ಯಾದಗಿರಿ ನಗರದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸೋಮವಾರ ಭೇಟಿ ನೀಡಿದ ಡಿಸಿ ರಾಹುಲ್​ ಪಾಂಡ್ವೆ ಅಲ್ಲಿನ ಜಾಕವೆಲ್​ ಪರಿಶೀಲಿಸಿದರು. ಪೌರಾಯುಕ್ತ ಉಮೇಶ ಚವ್ಹಾಣ್​ ಇತರರಿದ್ದರು. 
ರಾಜ್ಯ

ಗುಣಮಟ್ಟದ ಕಾಮಗಾರಿ ಮಾಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಡಿಸಿ ಪಾಂಡ್ವೆ ಸೂಚನೆ
  • ನಗರದಲ್ಲಿ ಮಿಂಚಿನ ಸಂಚಾರ
  • ಅವದಿಯೊಳಗೆ ಪೂರ್ಣಗೊಳಿಸಿ
ಯಾದಗಿರಿ: ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಅವದಿಯೊಳಗೆ ಪೂರ್ಣಗೊಳಿಸುವ ಮೂಲಕ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ಸಂಬಂಧಿಸಿದ ಅದಿಕಾರಿಗಳಿಗೆ ತಾಕೀತು ಮಾಡಿದರು.
ಸೋಮವಾರ ನಗರದಲ್ಲಿ ಮಿಂಚಿನ ಸಂಚಾರ ಮಾಡಿ ವಿವಿಧ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಯಾದಗಿರಿ-ಸೈದಾಪುರ ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಅಲ್ಲದೆ ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸುತ್ತಿರುವ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ಯಾದಗಿರಿ-ಸೈದಾಪುರ ಜಿಲ್ಲಾ ಮುಖ್ಯ ರಸ್ತೆ ಮರು ಡಾಂಬರೀಕರಣ (ಆಯ್ದ ಭಾಗಗಳಲ್ಲಿ) ಅಂದಾಜು ಮೊತ್ತ 7 ಕೋಟಿ ರೂ. ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಈ ಕಾಮಗಾರಿಯು ನಿಗದಿತ ಅವಧಿಯಲ್ಲಿ ನಿರ್ವಹಿಸಿ ಪೂರ್ಣಗೊಳಿಸಬೇಕು ಮತ್ತು ಉತ್ತಮ ಗುಣಮಟ್ಟದಾಗಿರಬೇಕು ಎಂದು ಕಾರ್ಯಪಾಲಕ ಅಭಿಯಂತರರಿಗೆ ತಾಕೀತು ಮಾಡಿದರು. ಈ ವೇಳೆ ಕಾರ್ಯಪಾಲಕ ಅಭಿಯಂತರ ಎಸ್​.ಜಿ.ಪಾಟೀಲ್​, ಸಹಾಯಕ ಕಾರ್ಯಪಾಲಕ ಅಭಿಯಂತರ ಪರಶುರಾಂ, ಕಿರಿಯ ಅಭಿಯಂತರ ಹಣಮಂತ, ಪೌರಾಯುಕ್ತರು ಉಮೇಶ ಚವ್ಹಾಣ್​, ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಅಭಿಯಂತರ ವಿಶ್ವನಾಥ ಸೇರಿ ಇತರರಿದ್ದರು.
ನಂತರ ನಗರದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದ ಡಿಸಿ, ನೀರು ಪರಿಶೀಲಿಸಿದರು. ಸಾರ್ವಜನಿಕರಿಗೆ ಡೆಂಘೆ, ಮಲೇರಿಯಾ ಮತ್ತು ಗ್ಯಾಸ್ಟೋಎಂಟರೈಟಿಸ್​ (ಜಿ.ಇ) ಪ್ರಕರಣ ತಡೆಗಟ್ಟಲು ನೀರು ಶುದ್ಧೀಕರಿಸಿ ಸ್ವಚ್ಛವಾದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಸಾರ್ವಜನಿಕರಿಗೆ ರೋಗ ರುಜಿನ ಬಾರದಂತೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ನಗರಸಭೆ ಪೌರಾಯುಕ್ತರಿಗೆ  ಸೂಚಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ನಿರ್ಮಾಣವಾಗುತ್ತಿರುವ 7 ಎಂಎಲ್​ಡಿ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ವಿಕ್ಷೀಸಿದ ಅವರು, ಕಳೆದ ಸುಮಾರು 8 ತಿಂಗಳಾದರೂ ಕಾಮಗಾರಿ ಆರಂಭಗೊಂಡಿಲ್ಲ. ಮುಂದಿನ ಇನ್ನೂ 13 ತಿಂಗಳ ಕಾಲಾವಧಿಯಲ್ಲಿ ಕಾಮಗಾರಿ ಮುಗಿಸಬೇಕಾಗಿದ್ದರಿಂದ ಕೂಡಲೇ ಆರಂಭಿಸಿ ಶೀಘ್ರ ಮುಕ್ತಾಯಗೊಳಿಸಬೇಕು ಎಂದು ಮಂಡಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಂತೆ ಕಮಲಾ ನೇಹರು ಪಾರ್ಕ್​ನಲ್ಲಿ ಒಎಚ್​ ಟ್ಯಾಂಕ್​ನ ಕೆಲಸ ಶೀಘ್ರ ಪೂರ್ಣಗೊಳಿಸಲು ಹೇಳಿದರು. ಅಧಿಕಾರಿಗಳಾದ  ಅಶೋಕ ರಾಠೆ