ನೆಲಮಂಗಲದ ರೋಟರಿ ಬೆಂಗಳೂರು ಅರುಣೋದಯ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯರು, ಲೆಕ್ಕ ಪರಿಶೋಧಕರು ಹಾಗೂ ಪರ್ತಕರ್ತರನ್ನು ಸನ್ಮಾನಿಸಲಾಯಿತು. ರೋಟರಿ ಅರುಣೋದಯ ಸಂಸ್ಥೆಯ ಜಂಟಿ ಕಾರ್ಯದರ್ಶಿ ನಟರಾಜು, ಖಜಾಂಚಿ ಪ್ರಸನ್ನಕುಮಾರ್, ಉಪಾಧ್ಯಕ್ಷ ಕಿರಣ್ಕುಮಾರ್ ಇತರರು ಇದ್ದರು.
ನೆಲಮಂಗಲ : ಪ್ರಸ್ತುತ ಸಮಾಜಕ್ಕೆ ವೈದ್ಯರು, ಪತ್ರಕರ್ತರು ಹಾಗೂ ಲೆಕ್ಕಪರಿಶೋಧಕರ ಕೊಡುಗೆ ಅಪಾರ ಎಂದು ರೋಟರಿ ಬೆಂಗಳೂರು ಅರುಣೋದಯ ಅಧ್ಯಕ್ಷ ಹನುಮಂತರಾಜು ಹೇಳಿದರು.
ನಗರಸಭೆ ವ್ಯಾಪ್ತಿಯ ಬಿನ್ನಮಂಗಲ ಬಳಿಯ ರೋಟರಿ ಬೆಂಗಳೂರು ಅರುಣೋದಯ ಕಚೇರಿಯಲ್ಲಿ ಆಯೋಜಿಸಿದ್ದ ವೈದ್ಯರ ದಿನ, ಪತ್ರಿಕಾದಿನ ಹಾಗೂ ಲೆಕ್ಕಪರಿಶೋಧಕ ದಿನಾಚರಣೆಯಲ್ಲಿ ಮಾತನಾಡಿದರು. ಆರೋಗ್ಯಕರ ಸಮಾಜಕ್ಕೆ ವೈದ್ಯರು ಹಾಗೂ ಸಮಾಜವನ್ನು ತಿದ್ದಿ ಉತ್ತಮ ಸಮಾಜ ನಿಮಾರ್ಣಕ್ಕೆ ಪತ್ರಕರ್ತರು ಸೇರಿ ದೇಶದ ಅರ್ಥಿಕತೆ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ ದೇಶದ ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಪ್ರಮುಖ. ರೋಟರಿಯಿಂದ ವೈದ್ಯರು, ಪತ್ರಕರ್ತರು ಹಾಗೂ ಲೆಕ್ಕಪರಿಶೋಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.
ಹಿರಿಯ ವೈದ್ಯ ಡಾ.ಸುರೇಶ್ ಗೋಗಿ ಮಾತನಾಡಿ, ವೈದ್ಯರು ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ವೈದ್ಯೋ ನಾರಾಯಣ ಹರಿ@ ಎನ್ನುವುದು ವೈದ್ಯರ ಸೇವೆಗೆ ಅನ್ವರ್ಥವಾದ ಮಾತಾಗಿದೆ. ಇದಕ್ಕಾಗಿ ವೈದ್ಯರನ್ನು ದೇವರಿಗೆ ಹೊಲಿಸಲಾಗುತ್ತದೆ. ಆರೋಗ್ಯವೇ ಮಹಾಭಾಗ್ಯ ಎನ್ನುವುದು ಸಾರ್ವಕಾಲಿಕ ಸತ್ಯ. ಅಂತಹ ಆರೋಗ್ಯವನ್ನು ರಕ್ಷಿಸುವ ವೈದ್ಯರ ಶ್ರಮವನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಗೌರವ ಸನ್ಮಾನ: ರೋಟರಿ ಸಂಸ್ಥೆಯಿಂದ ಹಿರಿಯ ವೈದ್ಯ ಡಾ.ಸುರೇಶ್ಗೋಗಿ, ಲೆಕ್ಕ ಪರಿಶೋಧಕ ಶಿವರಾಮಯ್ಯ ಹಾಗೂ ಪತ್ರಕರ್ತರಾದ ಆರ್.ಕೊಟ್ರೇಶ್, ಬೂದಿಹಾಲ್ಕಿಟ್ಟಿ ಹಾಗೂ ವಿಜಯ್ವೀಳ್ಯದೆಲೆ ಅವರನ್ನು ಸನ್ಮಾನಿಸಲಾಯಿತು. ಮಾರ್ಗದರ್ಶಕ ನವೀನ್ಕುಮಾರ್, ನಿಟಕಪೂರ್ವ ಅಧ್ಯಕ್ಷ ಗಂಗಣ್ಣ, ನೆಲಮಂಗಲ ರೋಟರಿ ಸಂಸ್ಥೆ ನಿಟಕಪೂರ್ವ ಅಧ್ಯಕ್ಷ ಜಿ.ಆರ್.ನಾಗರಾಜು, ನಿರ್ದೇಶಕರಾದ ಕೇಶವಮೂರ್ತಿ, ಸುರೇಶ್, ಕೃಷ್ಣಪ್ಪ, ಚೌಡಪ್ಪ, ಬಸವರಾಜು, ರವಿಕುಮಾರ್, ಚಂದ್ರಶೇಖರ್ ಇತರರು ಇದ್ದರು.