Don't make false accusations.
ಗುಬ್ಬಿ: ದಲಿತರು ಹಾಗೂ ಎಲ್ಲ ಜನಾಂಗದವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೇನೆ, ಸುಖಾ ಸುಮ್ಮನೆ ನನ್ನ ಮೇಲೆ ಸುಳ್ಳು ಅಪವಾದ ಹೊರಿಸುವುದು ಸರಿಯಲ್ಲ ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ತಿಳಿಸಿದ್ದಾರೆ.
ತಾಲೂಕಿನ ಸುರಿಗೇನಹಳ್ಳಿಯಲ್ಲಿ ನೂತನ ಹಾಲಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ,ತಾಲೂಕಿನೆಲ್ಲೆಡೆ ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಹೋರಾಟ ಮಾಡುತ್ತಿದ್ದೇನೆ. ಹಸುಗಳ ಮರಣ ಪ್ರಮಾಣ ಗುಬ್ಬಿ ತಾಲೂಕಿನಲ್ಲಿ ಣಿಸಿದೆ. ನಮ್ಮ ತುಮುಲ್ ವೈದ್ಯರು ಹಾಗೂ ಅಧಿಕಾರಿಗಳು ಅವರ ಶ್ರಮ ಬಹಳ ಮುಖ್ಯವಾಗಿದೆ ಎಂದರು.
ಈ ಹಿಂದೆ ತಾಲೂಕಿನಲ್ಲಿ 83 ಸಾವಿರ ಲೀಟರ್ ಹಾಲು ಮಾತ್ರ ತುಮುಲ್ ಸರಬರಾಜಾಗುತ್ತಿತ್ತು. ನಾನು
ನಿರ್ದೇಶಕಿಯಾಗಿ ಬಂದ ಮೇಲೆ 1.28 ಲಕ್ಷ ಲೀಟರ್ಗೆಏರಿದೆ. ನಮ್ಮ ತಾಲೂಕಿನಲ್ಲಿ ಖಾಸಗಿ ಡೈರಿಗಳು ಇವೆ ಎಂದರು.