ಆಳಂದ ತಾಲೂಕಿನ ನರೋಣಾದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಶ್ರೀ ನಿಜಗುಣಾನಂದ ಸ್ವಾಮೀಜಿ, ಶ್ರೀ ಗುರು ಮಹಾಂತ ಸ್ವಾಮೀಜಿ, ಡಿಜಿ ಸಾಗರ, ಶಿವಶಂಕರ ವಾಲಿ, ಎಸ್.ಪಿ.ಸುಳ್ಳದ, ನಾಗಪ್ಪ ಕೋರೆ ಇತರರಿದ್ದರು.
- ಶ್ರೀ ನಿಜಗುಣಾನಂದ ಸ್ವಾಮೀಜಿ ಕರೆ
- ನರೋಣಾದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ
ಆಳಂದ: ನೀವೆಲ್ಲರೂ ಅಭಿಮಾನಿಗಳಾಗದೆ ಅನುಭವಿಗಳಾಗಬೇಕು. ಮನುಷ್ಯ ಸಮಾಜದಲ್ಲಿ ತಾರತಮ್ಯವಿದೆ, ಆದರೆ ದೇವರಲ್ಲಿ ಇಲ್ಲ. ಸೂರ್ಯ& ಚಂದ್ರನಂತೆ ಅಂಬೇಡ್ಕರ್ ಅಜರಾಮರ ಎಂದು ಬೈಲೂರಿನ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನರೋಣಾ ಗ್ರಾಮದ ಹನುಮಾನ ಮಂದಿರ ಸಂತೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಹಾಗೂ ಬಹಿರಂಗ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾಮಿಗಳು ಶಾಪ ಕೊಡುವವರು ಆಗದೆ, ಜನರ ಪಾಪ ಕಳೆಯಬೇಕು. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ. ಇವರು ಮನುಕುಲದ ಉದ್ಧಾರಕರು. ಯುವ ಪೀಳಿಗೆ ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ನಡೆಸಬೇಕು ಎಂದು ಕರೆ ನೀಡಿದರು.
ದಲಿತ ಸಂರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಪ್ರಾಸ್ತಾವಿಕ ಮಾತನಾಡಿ, ಸುಮಾರು 60 ವರ್ಷಗಳಿಂದ ಅಂಬೇಡ್ಕರ್ ಜಯಂತಿ ಮಾಡುತ್ತಿದ್ದೇವೆ. 1986ರಲ್ಲಿ ಬಿ.ಆರ್.ಪಾಟೀಲ್ ಶಾಸಕರಾದ ಬಳಿಕ ಅವರೊಂದಿಗೆ ಸೇರಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜಯಂತಿ ಆಚರಿಸಲು ಪ್ರಾರಂಭಿಸಿದೇವು. ಮಹಾತ್ಮರ ವಿಚಾರಗಳು ಹಾಗೂ ಶ್ರೇಷ್ಠ ಸಂವಿಧಾನ ಉಳಿಯಬೇಕು ಎಂದರು.
ಶ್ರೀ ಗುರು ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಶೋಕ ಅಂಬಲಿಗೆ, ಎಸ್.ಪಿ.ಸುಳ್ಳದ್, ಅಮೃತ್ ಬೆಳಮಗಿ, ಉಮೇಶ ನರೋಣಾ, ನಾಗಪ್ಪ ಕೋರೆ, ಶಿವಪುತ್ರ ರಾಗಿ, ಶಿವಶಂಕರ ವಾಲಿ, ಚಂದ್ರಕಾಂತ ಸಂಗೊಳಗಿ, ಶಿವಲಿಂಗಯ್ಯ ಸ್ವಾಮಿ, ಸಂಗಮೇಶ ವಾಲಿ, ಬಾಬುರಾವ ವಾಲಿ, ಈರಣ್ಣ ಚರ್ಪಳ್ಳಿ, ಬಾಬುರಾವ ಕೋರೆ, ದಿಲೀಪ ಕಡ್ಡಿ, ರಾಜೇಶ ಕೋರೆ, ಮಿಥುನ ರಾಗಿ, ಮಲ್ಲಿಕಾರ್ಜುನ ಕರಕೂನ, ವಿಜಯಕುಮಾರ ಮೇಲ್ಕೇರಿ, ಸಾಗರ ಜೋಗನ, ಅನಿಲ ದೇಕುನ, ಶ್ರೀಕಾಂತ ಕೋರೆ ಇತರರಿದ್ದರು.
ಮೂಢನಂಬಿಕೆ ವಿರುದ್ಧ ಹೋರಾಟ ಅಗತ್ಯ
ಜಾತಿ ತಾರತಮ್ಯ, ಮೂಢನಂಬಿಕೆ, ಕಂದಾಚಾರ ಮೊದಲಾದ ಸಾಮಾಜಿಕ ಪಿಡುಗುಗಳೆಲ್ಲ ಸಮಾಜದಲ್ಲಿ ಮತ್ತೆ ತಲೆ ಎತ್ತುತ್ತಿವೆ. ಈ ಸಮಯದಲ್ಲಿ ಹೋರಾಟಕ್ಕೆ ನಮಗೆ ಮೂವರು ನಾಯಕರ ತತ್ವ&ಸಿದ್ಧಾಂತಗಳೇ ಅಸ. ಭಾರತವೆಂದರೆ ಜಾತ್ಯತಿತ ದೊಡ್ಡ ಹಡಗು, ಇದರಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಚಾರ್ಯ, ಬುದ್ಧ, ಮಹಾವೀರ, ಬಸವಣ್ಣ ಹಾಗೂ ಅಂಬೇಡ್ಕರ್ ಸೇರಿ ಅನೇಕರು ಕುಳಿತು ಪ್ರಯಾಣಿಸಿದ್ದಾರೆ. ಹೊರಗಡೆಯಿಂದ ಬಂದ ಇಸ್ಲಾಂ, ಕೆಸ್ತ ಧರ್ಮವನ್ನು ಭಾರತ ಮಾತೆ ಸಂರಸುತ್ತಿದ್ದಾಳೆ. ಆದ್ದರಿಂದ ನಾವೆಲ್ಲರೂ ಸಮಾನತೆ ಹಾಗೂ ವಿಚಾರವಂತಿಕೆಯಿಂದ ಬಾಳಬೇಕು. ಮನುಷ್ಯ ಧರ್ಮ, ಕಾಯಕ, ಪ್ರೀತಿ ಹಾಗೂ ಮನುಷ್ಯತ್ವ ಶ್ರೇಷ್ಠವಾಗಿದೆ ಎಂದು ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.