ಕವಲೂರು ಗ್ರಾಮದಲ್ಲಿ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನದ ಜಾಗೃತಿ ಜಾಥಾಕ್ಕೆ ಮುಖಂಡರು ಚಾಲನೆ ನೀಡಿದರು. ಪ್ರಮುಖರಾದ ಶರಣಪ್ಪ, ವಿಜಯಕುಮಾರ, ನಿಂಗಪ್ಪ, ಹೊನ್ನಕೆರಪ್ಪ, ನಾಗರಾಜ ಇತರರಿದ್ದರು. 
ರಾಜ್ಯ

ಖಾಸಗಿ ಶಾಲೆಗಳ ವ್ಯಾಮೋಹ ಬೇಡ

ಕವಲೂರು: ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣದ ಮಹತ್ವ ಮತ್ತಷ್ಟು ಹೆಚ್ಚಾಗಿದ್ದು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಆರು ವರ್ಷ ತುಂಬಿದ ಪ್ರತಿ ಮಗುವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಮಾಳೆಕೊಪ್ಪ ಹೇಳಿದರು.
ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎಸ್‌ಡಿಎಂಸಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. 
ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಿದ್ದು ಹಣ ಪೋಲು ಮಾಡದೆ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ ಪೂಜಾರ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಕೆಲಸ ಮಾಡಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು. 
ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಪೂಜಾರ, ಪಿಎಸಿಎಸ್ ಅಧ್ಯಕ್ಷ ಹೊನ್ನಕೆರಪ್ಪ ಮುಕ್ಕಣ್ಣವರ, ಮುಖ್ಯಶಿಕ್ಷಕ ಜಿ.ಎಸ್. ಗೌಡರ, ಅಂದಪ್ಪ ವಾಲೀಕಾರ, ಮಾರುತಿ, ಯಶೋಧಾ, ಪ್ರಮುಖರಾದ ನಾಗರಾಜ ಕಗ್ಗಲ್, ಮಲ್ಲಣ್ಣ ಗೊರವರ, ಮಲ್ಲಿಕಾರ್ಜುನ, ನಜೀರ್ ಸಾಬ್, ಮಹಾಲಿಂಗಪ್ಪ, ಮುತ್ತಯ್ಯ, ಅಶೋಕ, ಹನುಮಂತಪ್ಪ, ಸುರೇಶ, ಗೋಪಾಲ, ಇಮಾಮ್ ಸಾಬ್, ಕಲಿಕೆ ಟಾಟಾ ಟ್ರಸ್ಟ್  ಸಂಯೋಜಕ ಅರುಣಕುಮಾರ, ಹನುಮಂತಪ್ಪ ಇತರರಿದ್ದರು.

ಸಾಂಸ್ಕೃತಿಕ ಮೆರವಣಿಗೆ: ಆಂದೋಲನ ಅಂಗವಾಗಿ ಅಲಂಕೃತ ಎತ್ತಿನ ಬಂಡಿ, ಟ್ರಾೃಕ್ಟರ್‌ನಲ್ಲಿ ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಶ ಧರಿಸಿ ಎಲ್ಲರ ಗಮನ ಸೆಳೆದರು. ಮಹಿಳೆಯರು ಪೂರ್ಣಕುಂಭಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರೆ, ವಾದ್ಯ ಮೇಳ ಜಾಗೃತಿ ಜಾಥಾಕ್ಕೆ ಕಳೆ ತಂದಿತು.