ದೊಡ್ಡಬಳ್ಳಾಪುರದಲ್ಲಿ ಡಾ.ಅನುಪಮಾ ನಿರಂಜನ ಅವರ ನೆನಪು ಕಾರ್ಯಕ್ರಮ ನಡೆಯಿತು. ನಿಲಯಪಾಲಕಿ ಮಮತಾ,ಮಹಿಳಾ ಸಮಾಜ ಮಾಜಿ ಅಧ್ಯಕ್ಷೆಎಲ್.ಸಿ.ದೇವಕಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ. ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್ ಇದ್ದರು.
ದೊಡ್ಡಬಳ್ಳಾಪುರ : ಡಾ.ಅನುಪಮಾ ನಿರಂಜನ ಅವರು ಕನ್ನಡದ ಅತ್ಯಂತ ಜನಪ್ರಿಯ ಲೇಖಕಿ, ಪ್ರಸಿದ್ಧ ವೈದ್ಯೆ ಮತ್ತು ಜನಪರ ಚಿಂತಕರಾಗಿದ್ದರು ಎಂದುಲೇಖಕಿ ಮತ್ತು ನಿವೃತ್ತ ಉಪನ್ಯಾಸಕಿ ಕೆ.ಎಸ್. ಪ್ರಭಾ ಬಣ್ಣಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಂಡಿದ್ದ ಡಾ.ಅನುಪಮಾ ನಿರಂಜನ ಅವರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು. ದೊಡ್ಡಬಳ್ಳಾಪುರ ಮೂಲದ ಡಾ.ಅನುಪಮಾ ನಿರಂಜನ ಅವರ ಸಾಹಿತ್ಯವುಸಮಾಜದ ಸ್ವಾಸ್ಥ$್ಯವನ್ನು ಕಾಯುವ ಮತ್ತು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುತ್ತದೆ.ವೈಜ್ಞಾನಿಕ ಜ್ಞಾನವನ್ನು ಸರಳ ಕನ್ನಡದಲ್ಲಿ ಜನಸಾಮಾನ್ಯರಿಗೆ ದಾಟಿಸುವ ಮೂಲಕ "ವೈದ್ಯ ಸಾಹಿತ್ಯ' ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದವರು ಅನುಪಮ ನಿರಂಜನ. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಇವರ ಕಾದಂಬರಿಗಳಲ್ಲಿ ಹೆಣ್ಣಿನ ಸಮಸ್ಯೆ, ಸಾಮಾಜಿಕ ಆಳ-ಅಗಲಗಳು ಹಾಗೂ ಕೌಟುಂಬಿಕ ಸಂಬಂಧಗಳ ಚಿತ್ರಣ ಹೆಚ್ಚಾಗಿ ಕಂಡುಬರುತ್ತದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಸಾಹಿತ್ಯ ಕೃತಿಗಳ ಓದು ಮಾನವನ ವ್ಯಕ್ತಿತ್ವ ವಿಕಸನಕ್ಕೆಸಹಕಾರಿಆಗುತ್ತದೆ.ದೈನಂದಿನ ಒತ್ತಡ ಕಡಿಮೆ ಮಾಡಿ, ಮಾನಸಿಕ ನೆಮ್ಮದಿ ನೀಡುತ್ತದೆ ಎಂದರು.
ಡಾ.ಅನುಪಮಾ ನಿರಂಜನ ಅವರ ಎಳೆ ಕಾದಂಬರಿ ಕುರಿತು ಕವಯತ್ರಿ ವಸುಂದರರೆಡ್ಡಿ ವಿವರಿಸಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಪರಿಸರ ಪ್ರಜ್ಞಾ ಕೇಂದ್ರದ ಕಾರ್ಯದರ್ಶಿ ಡಿ.ಆರ್. ನಟರಾಜು, ಕವಿಗಳಾದ ನಾಗದಳ ನಟರಾಜು, ವಾಣಿಗಾರಹಳ್ಳಿ ಶ್ರೀನಿವಾಸ್, ನಿಲಯಪಾಲಕ ಸಿ. ಅಣ್ಣಯ್ಯ, ಕಲಾವಿದರಾದ ನಾಗರತ್ನಮ್ಮ, ಬಾಶೆಟ್ಡಿಹಳ್ಳಿ ಮಂಜುನಾಥ್, ದರ್ಗಾಜೋಗಿಹಳ್ಳಿ ಮಲ್ಲೇಶ್, ಮಂಜುಳಾ ಇದ್ದರು.