ವೈಭವ್ ಸೂರ್ಯವಂಶಿ 
ರಾಜ್ಯ

ರಾಜಸ್ಥಾನಕ್ಕೆ ಡು ಆರ್ ಡೈ ಸವಾಲು: ಇಂದು ಅಂಕಪಟ್ಟಿಯ ಕೊನೇ ಸ್ಥಾನಿ ಸೂಪರ್‌ಜೈಂಟ್ಸ್ ಎದುರಾಳಿ

ಜೈಪುರ: ಸತತ ಮೂರು ಸೋಲುಗಳಿಂದ ಪ್ಲೇಆಫ್ ರೇಸ್‌ನಲ್ಲಿ ಲಯ ತಪ್ಪಿರುವ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-19ರಲ್ಲಿ ಸವಾಲು ಜೀವಂತವಿರಿಸಲು ಮಾಡು ಇಲ್ಲವೇ ಮಡಿ ಒತ್ತಡಲ್ಲಿದೆ. ಮಂಗಳವಾರ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಿಯಾನ್ ಪರಾಗ್ ಪಡೆ ಅಂಕಪಟ್ಟಿಯ ಕೊನೇ ಸ್ಥಾನಿ ಲಖನೌ ಸೂಪರ್‌ಜೈಂಟ್ಸ್ ಸವಾಲು ಎದುರಿಸಲಿದೆ.
ಕಿರು ವಿಶ್ರಾಂತಿಯ ನಂತರ ಆಡಿದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ 5 ವಿಕೆಟ್ ಸೋಲು ಕಂಡಿರುವ ರಾಜಸ್ಥಾನ ಎರಡು ದಿನಗಳ ಅಂತರದಲ್ಲಿ 2ನೇ ಪಂದ್ಯಕ್ಕೆ ಸಜ್ಜಾಗಿದೆ. ಟೂರ್ನಿಯ ಆರಂಭಿಕ 4 ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ರಾಜಸ್ಥಾನ ರಾಯಲ್ಸ್ ನಂತರ ಆಡಿದ 8ರಲ್ಲಿ 2 ಜಯ ಕಂಡಿದೆ.
ಹಾಲಿ ಸೀಸನ್‌ನಲ್ಲಿ ತವರಿನಂಗಣದಲ್ಲಿ ತನ್ನ ಕೊನೇ ಪಂದ್ಯವನ್ನಾಡಲಿರುವ ರಾಜಸ್ಥಾನ, ಜೈಪುರದಲ್ಲಿ ಆಡಿರುವ ಮೂರರಲ್ಲೂ ಪರಾಭವಗೊಂಡಿದೆ. ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದ ಜತೆಗೆ ಸಾಧಾರಣ ಬೌಲಿಂಗ್, ಫೀಲ್ಡಿಂಗ್ ರಾಜಸ್ಥಾನಕ್ಕೆ ಹಿನ್ನಡೆ ತಂದಿತು. 15 ವರ್ಷದ ವೈಭವ್ ಸೂರ್ಯವಂಶಿ (486 ರನ್) ಅವರನ್ನೇ ನೆಚ್ಚಿಕೊಂಡಿರುವ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (327) ಹಿಂದಿನ ಕೆಲ ಪಂದ್ಯಗಳಲ್ಲಿ ಸಾಥ್ ನೀಡುವಲ್ಲಿ ಎಡವಿದ್ದಾರೆ. ಟೂರ್ನಿಯ ದ್ವಿತೀಯಾರ್ಧದಲ್ಲಿ ಲಯಕ್ಕೆ ಮರಳಿರುವ ರಿಯಾನ್ ಪರಾಗ್ (258) ಸ್ಲಾಗ್ ಓವರ್‌ಗಳಲ್ಲಿ ಪರಿಣಾಮಕಾರಿ ಎನಿಸಬೇಕಿದೆ. ಜ್ರೋಾ ಆರ್ಚರ್ (17 ವಿಕೆಟ್) ಮೊನಚು ಕಳೆದುಕೊಂಡಿದ್ದಾರೆ.
ಸಿಎಸ್‌ಕೆ ಎದುರು ಹಿಂದಿನ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಲಖನೌಗೆ ಬ್ಯಾಟಿಂಗ್ ವಿಭಾಗ ಮೈನಸ್ ಪಾಯಿಂಟ್. ಆದರೆ, ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್ ಹಿಂದಿನ ಪಂದ್ಯಗಳಲ್ಲಿ ರನ್‌ಗಳಿಸಿರುವುದು ಸಮಾಧಾನಕರ ಎನಿಸಿದೆ. ಪಂತ್ ಪಡೆ ಇದುವರೆಗೆ ಆಡಿರುವ 12ರಲ್ಲಿ 4 ಗೆಲುವು, 8 ಸೋಲು ಕಂಡಿದೆ.
ಪ್ಲೇಆಫ್ ಲೆಕ್ಕಾಚಾರ
ಆಡಿರುವ 12ರಲ್ಲಿ ತಲಾ 6 ಸೋಲು-ಗೆಲುವಿನೊಂದಿಗೆ 12 ಅಂಕ ಹೊಂದಿರುವ ರಾಜಸ್ಥಾನ ಪಾಲಿಗೆ ಉಳಿದಿರುವ ಎರಡು ಪಂದ್ಯಗಳು ನಿರ್ಣಾಯಕ ಎನಿಸಿದ್ದು, ಉಳಿದೆರಡರಲ್ಲೂ ಗೆದ್ದರೆ ಗರಿಷ್ಠ 16 ಅಂಕ ಕಲೆಹಾಕಲಿದೆ. ಸಿಎಸ್‌ಕೆ ಅಥವಾ ಸನ್‌ರೈಸರ್ಸ್‌ ನಡುವೆ ಒಂದು ತಂಡ 16 ಅಂಕ ಕಲೆಹಾಕಿದರೂ, ರನ್‌ರೇಟ್ ಲೆಕ್ಕಾಚಾರವಿಲ್ಲದೆ ಪ್ಲೇಆ್ಗೇರಲಿದೆ. ಸಿಎಸ್‌ಕೆ ತನ್ನ 2 ಪಂದ್ಯಗಳನ್ನು ಗೆದ್ದು, ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಅನ್ನು ಮಣಿಸಿದರೆ, ರನ್‌ರೇಟ್ ಆಧಾರದಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ರಾಜಸ್ಥಾನ ಒಂದರಲ್ಲಿ ಗೆದ್ದರೆ, ಇತರ ಪಂದ್ಯಗಳ ಲಿತಾಂಶವೂ ವರದಾನವಾಗಬೇಕಿದೆ. ಲಖನೌ ಪಾಲಿಗೆ ಈ ಪಂದ್ಯ ಔಪಚಾರಿಕ ಎನಿಸಿದ್ದು, ಅಂಕಪಟ್ಟಿಯ ಕೊನೇ ಸ್ಥಾನ ತಪ್ಪಿಸಲು ಹೋರಾಡಲಿದೆ.
ಮುಖಾಮುಖಿ: 7
ಲಖನೌ:2
ರಾಜಸ್ಥಾನ: 5
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.