ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸ್ಪಂದಾನ ಸಭೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು. ತಹಸಿಲ್ದಾರ್ ಮಲ್ಲೇಶ್ಬೀರಪ್ಪ ಪೂಜಾರ್, ಗ್ರೇಡ್&2ತಹಸೀಲ್ದಾರ್ ಕಲಾವತಿ, ತಾಪಂ ಇಒ ಡಾ.ಬಿಂದೂ, ಬಿಇಒ ರಮೇಶ್ ಇದ್ದರು.
ನೆಲಮಂಗಲ : ಕಳೆದ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಪರಿಹಾರ ಸಿಕ್ಕಾಗ ಜನಸ್ಪಂದನಾ ಕಾರ್ಯಕ್ರಮಕ್ಕೆ ಅರ್ಥ ಸಿಗುತ್ತದೆ. ಮತ್ತೆ ಜನರು ಅರ್ಜಿಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆಯುವಂತಾಗಬಾರದು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸ್ಪಂದಾನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಾಮಾನ್ಯರ ಅರ್ಜಿಗಳಿಗೆ ಅಧಿಕಾರಿಗಳು ರ್ನಿಲಕ್ಷ$್ಯ ವಹಿಸದೆ ಶ್ರೀ ಸ್ಪಂದಿಸಬೇಕು. ಜನಸ್ಪಂದನಾ ಸಭೆಗಳು ಜನರಿಗೆ ಸಹಕಾರಿಯಾಗಬೇಕು. ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಲು ಸೂಕ್ಷ$್ಮ ರೀತಿಯಲ್ಲಿ ಸ್ಪಂದಿಸಬೇಕು. ಜನರ ದೈನಂದಿನ ಸಮಸ್ಯೆಗಳ ಅರ್ಜಿಗಳನ್ನು ಸ್ಥಳಿಯ ಹಂತದಲ್ಲಿ ಪರಿಹರಿಸಲಾಗುವುದು. ಕಾನೂನಿನ ಚೌಕಟ್ಟಿನೊಳಗೆ ಅಧಿಕಾರಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.
ನಿಯಮಾನುಸಾರ ಕ್ರಮ: ಕಾನೂನಾತ್ಮಕವಾಗಿ ಅವಕಾಶವಿದ್ದರೆ ಕೆಲಸ ಮಾಡಿಕೊಡಬೇಕು. ಇಲ್ಲದಿದ್ದರೆ ಎಲ್ಲರಿಗೂ ಅರ್ಥವಾಗುವಂತೆ ಹಿಂಬರಹ ಕೊಡಬೇಕು. ಎಲ್ಲರಿಗೂ ಕಾಲಾವಕಾಶ ಪಡೆದುಕೊಂಡು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.
ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯ ಸಿ.ಪ್ರದಿಪ್, ನರಸಿಂಹಮೂರ್ತಿ, ನೆ.ಯೋ.ಪ್ರಾಧಿಕಾರ ಅದ್ಯಕ್ಷ ನಾಗರಾಜು, ಸದಸ್ಯ ವೆಂಕಟೇಶ್, ಮುಖಂಡ ಕೆ.ಕೃಷ್ಣಪ್ಪ, ಸಿ.ಎಂ.ಗೌಡ, ಚಿಕ್ಕಣ್ಣ, ಮುನಿಯಪ್ಪ, ಮನುಗೌಡ, ರವಿಕುಮಾರ್ ಉಪಸ್ಥಿತರಿದರು.
ಕಚೇರಿ ಸಿಬ್ಬಂದಿಗೆ ತರಾಟೆ : ಇತ್ತೀಚೆಗೆ ತಾಲೂಕು ಕಚೇರಿಯಲ್ಲಿ ಮಹಿಳೆಯೊಬ್ಬರು ಅರ್ಜಿ ನೀಡಲು ಬಂದಿದ್ದ ವೇಳೆ ಕಚೇರಿಯ ಠಪಾಲ್ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರು ಅಸಭ್ಯವಾಗಿ ವರ್ತಿಸಿದ್ದನ್ನು ಸಭೆಯಲ್ಲಿ ಮಹಿಳೆ ಶಾಸಕರ ಗಮನಕ್ಕೆ ತಂದರು. ಶಾಸಕ ಎನ್.ಶ್ರೀನಿವಾಸ್ ತಾಲೂಕಿನಾದ್ಯಂತ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಅತ್ಯಂತ ಸೌಜನ್ಯದಿಂದ ಹಾಗೂ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
20 ಅರ್ಜಿ ವಿಲೇವಾರಿ : ಜನಸ್ಪಂದನದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಒಟ್ಟು 55 ಅರ್ಜಿಗಳ ಪೈಕಿ 20ಕ್ಕೂ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ಉಳಿದವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ್ ಸೂಚಿಸಿದರು.