ದೇವನಹಳ್ಳಿ ಡಿಎಚ್.ಎಲ್.ಸಭಾಂಗಣದಲ್ಲಿ ಸಿದ್ಧಾರ್ಥ ಚಾರಿಟಬಲ್ ಟ್ರಸ್ಟ್ನಿಂದ ಆಯೋಜಿಸಿದ್ದಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಿದ್ಧಾಥ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಕೆ.ವಿ.ಸ್ವಾಮಿ, ಯುವ ಕಾಂಗ್ರೆಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಮಾರುತಿ, ಸಮಾಜ ಸೇವಕ ಶೆಟ್ಟಿಗೆರೆ ರಾಜಣ್ಣ ಇತರರು ಇದ್ದರು.
ದೇವನಹಳ್ಳಿ : ಸರ್ಕಾರಿ ಶಾಲೆಗಳೆಂದು ಮಕ್ಕಳಾಗಲಿ, ಪಾಲಕರಾಗಲಿ ಕೀಳರಿಮೆ ತೋರಬಾರದು ಎಂದು ರಾಜ್ಯ ಕೊಳಚೆ ನಿಮೂರ್ಲನಾ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಹೇಳಿದರು.
ಪಟ್ಟಣದ ಡಿಎಚ್ಎಲ್ ಸಭಾಂಗಣದಲ್ಲಿ ಸಿದ್ಧಾರ್ಥ ಚಾರಿಟಬಲ್ ಟ್ರಸ್ಟ್ನಿಂದ ಆಯೋಜಿಸಿದ್ದ ಎರಡನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಸೇರಿದಂತೆ ದೇಶದ ಉನ್ನತ ಹುದ್ದೆಗಳಲ್ಲಿರುವವರು ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು ಓದಿದ್ದೂ ಸರ್ಕಾರಿ ಶಾಲೆಗಳಲ್ಲಿ. ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇರುವುದಿಲ್ಲ ಎಂದರು.
ರ್ಯಾಂಕ್ ಬಂದವರನ್ನು ನೋಡಿ ಜಸ್ಟ್ ಪಾಸದವರು ಹತಾಶರಾಗುವುದು ಬೇಡ. ಅಂಕಗಳಿಗಾಗಿ ಶಿಕ್ಷಣವಲ್ಲ, ನಿಮ್ಮ ಜ್ಞಾನಕ್ಕಾಗಿ ಶಿಕ್ಷಣ. ಎಲ್ಲರಲ್ಲೂ ಒಂದು ಪ್ರತಿಭಾ ಶಕ್ತಿ ಇರುತ್ತದೆ. ಎಲ್ಲರಿಗೂ ವಿಶೇಷ ಅವಕಾಶಗಳು ಸಿಗಲಿದೆ. ಹೆಚ್ಚು ಅಂಕ ಗಳಿಸಿದವರು ಉತ್ತಮ ಜ್ಞಾನಿಗಳು, ಕಡಿಮೆ ಅಂಕ ಪಡೆದವರು ಜ್ಞಾನವಂತರಲ್ಲ ಎಂಬ ಮನೋಭಾವವನ್ನು ಪಾಲಕರು ಮತ್ತು ಉದ್ಯೋಗ ನೀಡುವವರು ಬಿಡಬೇಕು. ಜ್ಞಾನ, ಅನುಭವಕ್ಕೆ ಅವಕಾಶ ನೀಡಬೇಕು ಎಂದರು.
ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸಾಧಿಸುವ ಗುರಿ, ಛಲದೊಂದಿಗೆ ನಿಮ್ಮ ಶಿಕ್ಷಣ ಮುಂದುವರಿಸಿ. ನೀವು ಅಂದುಕೊಂಡ ಗುರಿ ಮುಟ್ಟಬಹುದು. ಶತಶತಮಾನಗಳಿಂದ ಶಿಕ್ಷಣ ಕೆಲವರ ಸ್ವತ್ತಾಗಿತ್ತು. ಸ್ವಾತಂತ್ರ$್ಯ ನಂತರ ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ಸರ್ವರಿಗೂ ಶಿಕ್ಷಣದ ಹಕ್ಕು ನಿಡಿದ ಬಳಿಕ ಶೋಷಿತ ಸಮುದಾಯದ ನಮ್ಮಂತವಹರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ತ್ರಿಮೂರ್ತಿ ಮಾತನಾಡಿ, ನಮ್ಮ ಜನಾಂಗ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದೆ ಬರಬೇಕೇಂದು ಟ್ರಸ್ಟ್ಶ್ರಮಿಸುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮೂರು ಪಟ್ಟು ಹೆಚ್ಚು ಮಕ್ಕಳನ್ನು ಅಂದರೆ 180ಮಂದಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಹರ್ಷ ತಂದಿದೆ ಎಂದರು.
ಚಿಕ್ಕಮಗಳೂರು ತಹಸೀಲ್ದಾರ್ ಅನಿಲ್ಕುಮಾರ್ ಅರೋಳಿಕರ್, ಜಿಪಂ ಮಾಜಿ ಅಧ್ಯಕ್ಷ ಜಕ್ಕೂರು ರವಿಕುಮಾರ್,ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ಸಮಾಜ ಸೇವಕ ಶೆಟ್ಟಿಗೆರೆ ರಾಜಣ್ಣ, ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಮಾರುತಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಲೋಕೇಶ್, ಕೆಪಿಸಿಸಿ ವಕ್ತಾರ ಜಿ.ಲಕ್ಷಿ$್ಮಪತಿ, ಪ್ರೊ.ರಮೇಶ್, ಪ್ರೊ.ಪೆರಿಯಾರ್, ಸಿದ್ಧಾರ್ಥ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಕೆ.ವಿ.ಸ್ವಾಮಿ, ಅಧ್ಯಕ್ಷ ಎ.ತ್ರಿಮೂರ್ತಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಗಾಂಧಿ, ಖಜಾಂಚಿ ಮುನಿರಾಜು, ಗ್ರಾಪಂ ಕಾರ್ಯದರ್ಶಿಗಳ ಸಂಘದ ರಾಜ್ಯಾಧ್ಯಕ್ಷೆ ಪದ್ಮಾ ಕೆ.ವಿ.ಸ್ವಾಮಿ, ವಕೀಲ ಮಹೇಶ್ದಾಸ್, ದಾಸರಬೀದಿ ಮುರಳಿ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.