ಅಖಿಲ ಭಾರತೀಯ ವಿಶ್ವವಿದ್ಯಾಲಯಗಳ ಮಹಿಳಾ ಯೋಗಾಸನ ಚಾಂಪಿಯನ್‌ಶಿಪ್‌ಗೆ ಡಾ.ಸಿ.ಎನ್. ಮಂಜುನಾಥ್ ಚಾಲನೆ ನೀಡಿದರು. ಡಾ.ಎಚ್.ಆರ್.ನಾಗೇಂದ್ರ, ಎಂ. ಡಿ. ಲಕ್ಷ್ಮಿನಾರಾಯಣ ಮತ್ತಿತರರು ಉಪಸ್ಥಿತರಿದ್ದರು.  
ರಾಜ್ಯ

ಮಹಿಳಾ ಯೋಗಾಸನ ಚಾಂಪಿಯನ್‌ಶಿಪ್‌ಗೆ ಡಾ.ಸಿ.ಎನ್.ಮಂಜುನಾಥ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಯೋಗಾಸನ ಚಾಂಪಿಯನ್‌ಶಿಪ್‌ಗೆ ಡಾ.ಸಿ.ಎನ್.ಮಂಜುನಾಥ ಚಾಲನೆ
  • ಅಖಿಲ ಭಾರತೀಯ ವಿಶ್ವವಿದ್ಯಾಲಯಗಳ ಮಹಿಳಾ ಯೋಗಾಸನ ಚಾಂಪಿಯನ್‌ಶಿಪ್‌
  • ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟೀಸ್ (ಎಐಯು) ಆಯೋಜನೆ

ಬೆಂಗಳೂರು:2025-26ನೇ ಸಾಲಿನಅಖಿಲ ಭಾರತೀಯ ವಿಶ್ವವಿದ್ಯಾಲಯಗಳಮಹಿಳಾ ಯೋಗಾಸನ ಚಾಂಪಿಯನ್‌ಶಿಪ್‌ಗೆಸೋಮವಾರ ಬೆಂಗಳೂರಿನ ಎಸ್-ವ್ಯಾಸವಿಶ್ವವಿದ್ಯಾಲಯದ ಸತ್ವ ಗ್ಲೋಬಲ್ಸಿಟಿ ಕ್ಯಾಂಪಸ್‌ನಲ್ಲಿ ಚಾಲನೆದೊರೆಯಿತು.

ಅಸೋಸಿಯೇಷನ್ಆಫ್ ಇಂಡಿಯನ್ ಯೂನಿವರ್ಸಿಟೀಸ್(ಎಐಯು)ಆಯೋಜಿಸಿದ್ದಕಾರ್ಯಕ್ರಮವನ್ನು ಸಂಸದಡಾ.ಸಿ.ಎನ್.ಮಂಜುನಾಥ್ಉದ್ಘಾಟಿಸಿದರು.ವಿವಿಯ ಕುಲಪತಿಡಾ. ಎನ್.ಕೆ.ಮಂಜುನಾಥ್,ಸ್ಪರ್ಧಿಗಳುಮತ್ತು ತರಬೇತುದಾರರು ಸ್ವಾಗತಿಸಿದರು.ವಿವಿಯ ಅಧ್ಯಕ್ಷರಾದಡಾ.ಎಚ್.ಆರ್.ನಾಗೇಂದ್ರಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದಡಾ.ಸಿ.ಎನ್.ಮಂಜುನಾಥ್ಯೋಗವು ದೈಹಿಕ ಸಾಮರ್ಥ್ಯ,ಮಾನಸಿಕ ಏಕಾಗ್ರತೆಮತ್ತು ಭಾರತದ ಸಾಂಸ್ಕೃತಿಕಪರಂಪರೆಯನ್ನು ಒಗ್ಗೂಡಿಸುವ ಒಂದುಶಿಸ್ತು.ವಿಶ್ವವಿದ್ಯಾಲಯಗಳುಸ್ಥಳೀಯ ಕ್ರೀಡೆಗಳು,ಸಮಗ್ರ ಶಿಕ್ಷಣಮತ್ತು ಮಹಿಳಾ ಸಬಲೀಕರಣವನ್ನುಉತ್ತೇಜಿಸುವಲ್ಲಿ ವಹಿಸುವಪಾತ್ರವನ್ನು ಪ್ರಸ್ತಾಪಿಸಿದರು.

ಚಾಂಪಿಯನ್‌ಶಿಪ್‌ಗೆದೇಶದಾದ್ಯಂತ 230ವಿಶ್ವವಿದ್ಯಾಲಯಗಳ2,500 ಮಹಿಳಾಕ್ರೀಡಾಪಟುಗಳು,ತರಬೇತುದಾರರು,ತಂಡದ ವ್ಯವಸ್ಥಾಪಕರುಮತ್ತು ತಾಂತ್ರಿಕ ಅಧಿಕಾರಿಗಳುಭಾಗವಹಿಸಿದ್ದರು.ಸ್ಪರ್ಧೆಗಳುಟ್ರೆಡಿಷನಲ್ ಯೋಗಾಸನ (ತಂಡಮತ್ತು ವೈಯಕ್ತಿಕ)ಹಾಗೂ ಆರ್ಟಿಸ್ಟಿಕ್ಮತ್ತು ರಿದಮಿಕ್ ಯೋಗಾಸನ ವಿಭಾಗಗಳಲ್ಲಿನಡೆಯಲಿವೆ. .9(ಶುಕ್ರವಾರ)ನಡೆಯುವ ಸಮಾರೋಪಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆಪ್ರಶಸ್ತಿ ಪ್ರದಾನ ನಡೆಯಲಿದೆ.

ಸಮಾರಂಭದಲ್ಲಿಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ,ನ್ಯೂಟನ್ ಸ್ಕೂಲ್ಸಂಸ್ಥಾಪಕ ಮಿ.ಸಿದ್ಧಾರ್ಥಮಹೇಶ್ವರಿ, ವಿದೇಶಾಂಗ ಇಲಾಖೆಉಪಕಾರ್ಯದರ್ಶಿ ಗರಿಮಾ ಜೈನ್ಮತ್ತಿತರರು ಪಾಲ್ಗೊಂಡಿದ್ದರು.