ಬನಹಟ್ಟಿ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮಕ್ಕೆ ನಿವತ್ತ ಮುಖ್ಯ ಶಿಕ್ಷಕ ರಾಜೇಂದ್ರ ನಡುವಿನಮನಿ ಚಾಲನೆ ನೀಡಿದರು. ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಕೆ.ಡಿ. ಪತ್ರಿ, ಬಳವಂತ ದೇಶಪಾಂಡೆ, ಬಸವಂತ ಮಿಳ್ಳಿ, ಬಿ.ಎನ್. ಗಸ್ತಿ, ಬರಮಪ್ಪ ಬಲತಿ, ರಾಮಚಂದ್ರ ಬಲತಿ ಇತರರಿದ್ದರು. 
ರಾಜ್ಯ

ಉನ್ನತ ಸ್ಥಾನವಿದ್ದರೂ ಸಂಸ್ಕೃತಿ ಮರೆಯಬೇಡಿ

ಪ್ರಮುಖ ಮುಖ್ಯಾಂಶಗಳು

  • ರಾಜೇಂದ್ರ ನಡುವಿನಮನಿ ಹೇಳಿಕೆ
  • ಗುರುವಂದನಾ ಕಾರ್ಯಕ್ರಮ
ರಬಕವಿ/ಬನಹಟ್ಟಿ: ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಗೆ ಗುರು-ಶಿಷ್ಯರ ಅವಿನಾಭಾವ ಸಂಬಂಧ ಪ್ರಮುಖ ಸಂಕೇತವಾಗಿದೆ. ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಮಾನ ಪಡೆದರೂ ಸಂಸ್ಕೃತಿಯನ್ನು ಮರೆಯದೆ, ತಂದೆ-ತಾಯಿಯ ಪಾಲನೆಗೆ ಆದ್ಯತೆ ನೀಡಬೇಕು ಎಂದು ನಿವತ್ತ ಮುಖ್ಯ ಶಿಕ್ಷಕ ರಾಜೇಂದ್ರ ನಡುವಿನಮನಿ ಹೇಳಿದರು.
ಬನಹಟ್ಟಿಯ ನೀಲಕಂಠೇಶ್ವರಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯ 1988-89ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡು, ನಾಲ್ಕು ದಶಕಗಳ ನಂತರ ಸ್ನೇಹಿತರೊಂದಿಗೆ ಮಿಲನಗೊಂಡ ಸಂತೋಷವನ್ನು ವ್ಯಕ್ತಪಡಿಸಿದರು. ಕೆಲವರು ಸ್ನೇಹಿತರನ್ನು ಗುರುತಿಸಲು ಸಾಧ್ಯವಾಗದೆ ಆಶ್ಚರ್ಯ ವ್ಯಕ್ತಪಡಿಸಿದರೆ, ಗುರುತಿಸಿಕೊಂಡವರು ತಮ್ಮ ಕುಟುಂಬ ಸದಸ್ಯರನ್ನು ಪರಿಚಯಿಸಿದರು.
ನಿವತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೆ.ಡಿ. ಪತ್ರಿ, ಬಳವಂತ ದೇಶಪಾಂಡೆ, ಬಸವಂತ ಮಿಳ್ಳಿ, ಬಿ.ಎನ್. ಗಸ್ತಿ, ಬರಮಪ್ಪ ಬಲತಿ, ರಾಮಚಂದ್ರ ಬಲತಿ, ಮುಖಂಡರಾದ ಬಸವರಾಜ ಬಾಡಗಿ, ಅನ್ವರ ಜಮಾದಾರ, ಮಾರುತಿ ಪವಾರ, ಶ್ರೀಶೈಲ ಬಡಿಗೇರ, ಮಲ್ಲು ಕುಚನೂರ, ಶಂಕರ ಹಡಲಗಿ, ರವಿ ಕಂದಗನೂರ, ವೆಂಕಣ್ಣ ವಾಜಂತ್ರಿ, ಮಹಾನಂದಾ ಬಾಗೇವಾಡಿ, ಕವಿತಾ ಭೂತಿ, ಸಾವಿತ್ರಿ ವಡೋಡಗಿ, ಮಾಲತಿ ಭಜಂತ್ರಿ, ಭಾರತಿ ಬಂಗಿ ಮತ್ತಿತರರಿದ್ದರು.