Don't look at caste in the service you do. 
ರಾಜ್ಯ

ಮಾಡುವ ಸೇವೆಯಲ್ಲಿ ಜಾತಿ ನೋಡಬೇಡಿ

ತುರುವೇಕೆರೆ: ಸವಾಜ ಸೇವೆಗೆ ಜಾತಿ ಮುಖ್ಯವಾಗಬಾರದು, ವಾಡುವ ಸೇವೆ ಮುಖ್ಯವಾಗಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ನೊಳಂಬ ಲಿಂಗಾಯಿತ ಉಪ ಸಮಿತಿ ಹಾಗೂ ಶಾಸಕ ಅನುದಾನದಿಂದ 35 ಲಕ್ಷ ರೂ. ವೆಚ್ಚದಲ್ಲಿ ನೂತನ ಗಣಪತಿ ದೇವಾಲಯ ಮತ್ತು ಶೌಚಗೃಹ ನಿರ್ವಾಣಕ್ಕೆ ಭೂಮಿಪೂಜೆ ನೆರವೇರಿಸಿ ವಾತನಾಡಿ, ಸಮುದಾಯ ಭವನಗಳಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ತಾಲೂಕಿನ ದಂಡಿನಶಿವರ ರಸ್ತೆಯ ಸಾರಿಗೆಹಳ್ಳಿ ಕೆರೆ ಕೋಡಿಗೆ ಸುವಾರು 4 ಕೋಟಿ 50 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ವಾಣ ವಾಡಲು ಅನುದಾನ ನೀಡಲಾಗಿದೆ. ಆದರೆ ಕೆಲವು ತಾಂತ್ರಿಕ ತೊಡಕುಗಳಿಂದ ಕಾಮಗಾರಿ ಪ್ರಾರಂಬವಾಗಿಲ್ಲ. ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದರು.
ನೊಳಂಬ ಲಿಂಗಾಯಿತ ರಾಜ್ಯ ಸಂದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್, ಗೌರವ ಕಾರ್ಯದರ್ಶಿ ಕೆ.ಬಿ.ಶಶಿಧರ್, ನಿರ್ದೆಶಕ ಎಂ.ದೇವರಾಜು, ನೊಳಂಬ ಲಿಂಗಾಯಿತ ತಾಲೂಕು ಸಂದ ಅಧ್ಯಕ್ಷ ಎಸ್.ಎಂ.ಕುವಾರ್ ಸ್ವಾಮಿ, ಕಾರ್ಯದರ್ಶಿ ಶಿವಕುವಾರ್, ಶೈಲೇಶ್, ತಾಂತ್ರಿಕ ಸಲಹೆಗಾರರು ಎಂ.ಎನ್.ಪ್ರಸಾದ್ ಇದ್ದರು.