ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಶಿಕ್ಷಕ ಸಿ.ಎನ್.ವಿಜಯಕುಮಾರ್, ಜಿ.ಎ.ವೆಂಕಟೇಶ್, ಎಸ್.ಸಂತೋಷ್ಕುಮಾರ್, ಶಾವರ್ ಸುಲ್ತಾನ, ನೌಜಿಯ, ಎಚ್.ಎ.ಚೌಡಪ್ಪ ಇದ್ದರು.
ಪಾತಪಾಳ್ಯ: ವಿದ್ಯಾರ್ಥಿಗಳು ಪುಸ್ತಕದ ಜ್ಞಾನಕ್ಕೆ ಸೀಮಿತರಾಗದೆ ಕೌಶಲ, ನೈಪುಣ್ಯತೆ ಹಾಗೂ ಶಿಸ್ತು ಕಲಿಯುವ ಮೂಲಕ ಸಮಾಜಮುಖಿಗಳಾಗಿ ರೂಪುಗೊಳ್ಳಬೇಕು ಎಂದು ದೈಹಿಕ ಶಿಕ್ಷಣ ಶಿಕ್ಷಕ ಎನ್.ವೆಂಕಟರವಣಪ್ಪ ತಿಳಿಸಿದರು.
ಪಾತಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹೋಬಳಿಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದೂರದೃಷ್ಟಿ, ಸಾಧಿಸಬೇಕೆಂಬ ಛಲ, ನಿರಂತರ ಅಭ್ಯಾಸ, ಏಕಾಗ್ರತೆ ಮೈಗೂಡಿಸಿಕೊಂಡಾಗ ಏನನ್ನಾದರೂ ಸಾಧಿಸಬಹುದು. ಸಾಧನೆ ಮಾಡುವವರು ಪ್ರೇರಣೆಯಾಗಬೇಕು. ಶೈಕ್ಷಣಿಕ ಹಂತದಲ್ಲಿ ಮಾಡಿದ ಸಾಧನೆ ಜೀವನಕ್ಕೆ ಬೆಳಕಾಗುತ್ತದೆ ಎಂದರು.
ಮುಖ್ಯಶಿಕ್ಷಕ ನಾರಾಯಣಪ್ಪ ಮಾತನಾಡಿ, ಇಂದಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರೂ ಮೊಬೈಲ್ಗೆ ಮಾರು ಹೋಗಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಮೊಬೈಲ್ ಬಿಟ್ಟು ಪುಸ್ತಕ ಹಿಡಿದು ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಣದ ಜತೆ ಕ್ರೀಡೆ, ಸಾಹಿತ್ಯ, ವಿಜ್ಞಾನದ ಹಾಗೂ ತಂತ್ರಜ್ಞಾನದ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು ಎಂದರು.
ಶಿಕ್ಷಕ ಸಿ.ಎನ್.ವಿಜಯಕುಮಾರ್, ಜಿ.ಎ.ವೆಂಕಟೇಶ್, ಎಸ್.ಸಂತೋಷ್ಕುಮಾರ್, ಶಾವರ್ ಸುಲ್ತಾನ, ನೌಜಿಯ, ಎಚ್.ಎ.ಚೌಡಪ್ಪ ಇದ್ದರು.