.