Dr. Raj Kumar is an inspiration to the youth
ತುಮಕೂರು-: ಡಾ.ರಾಜ್ ಸರಳತೆ ಮತ್ತು ಬದ್ಧತೆಯ ಸಂಕೇತ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಮಾನ್ಯರಾಗಿ ಬೆಳೆದವರು ಎಂದು ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್ ಬಣ್ಣಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಮರಜೋತಿ ಸಾಂಸತಿಕ ಟ್ರಸ್ಟ್ಯಿಂದ ಇತ್ತೀಚೆಗೆ ಆಯೋಜಿಸಿದ್ದ ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿಗೂ ಕಲಾವಿದರಿಗೆ ಮಾದರಿಯಂತಿರುವ ಡಾ.ರಾಜಕುಮಾರ್ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದು ಕಲಾವಿದನಿಗೆ ಹೆಮ್ಮೆಯ ವಿಷಯ. ಇವರ ಜೀವನ ಚರಿತ್ರೆಯನ್ನು ಯುವಜನರಿಗೆ ಕಥೆಯ ರೂಪದಲ್ಲಿ ಹೇಳುವ ಅಗತ್ಯವಿದೆ. ಅದು ಯುವಜನರ ಸ್ಫೂರ್ತಿಯನ್ನು ಮತ್ತಷ್ಟು ಹಸಿರಾಗಿಸುತ್ತದೆ ಎಂದರು.
ಕಾಡು ಮಲ್ಲೇಶ್ವರ ಗೆಳೆಯರು ಬಳಗದ ಅಧ್ಯಕ್ಷರು, ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ಕಷ್ಟಗಳನ್ನೇ, ಎರಡು ತೊಡರುಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಯಾರು ಊಹಿಸಲಾಗದ ಎತ್ತರಕ್ಕೆ ಬೆಳೆದವರು ಡಾ.ರಾಜ್, ಸಾಹಿತ್ಯದಲ್ಲಿ ಕುವೆಂಪು ಮೇರು ಪರ್ವತವಾದರೆ, ಕಲೆಯಲ್ಲಿ ಡಾ.ರಾಜ್ ಹಿಮಾಲಯ ಪರ್ವತ. ಡಾ.ಪುನಿತ್ ಸೇವೆಯ ಸಾಗರ. ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದವರು ರಾಜಕುಮಾರ್ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಇಂದಿನ ಸಿನಿಮಾ ನಿಮಾರ್ಪಕರಿಗೆ, ನಾಯಕ ನಟರಿಗೆ ಡಾ.ರಾಜಕುಮಾರ್ ಸಿನಿಮಾ ತೋರಿಸಬೇಕಿದೆ ಎಂದರು. ಸಮಾರಂಭದಲ್ಲಿ ಕಲಾಶ್ರೀ ಡಾ.ಲಕ್ಷ$್ಮಣದಾಸ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಡಾ.ಬಾಬು ಜಗಜೀವನ ರಾಮ್ ಪ್ರಶಸ್ತಿ ಪುರಸತ ನರಸೀಯಪ್ಪ, ಅಮರ ಜೋತಿ ಸಾಂಸತಿಕ ಟ್ರಸ್ಟ್ ದಿಬ್ಬೂರು ಮಂಜು, ಪತ್ರಕರ್ತ ಎಸ್.ನಾಗಣ್ಣ, ಎಂ.ವಿ.ನಾಗಣ್ಣ, ಸಿದ್ದರಾಜು, ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಶ್ರೀರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಚಲನಚಿತ್ರ ಹಿನ್ನೆಲೆ ಗಾಯಕ ವಿಷ್ಣು ರಾಮನ್ ಮತ್ತು ರಂಗಭೂಮಿ ಕಲಾವಿದ ವಸಂತಕುಮಾರ್ ಭೀಮಸಂದ್ರಗೆ ಡಾ.ರಾಜ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನುಶಾಂತರಾಜು, ನರಸೀಯಪ್ಪ, ಪ್ರೊ.ಓ.ನಾಗರಾಜು, ಡಾ.ಎಚ್.ನಾಗಭೂಷಣ್, ಟಿ.ವೈ.ಯೋಗಾನಂದಕುಮಾರ್, ವಿದ್ವಾನ್ ಹರಳೂರು ಶಿವಕುಮಾರ್, ಪಾಪಣ್ಣ ಜವೆಗೊಂಡನಹಳ್ಳಿ, ಮನು ಶಿವಕುಮಾರ್ ಹರಳೂರು, ಚಿತ್ರ ಕಲಾವಿದ ಡೇವಿಡ್, ಸಂಗೀತ ಶಿಕ್ಷಕಿ ಸುಧಾರತ್ನ, ವಿದ್ವಾನ್ ದೇವರಾಜ್, ಲೋಕೇಶ್ ಬಾಬು, ನಿರಂಜನ್, ಬಿ.ರಾಮಾಂಜನೇಯ ಮರಳೂರು, ಕೆ.ಸಿ.ನರಸಿಂಹಮೂರ್ತಿ ಕೊಪ್ಪ ಅಬರನ್ನು ಅಭಿನಂದಿಸಲಾಯಿತು.