ಪ್ರಾಣ ಕೊಟ್ಟೇವು ಭೂಮಿ ಕೊಡಲ್ಲ life 
ರಾಜ್ಯ

ಪ್ರಾಣ ಕೊಟ್ಟೇವು ಭೂಮಿ ಕೊಡಲ್ಲ life

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ
  • ನ್ಯಾಯಾಲಯ ಆದೇಶವಿದ್ದರೂ ಉಳುಮೆಗೆ ಅಡ್ಡಿ
ಶ್ರೀನಿವಾಸಪುರ: ತಾಲೂಕಿನ ಕೇತಗಾನಹಳ್ಳಿಯ ಸರ್ವೇ ನಂ. 91ರಲ್ಲಿ 20 ಗುಂಟೆ, 1 ಮತ್ತು 2 ಎಕರೆಯಲ್ಲಿ ಹಲವು ರೈತರು 30 ವರ್ಷದಿಂದ ವ್ಯವಸಾಯ ಮಾಡುತ್ತಾ ಬಂದಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಬಂದು ಬೆಳೆ ನಾಶಪಡಿಸಿ, ಅನ್ಯಾಯ ಎಸಗಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋದರೂ ಸಹ, ಅಧಿಕಾರಿಗಳು ದರ್ಪ ಎಸಗುತ್ತಿದ್ದು, ಉಳಿಮೆಗೆ ಅವಕಾಶ ನೀಡದಿದ್ದರೆ ಸಾವಿಗೂ ಸಿದ್ಧರಿದ್ದೇವೆ ಎಂದು ಸುಮಾರು 15ಕ್ಕೂ ಹೆಚ್ಚು ರೈತರು ಅಸಮಾಧಾನ ವ್ಯಕ್ತಪಡಿದರು. life
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಕೇತಗನಹಳ್ಳಿ ರೈತ ನಾಗರಾಜ್​ ಮಾತನಾಡಿ, ಜನಪ್ರತಿನಿಧಿಗಳ ಸ್ಪಂದನೆ ಸಿಗಲಿಲ್ಲ. ನ್ಯಾಯಾಲಯದ ಆದೇಶವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಪ್ರಾಣ ಬಿಡುತ್ತೇವೆ ಹೊರತು ಭೂಮಿ ಬಿಡುವ ಪ್ರಶ್ನೆಯೇ ಇಲ್ಲ. 2 ವರ್ಷದ ಹಿಂದೆ ರಾತ್ರೋರಾತ್ರಿ ಏಕಾಏಕಿ ನೂರಾರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಮಾವಿನ ಮರಗಳು ಮತ್ತು ತೋಟಗಾರಿಕೆ ಬೆಳೆ ನಾಶಪಡಿಸಿ ರೈತರ ಊಟಕ್ಕೆ ಮಣ್ಣು ಹಾಕಿದರು. ಅದೂ ಸಾಲದೆ ಮನೆಗಳ ಮುಂಭಾಗ ಇರುವ ಟ್ರ್ಯಾಕ್ಟರ್​ಗಳನ್ನು ವಶಕ್ಕೆ ಪಡೆದು ನಮ್ಮ ಮೇಲೆಯೇ ಪ್ರಕರಣ ದಾಖಲು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
1997&2023ರಲ್ಲಿ ನ್ಯಾಯಾಲಯದ ಆದೇಶ ನಮ್ಮ ಪರವಾಗಿದೆ. ನಮ್ಮಲ್ಲಿ ದಾಖಲೆ ಲಭ್ಯವಿದ್ದು, ಅಧಿಕಾರಿಗಳಿಗೆ ದಾಖಲೆಗಳ ಆದೇಶ ಒದಗಿಸಿದ್ದೇವೆ. ಪೊಲೀಸ್​ ಇಲಾಖೆಗೆ ರಕ್ಷಣೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಶಿವರಾಂ ಶರ್ಮ ಮಾತನಾಡಿ, ಪ್ರಜಾಪ್ರಭುತ್ವ ಸರ್ಕಾರ ನಮಗಿದ್ದು ಚುನಾಯಿತ ಪ್ರತಿನಿಧಿಗಳ ಮಾತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಗೌರವ ನೀಡದೆ ಇರುವುದು ವಿಷಾದವಾಗಿದೆ. ಜನ ಪ್ರತಿನಿಧಿಗಳ ಹಕ್ಕು, ಕರ್ತವ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ, ಸಂಬಂಧಿಸಿದ ಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರೈತರು ತಾಳ್ಮೆಯಿಂದ ಕಾನೂನಿಗೆ ತಲೆಬಾಗಿ ಇದ್ದಾರೆ ಎಂದರು.