ಗಂಗಾವತಿಯ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಗತಿ-2026 ವಿಶೇಷ ಉಪನ್ಯಾಸ ಕಾರ್ಯಗಾರವನ್ನು ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಕೆ.ಪುರೋಹಿತ್ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ರವಿಕುಮಾರ ಇತರರಿದ್ದರು.
ಗಂಗಾವತಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆ ಜತೆಗೆ ಕೌಶಲಕ್ಕೂ ಆದ್ಯತೆ ನೀಡಬೇಕು. ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುಬೇಕು ಎಂದು ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಕೆ.ಪುರೋಹಿತ್ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅಂಬೇಡ್ಕರ್ ಸಭಾಂಗಣದಲ್ಲಿ ಐಕ್ಯೂಎಸಿ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ-2026 ವಿಶೇಷ ಉಪನ್ಯಾಸ ಕಾರ್ಯಗಾರದಲ್ಲಿ ಮಾತನಾಡಿದರು.
ಎಐ ಯುಗದಲ್ಲಿ ಸೃಜನಶೀಲತೆ, ಮಾರುಕಟ್ಟೆ, ಮಾಧ್ಯಮ, ಸಂವಹನ ಸೇರಿ ಹಲವು ಕೌಶಲಗಳು ಬದುಕನ್ನು ರೂಪಿಸುತ್ತವೆ ಎಂದರು. ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಮಾತನಾಡಿ, ಕತಕ ಬುದ್ಧಮತ್ತೆ ಕ್ಷಣಾರ್ಧದಲ್ಲಿ ಸಾಕಷ್ಟು ಮಾಹಿತಿ ಒದಗಿಸಿದರೂ ಉದ್ಯೋಗಾವಕಾಶ ಕಸಿಯುತ್ತಿದೆ. ಸವಾಲಿನ ದಿನಗಳಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ನಡೆಯಬೇಕಿದೆ ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಅಕ್ಕಿ ಮಾರುತಿ, ಐಕ್ಯೂಎಸಿ ಸಂಯೋಜಕ ಕೆ.ಎಚ್.ಮಂಜುನಾಥ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ರವಿಕುಮಾರ, ಅತಿಥಿ ಉಪನ್ಯಾಸಕರ ಸಂಘದ ತಾಲೂಕಾಧ್ಯಕ್ಷ ಪವನಕುಮಾರ ಗುಂಡೂರು, ಉಪನ್ಯಾಸಕಿ ಮಾಲತಿ, ಪ್ರಮುಖರಾದ ವಿಜಯಮಹಾಂತೇಶ, ವಿನಾಯಕ, ಎಸ್.ಎಸ್.ಖಾದ್ರಿ, ಶಿವರಾಜ ಅಂಗಡಿ, ಬಿ.ಸವಿತಾ, ರೆಹಾನ ಬೇಗಂ ಇತರರಿದ್ದರು.