ಯಡ್ರಾಮಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್​ ಸಭೆಯಲ್ಲಿ ಚಂದ್ರಶೇಖರ ಪುರಾಣಿಕ, ರಾಜಶೇಖರ ಸಾಹು ಸೀರಿ, ಮಲ್ಲಿಕಾರ್ಜುನ ಹಲಕರ್ಟಿ, ಶಾಂತಪ್ಪ ಕೂಡಲಗಿ, ಇಬ್ರಾಹಿಂಸಾಬ್​ ಉಸ್ತಾದ್​ ಇತರರಿದ್ದರು. 
ರಾಜ್ಯ

ಡಾ.ಅಜಯಸಿಂಗ್​ ಅಭಿನಂದನಾ ಸಮಾರಂಭ ಮುಂದೂಡಿಕೆ

ಯಡ್ರಾಮಿ: ಪಟ್ಟಣದಲ್ಲಿ ಭಾನುವಾರ ಆಯೋಜಿಸಲು ಉದ್ದೇಶಿಸಿದ್ದ ಸಣ್ಣ ನಿರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯಸಿಂಗ್​ ಅವರ ಅಭಿನಂದನಾ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್​ ಮುಖಂಡ ಚಂದ್ರಶೇಖರ ಪುರಾಣಿಕ ತಿಳಿಸಿದರು. ತಾಲೂಕಿನ ಕಾರ್ಯಕರ್ತರು ಹಾಗೂ ಮುಖಂಡರ ಒತ್ತಾಯದ ಮೇರೆಗೆ ಡಾ.ಅಜಯಸಿಂಗ್​ ಅವರು ಅಭಿನಂದನಾ ಸಮಾರಂಭಕ್ಕೆ ಒಪ್ಪಿದ್ದರು. ಅಲ್ಲದೆ ಅದ್ದೂರಿ ಮೆರವಣಿಗೆ ಹಾಗೂ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಯಡ್ರಾಮಿ-ಜೇವರ್ಗಿ ತಾಲೂಕನ್ನು ಕೈಬಿಟ್ಟಿರುವುದರಿಂದ ಕಾರ್ಯಕರ್ತರು ಹಾಗೂ ರೈತರು ನೊಂದಿದ್ದಾರೆ. ಇಂತಹ ಸಮಯದಲ್ಲಿ ಸಮಾರಂಭ ಬೇಡ ಎಂದು ಮುಂದೂಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜಶೇಖರ ಸಾಹು ಸೀರಿ ಮಾತನಾಡಿ, ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಸಮೀೆ ನಡೆಸಿ ಬರಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಿಲ್ಲೆಯನ್ನು ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಸಚಿವ ಡಾ.ಅಜಯಸಿಂಗ್​ ತಿಳಿಸಿದ್ದಾರೆ. ಅಲ್ಲದೆ ಸಚಿವರು ಭಾನುವಾರ ಯಡ್ರಾಮಿಗೆ ಆಗಮಿಸಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ ಎಂದು ಹೇಳಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ, ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ಪ್ರಮುಖರಾದ ಇಬ್ರಾಹಿಂಸಾಬ್​ ಉಸ್ತಾದ್​, ಮಲ್ಹಾರರಾವ್​ ಕುಲಕರ್ಣಿ, ಶೇಖ್​ಫರೀದ್​ ಮಳ್ಳಿಕರ್​, ಕಾಶಿರಾಯಗೌಡ ಯಲಗೋಡ, ಹಯ್ಯಾಳಪ್ಪ ಗಂಗಾಕರ, ನಾಗಣ್ಣ ಹಾಗರಗುಂಡಗಿ, ಮಹಿಬೂಬ್​ಪಟೇಲ್​ ಚಿಂಚೋಳಿ, ಬಸವರಾಜ ಪವಾರ್​, ರೇವಣಸಿದ್ದ ಬೆಲ್ಲದ, ದೇವಿಂದ್ರ ಬಂಡೆಪ್ಪಗೋಳ, ರಜಾಕ್​ ಮನಿಯಾರ, ಮಹೇಂದ್ರ ಬಾಲೂರ ಇತರರಿದ್ದರು.