- ಗಿನ್ನೆಸ್ ದಾಖಲೆ ಮಾನ್ಯತೆ ಪಡೆದ ಎಐ ಇನ್ ಹೆಲ್ತ್ಕೇರ್ ಕಾರ್ಯಕ್ರಮ
ಕಲಬುರಗಿ: ರಾಷ್ಟ್ರೀಯ ವೈದ್ಯಕಿಯ ವಿಜ್ಞಾನ ಪರೀಕ್ಷಾ ಮಂಡಳಿ ಆಯೋಜಿಸಿದ್ದ ಎಐ ಇನ್ ಹೆಲ್ತ್ಕೇರ್ ಕಾರ್ಯಕ್ರಮದಲ್ಲಿ ಕಲಬುರಗಿಯ ಡಾ.ಜೂಹಿ ಶಬ್ನಂ ಬೆಂಡಿಗೇರಿ ಅವರು ಶೇ.100 ಅಂಕ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಉದಯೋನ್ಮುಖ ಅನ್ವಯಿಕೆಗಳ ಕುರಿತು ಸಮಗ್ರ ಅರಿವು ಮೂಡಿಸುವ ಉದ್ದೇಶ ಹೊಂದಿದ್ದು, ವೈದ್ಯಕಿಯ ಚಿತ್ರಣ, ಆರೋಗ್ಯ ದತ್ತಾಂಶ ವಿಶ್ಲೇಷಣೆ, ಡಿಜಿಟಲ್ ಆರೋಗ್ಯ ತಂತ್ರಜ್ಞಾನ, ಆಡಳಿತ, ನೈತಿಕತೆ, ಅನುಷ್ಠಾನ ತಂತ್ರಗಳು ಹಾಗೂ ಭವಿಷ್ಯದ ಆರೋಗ್ಯ ಸೇವಾ ನವೋದ್ಯಮಗಳ ಕುರಿತು ವ್ಯಾಪಕ ತರಬೇತಿ ನೀಡಿದೆ.
ಡಾ.ಜೂಹಿ ಶಬ್ನಂ ಬೆಂಡಿಗೇರಿ ಅವರು ಪ್ರಸ್ತುತ ಕಲಬುರಗಿಯ ಕೆಬಿಎನ್ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಮೆಡಿಕಲ್ ಸೈನ್ಸಸ್ ಅಡಿಯಲ್ಲಿ ದಂತ ವೈದ್ಯಕಿಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಷ್ಟ್ರೀಯ ವೈದ್ಯಕಿಯ ವಿಜ್ಞಾನ ಪರೀಕ್ಷಾ ಮಂಡಳಿನ ಎಐ ಇನ್ ಹೆಲ್ತ್ಕೇರ್ ಉಪಕ್ರಮದ ಭಾಗವಾಗಿದ್ದು, ಯೂಟ್ಯೂಬ್ನಲ್ಲಿ ಆರೋಗ್ಯ ಕ್ಷೇತ್ರದ ಕೃತಕ ಬುದ್ಧಿಮತ್ತೆ ಪಾಠದ ನೇರಪ್ರಸಾರವನ್ನು ಅತಿಹೆಚ್ಚು ವೀಕ್ಷಕರು ವೀಸಿದ ದಾಖಲೆಗೆ ಗಿನ್ನೆಸ್ ವಿಶ್ವ ದಾಖಲೆ ವಿಶೇಷ ಮಾನ್ಯತೆ ಪಡೆದಿದೆ ಎಂದು ಡಾ.ಎನ್.ಡಿ.ಬೆಂಡಿಗೇರಿ ತಿಳಿಸಿದ್ದಾರೆ.