ದೇವರಾಜ ನಾಯಕ  
ರಾಜ್ಯ

ವರದಕ್ಷಿಣೆ ನಿಷೇಧ ಜಾಗೃತಿ ಸಮಾವೇಶ ನಾಳೆ

ಪ್ರಮುಖ ಮುಖ್ಯಾಂಶಗಳು

  • ದೇವರಾಜ ನಾಯಕ ಮಾಹಿತಿ
  • ಬಂಜÁರ ಸಮಾಜದಿಂದ ಆಯೋಜನೆ
ಯಾದಗಿರಿ: ವರದಕ್ಷಿಣೆ ನಿರ್ಮೂಲನೆಗೆ ಪಣತೊಟ್ಟರುವ ಬಂಜÁರ ಸಮಾಜ, ಈ ನಿಟ್ಟಿನಲ್ಲಿ ಐತಿಹಾಸಿಕ ಮಹಾನಡೆಯ ವರದಕ್ಷಿಣೆ ನಿಷೇಧ ಮಹಾಸಭೆ ಹಾಗೂ ಜನಜÁಗೃತಿ ಮಹಾ ಸಮಾವೇಶ ಜು.೧೨ರಂದು ಬೆಳಗ್ಗೆ ೧೦ಕ್ಕೆ ಇಲ್ಲಿನ ಚಿತ್ತಾಪುರ ರಸ್ತೆಯ ಬಂಜÁರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಬಂಜÁರ ಸಂಘದ ರಾಜ್ಯಾಧ್ಯಕ್ಷ ದೇವರಾಜ ನಾಯಕ ತಿಳಿಸಿz್ದÁರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ವರದಕ್ಷಿಣೆ ಎಂಬುವುದು ದೊಡ್ಡ ಪಿಡುಗಾಗಿದೆ. ರಾಕ್ಷಸಿನಂತೆ ಬೆನ್ನತ್ತಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತಿವೆ. ಸಾಲ, ಸೂಲ ಮಾಡಿಕೊಂಡು ಗುಳೆ ಹೊಗುತ್ತಿz್ದÁರೆ. ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿz್ದÁರೆ. ಇದನ್ನು ಮನದಟ್ಟು ಮಾಡಿಕೊಂಡಿರುವ ಸಮಾಜದ ಜನರು ಕೂಡಿಕೊಂಡು ಚಿಂತನ, ಮಂಥನ ಮಾಡಿ ವರದಕ್ಷಿಣೆ ಸಂಪೂರ್ಣ ನಿಷೇಧ ಮಾಡುವ ನಿಟ್ಟಿನಲ್ಲಿ ಜÁಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಮಾವೇಶ ನಡೆಯಲಿದೆ ಎಂದರು. ಜಿ¯್ಲÉಯ ಶಹಾಪುರ, ಯಾದಗಿರಿ, ವಡಗೇರಾ, ಸುರಪುರ, ಹುಣಸಗಿ, ಗುರುಮಠಕಲï ಸೇರಿ ಆರು ತಾಲೂಕುಗಳ ನಾಯಕರೇ, ಡಾವ್, ಕಾರಬಾರಿ, ನಾಸಾಬಿ ಹಾಗೂ ಹಸಾಬಿ ಬಂಧುಗಳು ಸೇರಿ ಸಾವಿರಾರು ಜನರು ಅಂದಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಡಿಸಿ ರಾಹುಲï ಪಾಂಡ್ವೆ, ಎಸ್.ಪಿ.ಪೃಥ್ವಿಕ್ ಶಂಕರ್ ಅವರಿಗೆ ಸಮಾವೇಶಕ್ಕೆ ಬರಲು ಮನವಿ ಮಾಡಿz್ದÉವೆ. ಕಾರಬಾರಿ, ನಾಯಕ, ಡಾವ್ ಅವರಿಗೆ ಈ ವೇಳೆ ವರದಕ್ಷಿಣೆ ನಿಷೇಧ ಕುರಿತಂತೆಯೇ ಪ್ರತಿe್ಞÉ ಮಾಡಿಸಲಾಗುವುದು ಎಂದು ದೇವರಾಜ್ ಹೇಳಿದರು. ಈ ವೇಳೆ ಜಿಪಂ ಮಾಜಿ ಸದಸ್ಯ ಕಿಶನ ರಾಠೋಡ, ಬಂಗಾರು ರಾಠೋಡ, ವಿನೋದ ರಾಠೋಡ, ಆನಂದ, ಗೋವಿಂದ ರಾಠೋಡ, ವಿಜಯ ಜÁಧವ, ಗೋವಿಂದ ರಾಠೋಡ ಇತರರಿದ್ದರು.