ಚನ್ನಪಟ್ಟಣ ತಾಲೂಕು ಸಂತೆ ಮೊಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬೇರೊಂದು ಶಾಲೆಯೊಂದಿಗೆ ವಿಲೀನಗೊಳಿಸಿ, ಮುಚ್ಚುವುದನ್ನು ಖಂಡಿಸಿ ಎಐಡಿಎಸ್​ಒ ವಿದ್ಯಾರ್ಥಿ ಸಂಟನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು. ಎಐಡಿಎಸ್​ಒ ರಾಜ್ಯ ಖಜಾಂಚಿ ಶುಭಾಷ್​, ಜಿಲ್ಲಾ ಸಂಚಾಲಕ ರೋಹಿತ್​, ಗ್ರಾಮದ ಮುಖಂಡರಾದ ಯಜಮಾನ್​ ಮಂಜುನಾಥ್​, ಸಿದ್ದೇಗೌಡ ಹಾಗೂ ಇತರರಿದ್ದರು. 
ರಾಜ್ಯ

ವಿಲೀನದ ನೆಪದಲ್ಲಿ ಸರ್ಕಾರಿ ಶಾಲೆ ಮುಚ್ಚಬೇಡಿ | government schools

ಚನ್ನಪಟ್ಟಣ: ವಿಲೀನದ ಹೆಸರಿನಲ್ಲಿ ಸಂತೆ ಮೊಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಎಐಡಿಎಸ್​ಒ ಸಂಟನೆಯಿಂದ ಗುರುವಾರ ಶಾಲಾವರಣದಲ್ಲಿ ಪ್ರತಿಭಟಿಸಲಾಯಿತು.
ಈವೇಳೆ ಎಐಡಿಎಸ್​ಒ ರಾಜ್ಯ ಖಜಾಂಚಿ ಶುಭಾಷ್​ ಬೆಟ್ಟದಕೊಪ್ಪ ಮಾತನಾಡಿ, ಸರ್ಕಾರ 800 ಶಾಲೆಗಳನ್ನು ಮ್ಯಾಗ್ನೆಟ್​ ಶಾಲೆಗಳೆಂದು ಗುರುತಿಸಿದ್ದು, ಕರ್ನಾಟಕ ಪಬ್ಲಿಕ್​ ಶಾಲೆಯ ಸುತ್ತಮುತ್ತಲಿನ 1ರಿಂದ 5 ಕಿ.ಮೀ ವ್ಯಾಪ್ತಿಯ ಹಾಗೂ 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ಕೆಪಿಎಸ್​ ಶಾಲೆಗೆ ವಿಲೀನಗೊಳಿಸುವುದು ಈ ಯೋಜನೆಯ ಉದ್ದೇಶ.
ತಾಲೂಕಿನ ಹೊಂಗನೂರಿನ ಕೆಪಿಎಸ್​ ಮಾಗ್ನೆಟ್​ ಶಾಲೆಗೆ ಹೊಂಗನೂರಿನ 6 ಕಿಮೀ ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು, ವಿದ್ಯಾರ್ಥಿ, ಶಿಕರು ಮತ್ತು ಪರಿಕರಗಳ ಸಮೇತ ವಿಲೀನಗೊಳಿಸಲು ಸರ್ಕಾರ ಆದೇಶಿಸಿದೆ. 110ಕ್ಕೂ ಅಧಿಕ ಮಕ್ಕಳ ದಾಖಲಾತಿ ಹೊಂದಿರುವ ಶಾಲೆಗಳನ್ನೂ ಮುಚ್ಚಲು ಹೊರಟಿರುವುದು ಖಂಡನೀಯ ಹಾಗೂ ನಿಯಮ ಬಾಹಿರ ಎಂದು ಶುಭಾಷ್​ ಆಕ್ರೋಶ ವ್ಯಕ್ತಪಡಿಸಿದರು.
ಶೈಣಿಕ ನೀತಿಗಳು ಹಾಗೂ ಮಹನೀಹರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರವು ತಳಮಟ್ಟದ ಶಾಲೆಗಳನ್ನು ಮುಚ್ಚುತ್ತಿದೆ. ಇದನ್ನು ವಿರೋಧಿಸಿ ರಾಜ್ಯದಲ್ಲಿ ಬೃಹತ್​ ಹೋರಾಟ ಕಟ್ಟುವುದು ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಣ&ಪ್ರೇಮಿಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಶಿಣವನ್ನು ರಸಲು ಮತ್ತೊಂದು ನವೋದಯ ಚಳವಳಿ ರೂಪಿಸಬೇಲು ಎಂದು ಶುಭಾಷ್​ ಕರೆ ನೀಡಿದರು.
ಶಿಕ್ಷಣದಿಂದ ದೂರ ಉಳಿಯುವ ಆತಂಕ: ಕೆಪಿಎಸ್​ ಶಾಲೆಗಳನ್ನು ತೆರೆಯುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗ್ರಾಪಂಗೆ ಮಾತ್ರ ಒಂದು ಶಾಲೆಗಳನ್ನು ತೆರೆಯುವುದನ್ನು ನಾವು ವಿರೋಧಿಸುತ್ತೇವೆ. ರಾಜ್ಯದಲ್ಲಿ ಒಟ್ಟು 49,600 ಸರ್ಕಾರಿ ಶಾಲೆಗಳಿದೆ. ಆದರೆ, ಗ್ರಾಮ ಪಂಚಾಯಿತಿಗಳು ಇರುವುದು ಕೇವಲ 5,900 ಮಾತ್ರ. ಈ ನಿಯಮ ಜಾರಿಯಾದರೆ ಕೇವಲ 5,900 ಶಾಲೆಗಳು ಮಾತ್ರ ಉಳಿಯುತ್ತವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಪ್ರತಿ ಹಳ್ಳಿಗೆ ಬಸ್​ ಬಿಡುತ್ತೇವೆ ಎನ್ನುತ್ತಿದೆ. ಆದರೆ, ಈಗಲೂ ಎಷ್ಟೋ ಹಳ್ಳಿಗಳಲ್ಲಿ ಬಸ್​ ಇಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗ ದೂರದ ಶಾಲೆಗಳನ್ನು ವಿಲೀನಗೊಳಿಸುವುದರಿಂದ ಬಡ ಮಕ್ಕಳು ಶಿಣದಿಂದ ದೂರ ಉಳಿಯುವ ಆತಂಕವಿದೆ ಎಂದು ಶುಭಾಷ್​ ಅಸಮಾಧಾನ ವ್ಯಕ್ತಪಡಿಸಿದರು.