ಸುರಪುರದಲ್ಲಿ ಬುಧವಾರ ಕರೆದಿದ್ದ ಪೆಟ್ರೋಲ್​ ಬಂಕ್​ ಮಾಲೀಕರ ಸಭೆಯಲ್ಲಿ ಡಿವೈಎಸ್​ಪಿ ಜಾವೇದ್​ ಇನಾಮದಾರ್​ ಮಾತನಾಡಿದರು. ಪಿಐ ಉಮೇಶ ನಾಯಕ ಇದ್ದರು. 
ರಾಜ್ಯ

ಆತಂಕ ಬೇಡ ಇಂಧನಕ್ಕಿಲ್ಲ ಕೊರತೆ

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್​ಪಿ ಜಾವೇದ್​ ಇನಾಮದಾರ್​ ಮನವಿ
  • ಪೆಟ್ರೋಲ್​ ಬಂಕ್​ ಡೀರ್ಲಸ್​ ಸಭೆ
ಸುರಪುರ: ತಾಲೂಕಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದಾಸ್ತಾನು ಇದ್ದು, ಕೊರತೆ ಇಲ್ಲ. ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಡಿವೈಎಸ್​ಪಿ ಜಾವೇದ್​ ಇನಾಮದಾರ್​ ಹೇಳಿದರು.
ನಗರದ ಪೊಲೀಸ್​ ಠಾಣೆಯಲ್ಲಿ ಬುಧವಾರ ಸಂಜೆ ಕರೆದಿದ್ದ ಪೆಟ್ರೋಲ್​ ಬಂಕ್​ ಡೀಲರ್​ಗಳ ಸಭೆಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಸ್ಟಾಕ್​ ಇದ್ದು, ವದಂತಿಗಳಿಗೆ ಕಿವಿಗೊಡಬಾರದು. ಒಂದು ವಾರ ಆಗುವಷ್ಟು ಇಂಧನ ದಾಸ್ತಾನು ಇದೆ ಎಂದು ತಿಳಿಸಿದರು.
ಬಂಕ್​ ಮಾಲೀಕರು ಯಾವ ಕಾರಣಕ್ಕೂ ಸ್ಟಾಕ್​ ಮಾಡಿಡಬಾರದು. ಕಾಳಸಂತೆ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ. ಗ್ರಾಹಕರು ಕೂಡ ಬಾಟಲಿ ಮತ್ತು ಕ್ಯಾನ್​ಗಳಲ್ಲಿ ಇಂಧನ ತುಂಬಿಸಿಕೊಳ್ಳುವಂತಿಲ್ಲ. ಅಗತ್ಯಕ್ಕೆ ತಕ್ಕಂತೆ ಪಡೆದು ಸಹಕರಿಸಬೇಕು ಎಂದು ಕೋರಿದರು.
ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಇಂಧನ ಸರಳವಾಗಿ ಸರಬರಾಜು ಇದೆ. ಏನೇ ಸಮಸ್ಯೆ ಇದ್ದರೂ ಗ್ರಾಹಕರು ಮತ್ತು ಬಂಕ್​ನವರು ಪೊಲೀಸ್​ ಇಲಾಖೆಗೆ ತಿಳಿಸತಕ್ಕದ್ದು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಪಿಐ ಉಮೇಶ ನಾಯಕ ಮಾತನಾಡಿದರು.