ದೊಡ್ಡಬಳ್ಳಾಪುರದ ಟಿಎಪಿಸಿಎಂಎಸ್​ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್​ ಅಭ್ಯರ್ಥಿಗಳಾದ ಡಿ.ಸಿದ್ದರಾಮಯ್ಯ, ಕೆಂಪೇಗೌಡ, ವಿಶ್ವಾಸ್​ ಹನುಮಂತೇಗೌಡ, ವೆಂಕಟೇಶ್​ ಅವರೊಂದಿಗೆಮುಖಂಡರಾದ ರಾಮಣ್ಣ, ರವಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಇದ್ದರು.  
ರಾಜ್ಯ

ಕೈ ತೆಕ್ಕೆಗೆ ದೊಡ್ಡಬಳ್ಳಾಪುರ ಟಿಎಪಿಸಿಎಂಎಸ್​? / DODDABALLAPUR

ದೊಡ್ಡಬಳ್ಳಾಪುರ : ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್​) ಭಾನುವಾರ ಚುನಾವಣಾ ನಡೆದು ಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳು ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದು, ಬಿಜೆಪಿ&ಜೆಡಿಎಸ್​ ಮೈತ್ರಿಗೆ ತೀವ್ರ ಮುಖಭಂಗವಾಗಿದೆ.
ಚುನಾವಣೆಯಲ್ಲಿ ಶೇ 93.98 ಮತದಾನ ನಡೆದಿದೆ. ಬಿ ತರಗತಿಯಿಂದ ಜೆಡಿಎಸ್​, ಬಿಜೆಪಿ ಮೈತ್ರಿ ಬೆಂಬಲಿತ 5 ಅಭ್ಯರ್ಥಿಗಳು ಜಯ ಗಳಿಸಿದ್ದರೆ,ಕಾಂಗ್ರೆಸ್​ ಬೆಂಬಲಿತ ಮೂವರು ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಜೆಡಿಎಸ್​ಗೆ 5 ಸ್ಥಾನ.. ಬಿಜೆಪಿಗೆ ಶೂನ್ಯ: ಪರಸ್ಪರ ಸೀಟು ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಗದ್ದುಗೆ ಏರುವ ಲೆಕ್ಕಾಚಾರ ಹಾಕಿದ್ದ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ಜೆಡಿಎಸ್​ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಶೂನ್ಯ ಸಾಧನೆ ಮಾಡಿ ಮುಖಭಂಗಕ್ಕೀಡಾಗಿದೆ.
ಸೊಸೈಟಿ ಅಭಿವೃದ್ಧಿಗೆ ಶ್ರಮ : ಗೆಲುವು ಸಾಧಿಸಿದ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಡಿ.ಸಿದ್ದರಾಮಯ್ಯ ಮಾತನಾಡಿ, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಮತದಾರರು ಕಾಂಗ್ರೆಸ್​ ಬೆಂಬಲಿತರಿಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮಾಡದೆ ತಾಲೂಕು ಸೊಸೈಟಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು. ಮತದಾರರ ವಿಶ್ವಾಸಕ್ಕೆ ಪೂರಕವಾಗಿ ಕೆಲಸ ಮಾಡಿ ಸೊಸೈಟಿ ಅಭಿವೃದ್ಧಿ ಮಾಡುತ್ತೇವೆ ಎಂದರು. ಪ್ರವರ್ಗ ಬಿ ಕ್ಷೇತ್ರದಿಂದ ಜಯ ಸಾಧಿಸಿದ ಜಿ.ಕೆಂಪೇಗೌಡ ಮಾತನಾಡಿ, ಈ ಚುನಾವಣೆಯ ಫಲಿತಾಂಶ ಮುಂದಿನ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ಮತ್ತು ಶಾಸನಸಭೆ ಚುನಾವಣೆಯ ದಿಕ್ಸೂಚಿಯಾಗಲಿದೆ. ತಾಲೂಕಿನಲ್ಲಿ ಕಾಂಗ್ರೆಸ್​ ಭದ್ರವಾಗಿರುವುದಕ್ಕೆ ಮತದಾರರು ನೀಡಿರುವ ಈ ತೀರ್ಪು ಸಾಕ್ಷಿ. ಮುಂದೆ ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು ಎಂದರು.
"ಎ' ತರಗತಿ ಫಲಿತಾಂಶಕ್ಕೆ ತಡೆ : ತಾಲೂಕಿನ 20 ವಿಎಸ್​ಎಸ್​ಎನ್​ ಪ್ರತಿನಿಧಿಗಳಾಗಿ 5 ನಿರ್ದೇಶಕ ಸ್ಥಾನಕ್ಕೆ 9 ಜನ ಸ್ಪರ್ಧಿಸಿದ್ದರು. ಇದರಲ್ಲಿ 2 ವಿಎಸ್​ಎಸ್​ಎನ್​ ಪ್ರತಿನಿಧಿಗಳು ಹೈಕೋರ್ಟ್​ ಮೂಲಕ ಮತಚಲಾಯಿಸುವ ಹಕ್ಕು ಪಡೆದು ಭಾನುವಾರ ಮತ ಚಲಾಯಿಸಿದ್ದರು. ಮತದಾನ ಬಳಿಕ ಎ ತರಗತಿಯ ಫಲಿತಾಂಶ ತಡೆ ಹಿಡಿಯಲಾಗಿದೆ. ಸೋಮವಾರ ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಚುನಾವಣೆ ಫಲಿತಾಂಶ ಪ್ರಕಟಿಸುವ ಅಧಿಕಾರವನ್ನು ಚುನಾವಣಾಧಿಕಾರಿಯಾದ ಸಹಕಾರಿ ಇಲಾಖೆ ಉಪನಿಬಂಧಕರಿಗೆ ನೀಡಿದೆ. ಮಂಗಳವಾರ ಲಿತಾಂಶ ಪ್ರಕಟವಾಗುವ ನಿರೀೆ ಇದೆ. ಎ ತರಗತಿಯ 5 ಸ್ಥಾನಗಳ ಲಿತಾಂಶ ಪ್ರಕಟವಾಗಿಲ್ಲವಾದರೂ ಅಧಿಕ ಮತ ಪಡೆದಿರುವುದು ಖಚಿತವಾಗಿರುವ ಬೆನ್ನಲ್ಲೆ ಎ ತರಗತಿಯ ಜತೆ ಬಿ ತರಗತಿಯಲ್ಲಿ 3 ಸ್ಥಾನಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್​ ಸನ್ನದ್ಧವಾಗಿದೆ.
"ಬಿ' ತರಗತಿಯಿಂದ ಆಯ್ಕೆಯಾದ ಅಭ್ಯರ್ಥಿಗಳು : ಪುರುಷೋತ್ತಮ (ಮೈತ್ರಿ ಜೆಡಿಎಸ್​) ವಿಶ್ವಾಸ್​ ಹನುಮಂತೇಗೌಡ -(ಕಾಂಗ್ರೆಸ್​ ಬೆಂಬಲಿತ). ಎಂ.ಆನಂದ- (ಮೈತ್ರಿ ಜೆಡಿಎಸ್​). ಎ.ರಾಮಾಂಜಿನಪ್ಪ (ಮೈತ್ರಿ ಜೆಡಿಎಸ್​). ಲಕ್ಷ್ಮೀನಾಗೇಶ್​ (ಮೈತ್ರಿ ಜೆಡಿಎಸ್​). ಚಂದ್ರಕಲಾ ಮಂಜುನಾಥ್​ (ಕಾಂಗ್ರೆಸ್​ ಬೆಂಬಲಿತ). ವಿ.ಎಸ್​.ರಮೇಶ್​ (ಮೈತ್ರಿ ಜೆಡಿಎಸ್​) ಜಿ.ಕೆಂಪೇಗೌಡ (ಕಾಂಗ್ರೆಸ್​ ಬೆಂಬಲಿತ)