ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್​ ಪೋಲಿಯೋ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎಸ್​.ಬಸವರಾಜು, ಪುರಸಭೆ ಮಾಜಿ ಸದಸ್ಯ ಎಸ್​.ಭಾಸ್ಕರ್​, ಜೆಡಿಎಸ್​ ಸಾಮಾಜಿಕ ಜಾಲತಾಣದ ಹರ್ಷವರ್ಧನ್​, ಹಿರಿಯ ಆರೋಗ್ಯ ಸಹಾಯಕಿ ಪುಷ್ಪಾ, ಸಿಬ್ಬಂದಿ ಕಲಾವತಿ, ವರಲಕ್ಷಿ$್ಮ, ಲೋಕೇಶ್​, ರಾಜೇಶ್​ ಇತರರು ಇದ್ದರು. 
ರಾಜ್ಯ

ಮನೆಮನೆಗೂ ಭೇಟಿ ನೀಡಿ ಲಸಿಕೆ ವಿತರಣೆ / VIJAYAPUR

ವಿಜಯಪುರ : ದೇಶವು ಪೋಲಿಯೋದಿಂದ ಮುಕ್ತವಾಗಿದ್ದರೂ ಅಕ್ಕಪಕ್ಕದ ದೇಶಗಳಲ್ಲಿ ಇಂದಿಗೂ ಪೋಲಿಯೋ ಪ್ರಕರಣಗಳು ಕಂಡುಬರುತ್ತಿವೆ. ಆದ್ದರಿಂದ ಭಾರತದಲ್ಲಿಯೂ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹಾಕಿಸಬೇಕು ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎಸ್​.ಬಸವರಾಜು ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪಲ್ಸ್​ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸೀನಿಯರ್​ ಫಾರ್ಮಸಿಸ್ಟ್​ ಕುಮದಾ ಮಾತನಾಡಿ, ಪಟ್ಟಣದ ಬಸ್​ ನಿಲ್ದಾಣ, ಅಂಗನವಾಡಿ ಕೇಂದ್ರಗಳು ಹಾಗೂ ಆಸ್ಪತ್ರೆ ಸೇರಿ ಎಲ್ಲೆಡೆ ಪೋಲಿಯೋ ಹನಿ ವಿತರಿಸಲು ವ್ಯವಸ್ಥೆ ಮಾಡಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಸೋಮವಾರವೂ ಆಸ್ಪತ್ರೆಯಲ್ಲಿ ಪೋಲಿಯೋ ಹನಿ ನೀಡಲಾಗುತ್ತಿದ್ದು, ನಂತರ ಆರೋಗ್ಯ ಕಾರ್ಯಕರ್ತರು ಮನೆಮನೆಗೂ ಭೇಟಿ ನೀಡಿ ಪೋಲಿಯೋ ಹನಿ ಹಾಕಲಿದ್ದಾರೆ ಎಂದರು.
ಆಸ್ಪತ್ರೆ ಸೂಪರ್​ಡೆಂಟ್​ ಗುರು ಮಂಜುನಾಥ್​, ಫಾರ್ಮಸಿಸ್ಟ್​ ಬಿಂದು, ಲ್ಯಾಬ್​ ಟೆಕ್ನಿಷಿಯನ್ಸ್​ಗಳಾದ ಮಂಜುನಾಥ್​, ರಾಜೇಶ್ವರಿ, ಸುಮಾ ಇತರರು ಇದ್ದರು.