Do yoga for mental peace.
ನೊಣವಿನಕೆರೆ : ಭಾರತ ವಿಶ್ವಕ್ಕೆ ಯೋಗ ಪರಿಚಯ ಮಾಡಿತು. ಇಂದು ವಿಶ್ವ ಯೋಗ ದಿನ ಆಚರಣೆ ಮಾಡುತ್ತಿರುವುದಕ್ಕೆ ಈ ಮಣ್ಣಿನ ಶಕ್ತಿ ಕಾರಣ ಎಂದು ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕ ನರಸಿಂಹಮೂರ್ತಿ ಹೇಳಿದರು.
ತಿಪಟೂರು ತಾಲೂಕು ನೊಣವಿನಕೆರೆ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದ ಧ್ಯಾನ ಮಂದಿರದಲ್ಲಿ ನೊಣವಿನಕೆರೆ ಆರ್ಟ್ ಆಫ್ ಲಿವಿಂಗ್ ಯೋಗ ಸೆಂಟರ್, ಪತಾಂಜಲಿ ಯೋಗ ಶಿಕ್ಷಣ ಸಮಿತಿ, ಸಿದ್ದ ಸಮಾಧಿ ಯೋಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಯೋಗ ದಿನದಲ್ಲಿ ಮಾತನಾಡಿ, ಇಂದಿನ ವೈಜ್ಞಾನಿಕ ಬದುಕಿನಲ್ಲಿ ಮಾನಸಿಕ ನೆಮ್ಮದಿ ಇಲ್ಲದೆ ಮಾನವ ನರಳುತ್ತಿದ್ದಾನೆ. ಎಲ್ಲವು ಇದ್ದು, ಇಲ್ಲದಂತೆ ಬದುಕುವ ಪರಿಸ್ಥಿತಿಯಲ್ಲಿ ಜನರು ಇದ್ದಾರೆ. ಹಾಗಾಗಿ ಒತ್ತಡ ಮುಕ್ತ ಜೀವನಕ್ಕೆ ಯೋಗದ ಅವಶ್ಯಕತೆ ಇದೆ ಎಂದರು.
ನಾವುಗಳು ಯೋಗದ ಪ್ರಮುಖ್ಯತೆ ತಿಳಿಯದೆ ಪಾಚಿಮಾತ್ಯ ಸಂಸತಿಗೆ ಮಾರುಹೋಗಿ, ನಮ್ಮ ಸಂಸತಿ, ಪರಂಪರೆ ಹಾಗೂ ಆಚರಣೆಗಳಿಂದ ದೂರ ಉಳಿಯುತ್ತಿದ್ದೇವೆ. ಚಿಕ್ಕ ವಯಸ್ಸಿಗೆ ದೀರ್ಘಾವದಿ ಕಾಯಿಲೆ, ಮಾನಸಿಕ ಖಿನ್ನತೆ ಹೆಚ್ಚಾಗುತ್ತಿವೆ ಎಂದರು.
ಆರ್ಟ್ ಆಫ್ ಲಿವಿಂಗ್ನ ಗಾಯತ್ರಿ, ಹಿರಿಯ ಯೋಗ ಪಟು ಪಂಚಾಕ್ಷರಯ್ಯ, ಚಿಕ್ಕನಂಜೇಗೌಡ, ರುದ್ರೇಶ್, ವೇದಾನಂದ ಇತರರು ಇದ್ದರು.