ಮಾನ್ವಿಯಲ್ಲಿ ಮಂಗಳವಾರ ವಿವಿಧ ಹೋಟೆಲ್‌ಗಳಲ್ಲಿ ಬಳಕೆ ಮಾಡುತ್ತಿದ್ದ ಗೃಹ ಬಳಕೆ ಸಿಲಿಂಡರ್‌ಗಳನ್ನು ತಹಸೀಲ್ದಾರ್ ಭೀಮರಾಯ್ ರಾಮಸಮುದ್ರ ವಶಪಡಿಸಿಕೊಂಡರು. ಆಹಾರ ನಿರೀಕ್ಷಕದ ದೇವರಾಜ್ ಇದ್ದರು. 
ರಾಜ್ಯ

ಹೋಟೆಲ್‌ಗಳಲ್ಲಿ ಗೃಹಬಳಕೆ ಸಿಲಿಂಡರ್, ಜಪ್ತಿ

ಮಾನ್ವಿ: ಗೃಹಬಳಕೆ ಅಡುಗೆ ಅನಿಲ ಉಪಯೋಗಿಸುತ್ತಿದ್ದ ವಿವಿಧ ಹೋಟೆಲ್‌ಗಳ ಮೇಲೆ ತಹಸೀಲ್ದಾರ್ ಭೀಮರಾಯ್ ರಾಮಸಮುದ್ರ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಿತು.
ಪಟ್ಟಣದ ಆರು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ, 16 ಸಿಲಿಂಡರ್ ಜಪ್ತಿ ಮಾಡಲಾಗಿದೆ. ತಹಸೀಲ್ದಾರ್ ಭೀಮರಾಯ್ ಮಾತನಾಡಿ, ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಸಿಲಿಂಡರ್ ಬಳಸುವುದು ಅಪಾಯಕಾರಿ. 
ಅಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈಗಾಗಲೇ ಸಿಲಿಂಡರ್‌ಗಾಗಿ ಜನ ಸರದಿಯಲ್ಲಿ ನಿಲ್ಲುವ ಸನ್ನಿವೇಶ ಎದರುರಾಗಿದೆ. ಹೋಟೆಲ್ ಮಾಲೀಕರು ವಾಣಿಜ್ಯಕ್ಕೆ ಬಳಸುವ ಸಿಲಿಂಡರ್ ಉಪಯೋಗ ಮಾಡಬೇಕು. 
ಗೃಹಬಳಕೆ ಸಿಲಿಂಡರ್ ಉಪಯೋಗಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಅಡುಗೆ ಅನಿಲ ಪೂರೈಸಿದ ಏಜೆನ್ಸಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. 
ಆಹಾರ ನಿರೀಕ್ಷಕ ದೇವರಾಜ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.