ಬಿಜೆಪಿ ಮತ್ತು ಕಾಂಗ್ರೆಸ್ ಚಿಹ್ನೆ 
ರಾಜ್ಯ

ಜಿಬಿಎ ಚುನಾವಣೆ ಮುಂದೂಡಬೇಡಿ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಯಾವುದೇ ನೆಪ ಹೇಳಿ ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಬಾರದು ಎಂದು ಸರ್ಕಾರಕ್ಕೆ ಶಾಸಕ ಎಸ್.ಆರ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
ಈಗ ಎಸ್‌ಐಆರ್ ನಡೆಯುತ್ತಿದೆ. ಅದು ಸದ್ಯದಲ್ಲೇ ಮುಗಿಯಲಿದೆ. ಕೂಡಲೇ ಜಿಬಿಎ ಚುನಾವಣೆ ನಡೆಸಬೇಕು. ಜಿಪಂ, ತಾಪಂ, ಗ್ರಾಪಂಗಳಲ್ಲಿ ಜನಪ್ರತಿನಿಧಿಗಳು ಇಲ್ಲ. ಆದ್ದರಿಂದ ಎಲ್ಲದಕ್ಕೂ ಶಾಸಕರನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಇನ್ನಾದರೂ ಕಾರಣ ಹೇಳದೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜಿಬಿಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಹಲವು ಕಾರಣ ನೀಡಿದೆ. ಸುಪ್ರೀಂಕೋರ್ಟ್ ಸಹ ಮುಂದೂಡಲು ಅವಕಾಶ ನೀಡಿದೆ. ಅದರೆ ಇನ್ನುಮುಂದೆ ಮುಂದೂಡಲು ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಈ ತಿಂಗಳ ಒಳಗೆ ಚುನಾವಣೆ ದಿನಾಂಕ ನಿಶ್ಚಯವಾದರೆ ಒಳ್ಳೆಯದು ಎಂದರು.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಮಿತಿ ಬೇಕು ಎಂಬ ಬೇಡಿಕೆ ಸರಿ ಇದೆ. ಜಿಬಿಎನಲ್ಲಿ ಜೆಡಿಎಸ್‌ಗೂ ಸ್ಥಾನ ನೀಡಬೇಕು. ಎಲ್ಲಿ ಸ್ಥಾನ ಕೊಡಬೇಕು, ಅಭ್ಯರ್ಥಿಗಳು ಯಾರು ಎಂಬುದನ್ನು ತೀರ್ಮಾನ ಮಾಡಲು ಎರಡೂ ಪಕ್ಷಗಳ ನಡುವೆ ಸಮನ್ವಯ ಸಮಿತಿ ಇರಬೇಕು. ಜಿಬಿಎ ಸಂಬಂಧ ಸಮನ್ವಯ ಸಮಿತಿ ಮಾಡುತ್ತೇವೆ ಎಂದು ಹೇಳಿದ್ದಾರೆ.