Donation box money stolen from Saibaba temple
ಚಿಂತಾಮಣಿ: ಹಿರಣ್ಯಹಳ್ಳಿಯ ಶಿರಡಿ ಸಾಯಿ ಬಾಬಾ ದೇವಾಸ್ಥಾನದ ಹುಂಡಿ ಹಣ ಕಳುವಾಗಿದೆ.
ಕಾಗತಿ ಗ್ರಾಮದ ಶಿರಡಿ ಸಾಯಿ ಬಾಬಾ ಸೇವಾ ಟ್ರಸ್ಟ್ಯಿಂದ ನಿರ್ವಹಿಸಲ್ಪಡುತ್ತಿರುವ ದೇವಾಸ್ಥಾನದಲ್ಲಿ ಜು.20ರಂದು ಬೆಳಗ್ಗೆ ಪೂಜಾರಿಗಳು ಮತ್ತು ದೇಗುಲದ ಉಸ್ತುವಾರಿ ದಿಲೀಪ್ ಕುಮಾರ್ ಬಂದು ನೋಡಿದಾಗ ಹುಂಡಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ಹಣ ದೋಚಿ ದೇವಸ್ಥಾನದ ಹಿಂಭಾಗದಲ್ಲಿ ಹುಂಡಿ ಎಸೆದು ಹೋಗಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.