ಡಾ.ಸರೋಜಿನಿ ಮಹಿಷಿ ವರದಿ ಜಾರಿ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಅಮೃತ್ ಪಾಟೀಲ್ ಸಿರನೂರ್, ಜಗನ್ನಾಥ ಸೂರ್ಯವಂಶಿ, ರವಿ ಒಂಟಿ, ಶಿವಾಜಿ ಚವ್ಹಾಣ, ಶಿವಾನಂದ, ಚಂದ್ರಹಾಸ, ಮಹೇಶ, ಹನುಮಂತ, ಸೇನುಸಿಂಗ್ ಇತರರಿದ್ದರು.
- ವೀರ ಕನ್ನಡಿಗರ ಸೇನೆ ಕಾರ್ಯಕರ್ತರ ಪ್ರತಿಭಟನೆ
ಕಲಬುರಗಿ: ಡಾ.ಸರೋಜಿನಿ ಮಹಿಷಿ ವರದಿ ಜಾರಿ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಬೇಕು, ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಪುನಾರಂಭಿಸಬೇಕು, ಬೀದಿ ವ್ಯಾಪಾರಿಗಳಿಗೆ ಮೂಲಸೌಲಭ್ಯ, ಸಹಾಯಧನ ಮತ್ತು ಆಶ್ರಯ ಮನೆ ಒದಗಿಸಬೇಕು, ನಾಗರಿಕರಿಗೆ ಗ್ಯಾಸ್ ಸರಬರಾಜು ವ್ಯವಸ್ಥಿತವಾಗಿ ಮಾಡಬೇಕು, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು, ಪ್ರತಿಯೊಂದು ಇಲಾಖೆಯಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಬಳಕೆ ಮಾಡಬೇಕು, ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿರಬೇಕು, ಕಲಬುರಗಿಯಲ್ಲಿ ಭಾರಿ ಪ್ರಮಾಣದ ಬಿಸಿಲು ಇರುವುದರಿಂದಾಗಿ ಹೆಲ್ಮೆಟ್ ಕಡ್ಡಾಯ ಮಾಡಬಾರದು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಅಮೃತ್ ಪಾಟೀಲ್ ಸಿರನೂರ್, ಜಗನ್ನಾಥ ಸೂರ್ಯವಂಶಿ, ರವಿ ಒಂಟಿ, ಶಿವಾಜಿ ಚವ್ಹಾಣ, ಶಿವಾನಂದ, ಚಂದ್ರಹಾಸ, ಮಹೇಶ, ಹನುಮಂತ, ಸೇನುಸಿಂಗ್, ದರ್ವೇಜ್ ಮುಸ್ತಾಫ್, ವಿಠ್ಠಲ್ ಕುಸಾಳೆ, ಬಾಬುಮಿಯಾ, ಮಹೆಬೂಬ್, ಖಾಜಾಸಾಬ್, ಲಕ್ಷಿ$್ಮಕಾಂತ, ಅಶೋಕ, ಚಂದ್ರಶೇಖರ, ಖಾಜಾ ಹುಸೇನ್, ಗೋಪಾಲರಾವ್, ಮಾಣಿಕ ಪ್ರಭು, ಅಭಿಕುಮಾರ, ರಿಷಿ ವಾಡೇಕರ್, ಜಗದೇವಿ, ಜಗತ್ಸಿಂಗ್ ಇತರರಿದ್ದರು.