ಕಲಬುರಗಿಯಲ್ಲಿ ಡಾ.ಫಾರುಕ್​ ಮಣ್ಣೂರ ಜನ್ಮದಿನ ನಿಮಿತ್ತ ಅಭಿಮಾನಿಗಳ ಬಳಗ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಡ ವಿಧವೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಡಾ.ಫಾರುಕ್​ ಮಣ್ಣೂರ, ಜಗದೇವ ಗುತ್ತೇದಾರ್​, ಡಾ.ಅಪ್ಪಾರಾವ್​ ದೇವಿ ಮುತ್ಯಾ, ಫರಾಜುಲ್​ ಇಸ್ಲಾಂ, ನೀಲಕಂಠ ಮೂಲಗೆ ಇತರರಿದ್ದರು 
ರಾಜ್ಯ

ಡಾ.ಫಾರುಕ್​ ಶೀಘ್ರ ಕಾಂಗ್ರೆಸ್​ ಸೇರ್ಪಡೆ

ಪ್ರಮುಖ ಮುಖ್ಯಾಂಶಗಳು

  • ಎಂಎಲ್​ಸಿ ಜಗದೇವ ಗುತ್ತೇದಾರ್​ ಹೇಳಿಕೆ
  • ಮಣ್ಣೂರ ಜನ್ಮದಿನ ನಿಮಿತ್ತ ಸೇವಾ ಸಂಕಲ್ಪ
ಕಲಬುರಗಿ: ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಫಾರುಕ್​ ಮಣ್ಣೂರ ಆರೋಗ್ಯ, ಸಮಾಜ ಸೇವೆ ಮೂಲಕ ಕಡಿಮೆ ಅವಧಿಯಲ್ಲಿ ಜನರ ವಿಶ್ವಾಸ ಗಳಿಸಿದ್ದಾರೆ. ಸಮಾಜಮುಖಿ ಆಗಿರುವ ಇವರು ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ ಸೇರಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​ ಹೇಳಿದರು.
ನಗರದಲ್ಲಿ ಅಭಿಮಾನಿ ಬಳಗದಿಂದ ಡಾ.ಫಾರುಕ್​ ಮಣ್ಣೂರ ಅವರ 39ನೇ ಜನ್ಮದಿನ ನಿಮಿತ್ತ ಬುಧವಾರ ಏರ್ಪಡಿಸಿದ್ದ ಸೇವಾ ಸಂಕಲ್ಪ ದಿವಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಪರ, ಬಡವರ ಪರ, ಹಿಂದುಳಿದವರ ಪರ ಕಾಳಜಿವುಳ್ಳವರು ರಾಜಕೀಯಕ್ಕೆ ಬಂದರೆ ಜನರಿಗೆ ಸಾಮಾಜಿಕ ನ್ಯಾಯ ಸಿಗಲಿದೆ ಎಂದರು.
ಡಾ.ಫಾರುಕ್​ ಮಣ್ಣೂರ ಮಾತನಾಡಿ, ಇಂದು ಪ್ರತಿ ಪಾಲಕರು ಹೆಣ್ಣು ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ. ಆ ಹೆಣ್ಣು ಮಗು ಇಡೀ ಕುಟುಂಬವನ್ನು ವಿದ್ಯಾವಂತರಾಗಿ ಮಾಡುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಈ ಆಸ್ಪತ್ರೆ ಆರಂಭವಾದಾಗಿನಿಂದ ನಾನು 750 ಯರೋಗಿಗಳನ್ನು ದತ್ತು ಪಡೆದು ಪೌಷ್ಟಿಕ ಆಹಾರ ವಿತರಣೆ, ಜಿಲ್ಲಾದ್ಯಂತ ಉಚಿತ ಕುಡಿಯುವ ನೀರು ಪೂರೈಕೆ, ಮಧುಮೇಹಮುಕ್ತ ಕಲಬುರಗಿ ಉದ್ದೇಶದಿಂದ ಉಚಿತ ತಪಾಸಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀನಿವಾಸ ಸರಡಗಿ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ, ಜನಾಬ್​ ಮೌಲಾನಾ ಅಲ್ತಾಫ್​ ಪಟೇಲ್​ ಸಾಹೇಬ್​, ಗಣಜಲಖೇಡ ಶ್ರೀ ನಾಗೇಶ ಮಾಣಿಕ ಅಪ್ಪಾಜಿ, ಪ್ರಮುಖರಾದ ನೀಲಕಂಠರಾವ ಮೂಲಗೆ, ಡಾ.ಎಸ್​.ಬಿ. ಕಾಮರಡ್ಡಿ, ಫರಾಜುಲ್​ ಇಸ್ಲಾಂ, ಮರೆಪ್ಪ ಹಳ್ಳಿ, ಡಾ.ರವಿ ಚವ್ಹಾಣ್​ ಶರಣಬಸಪ್ಪ ಖೇಣಿ, ಬಾಬುಮಿಯಾ ಮಣ್ಣೂರ, ಡಾ.ಮತೀನ್​, ಎಂಡಿ ಇಸ್ಮಾಯಿಲ್​, ಜಹೀರ್​ ಶಹಾಬಾದ್​, ರಾಜೇಶ ಯಾನಾಗುಂಟಿ, ಆಮೀರ ನಿಂಬಾಳಕರ್​, ಹರ್ಷಾ ಪಿಂಟು, ಹರೀಶ, ನಜೀರ್​ ಇತರರಿದ್ದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ
ಡಾ.ಫಾರುಕ್​ ಮಣ್ಣೂರ ಜನ್ಮದಿನ ನಿಮಿತ್ತ ನಗರದ ವೃದ್ಧಾಶ್ರಮದಲ್ಲಿ ಅನ್ನ ಸಂತರ್ಪಣೆ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸುಕನ್ಯಾ ಸಮೃದ್ಧಿ ಯೋಜನೆ ಅಡಿ 200 ಹೆಣ್ಣು ಮಕ್ಕಳ 18 ವರ್ಷದವರೆಗೆ ಕಂತು ಪಾವತಿ, ಅವರ ಖಾತೆ ಪಾಸ್​ಬುಕ್​ ವಿತರಣೆ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ 10 ಹೆಣ್ಣು ಮಕ್ಕಳಿಗೆ ತಲಾ 10000 ರೂ. ವಿದ್ಯಾರ್ಥಿವೇತನ, ವಿದ್ಯಾರ್ಥಿಗಳಿಗೆ ಪುಸ್ತಕ, 10 ವಿಧವೆಯರಿಗೆ ಹೊಲಿಗೆ ಯಂತ್ರ ವಿತರಣೆ ಜತೆ ವಿವಿಧ ೇತ್ರದ 11 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಫಾರುಕ್​ ಅವರ ಬ್ಯಾರೆಹಿಲ್ಸ್​ ನಿವಾಸದಿಂದ ಕಾರ್ಯಕ್ರಮ ನಡೆಯುವ ತ್ರಿನೇತ್ರ ಕಲ್ಯಾಣ ಮಂಟಪವರೆಗೆ 200ಕ್ಕೂ ಹೆಚ್ಚು ಬೈಕ್​ಗಳ ಮೂಲಕ ರ್ಯಾಲಿ ನಡೆಯಿತು.
"

ಕಲಬುರಗಿ ಜಿಲ್ಲೆಯ ಸುಮಾರು 650 ಬಡ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿ ದತ್ತು ಪಡೆದು 18 ವರ್ಷದವರೆಗೆ ಅವರ ಕಂತಿನ ಹಣ ಆಸ್ಪತ್ರೆ ಪಾವತಿಸಲಿದೆ. ವಿಶೇಷವಾಗಿ ಪಾಲಕ, ಪೋಷಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು.

— > ಡಾ.ಫಾರುಕ್​ ಮಣ್ಣೂರ ಮುಖ್ಯಸ್ಥ, ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ