ಗುರುಮಠಕಲ್ನ ವಿವಿಧ ಹೋಟೆಲ್ಗಳಲ್ಲಿ ಅನಧಿಕೃತವಾಗಿ ಗೃಹಬಳಕೆ ಸಿಲಿಂಡರ್ ಉಪಯೋಗಿಸುತ್ತಿರುವುದನ್ನು ತಹಸೀಲ್ದಾರ್ ಚನ್ನಮಲ್ಲಪ್ಪ ಂಟಿ ನೇತೃತ್ವದಲ್ಲಿ ಪತ್ತೆ ಹಚ್ಚಿ ಸಿಲಿಂಡರ್ ವಶಪಡಿಸಿಕೊಂಡರು.ನರಸಿಂಹಸ್ವಾಮಿ, ಅಯ್ಯಪ್ಪ ಹೀರೆಮಠ, ಅನ್ವರ್ ಇತರರಿದ್ದರು.
ಗುರುಮಠಕಲ್: ಮಧ್ಯಪ್ರಾಚ್ಯ ಯುದ್ಧದ ಪರಿಹಾಣ ಸಿಲಿಂಡರ್ ಕೊರೆತೆಯಾಗಿದ್ದರಿಂದ ಅಕ್ರಮವಾಗಿ ಹೋಟೆಲ್ಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಏಳು ಸಿಲಿಂಡರ್ಗಳನ್ನು ವಶಪಡಿಸಿಕೊಂಡ ಟನೆ ಶುಕ್ರವಾರ ನಡೆದಿದೆ.
ಪಟ್ಟಣದ ವಿವಿಧ ಹೋಟೆಲ್ಗಳ ಮೇಲೆ ಅನಧಿಕೃತವಾಗಿ ಬಳಸುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಆಹಾರ ಇಲಾಖೆ ಉಪನಿರ್ದೇಶಕರು ಹಾಗೂ ತಹಸೀಲ್ದಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಗೃಹ ಬಳಕೆಯ ಏಳು ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ.
ನಂತರ ತಹಸೀಲ್ದಾರ್ ಚನ್ನಮಲ್ಲಪ್ಪ ಂಟಿ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಹಾಗೂ ಹೋಟೆಲ್ ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಗೃಹ ಬಳಕೆಯ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು. ಗ್ಯಾಸ್ ಸಿಲಿಂಡರ್ಗಳ ದುರುಪಯೋಗ ಆಗದಂತೆ ಜನರಿಗೆ ಅರಿವು ಮೂಡಿಸುವ ಕೆಲಸ ಗ್ಯಾಸ್ ಏಜೆನ್ಸಿಗಳು ಮಾಡಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ಉಪತಹಸೀಲ್ದಾರ್ ನರಸಿಂಹಸ್ವಾಮಿ, ಆಹಾರ ಇಲಾಖೆಯ ಅಯ್ಯಪ್ಪ ಹೀರೆಮಠ, ಅನ್ವರ್, ಗ್ಯಾಸ್ ಏಜೆನ್ಸಿ ಮಾಲಿಕರು ಬಸಪ್ಪ ಮೇಧಾ, ಮಲ್ಲಪ್ಪ, ದೇವಪ್ಪ ಇತರರಿದ್ದರು.