ಬಾಗೇಪಲ್ಲಿ ತಾಲೂಕಿನ ಸೋಮನಾಥಪುರ ಗ್ರಾಪಂಯಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಡಾವೂ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎನ್.ಕೆ.ಗಾಯತ್ರಿ, ಆಡಳಿತ ಅಧಿಕಾರಿ ಆರ್.ಕೃಷ್ಣಮೂರ್ತಿ, ಪಿಡಿಒ ಜಿ.ಯಮುನಾರಾಣಿ ಇತರರು ಇದ್ದರು.
ಸಮಾಜದಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆಯ ತಪು$್ಪ ಕಲ್ಪನೆಗಳಿಂದ ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಬೇಡ ಎಂದು ಜಿಲ್ಲಾ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎನ್.ಕೆ.ಗಾಯತ್ರಿ ತಿಳಿಸಿದರು.
ಸೋಮನಾಥಪುರ ಗ್ರಾಪಂನಲ್ಲಿ ಮಂಗಳವಾರ "ಬೇಟಿ ಬಚಾವೋ ಬೇಟಿ ಪಡಾವೂ'ಕಾರ್ಯಕ್ರಮದಲ್ಲಿ ಮಾತನಾಡಿ, ಗಂಡು&ಹೆಣ್ಣು ಎನ್ನುವ ಭೇದ-ಭಾವ ಮನಸ್ಸಿನಿಂದ ತೆಗೆದು ಹಾಕಬೇಕು. ಗಂಡು ಮಗು ಹುಟ್ಟಿದಾಗ ಎಷ್ಟು ಸಂಭ್ರಮಿಸುತ್ತೇವೆಯೋ ಅಷ್ಟೇ ಹೆಣ್ಣು ಹುಟ್ಟಿದಾಗಲೂ ಸಂತಸ ಪಡಬೇಕು. ಈ ಮೂಲಕ ತಾರತಮ್ಯ ಹೋಗಲಾಡಿಬೇಕು. ಹೆಣ್ಣು ಭ್ರೂಣ ಹತ್ಯೆ ಮಾಡಬಾರದು. ಇಂತಹ ಘಟಣೆಗಳು ಕಂಡು ಬಂದಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.
ಆಡಳಿತ ಆಧಿಕಾರಿ ಆರ್.ಕೃಷ್ಣಮೂರ್ತಿ ಮಾತನಾಡಿ, ಸಮಾಜದಲ್ಲಿರುವ ತಾರತಮ್ಯಗಳನ್ನು ಕೊನೆಗೊಳಿಸಬೇಕು. ಹೆಣ್ಣು ಶಿಶು ಹುಟ್ಟಿಗೆ ಮತ್ತು ಬದುಕಿಗೆ ಮಾರಕವಾಗಿರುವ ಎಲ್ಲ ಅಂಶಗಳನ್ನು ಹೊಡೆದೋಡಿಸಬೇಕು. ಹೆಣ್ಣು ಮಗುವಿನ ಶಿಕ್ಷಣ, ಪ್ರೀತಿ, ವಾತ್ಸ$ಲ್ಯ, ಸುಕರ್ಷತೆ ಮತ್ತು ಉತ್ತಮ ೋಷಣೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಪಿಡಿಒ ಜಿ.ಯಮುನಾರಾಣಿ ಮಾತನಾಡಿ, ಶಿಕ್ಷಣದಿಂದ ಬದಲಾವಣೆ ಕಾಣಬಹುದು. ಮಹಿಳೆಯರಿಗೆ ಸಮಾನ ಅವಕಾಶ ಮೊದಲು ಮನೆಯಿಂದಲೇ ಸಿಗಬೇಕು. ಭ್ರೂಣ ಹತ್ಯೆ ತಡೆಗಟ್ಟಲು ಸಮಾಜದಲ್ಲಿ ಉತ್ತಮ ಸಂದೇಶ ಸಾರಬೇಕು ಎಂದರು.
ಎಎಸ್ಐ ಬಿ.ಎಸ್.ನಂಜುಂಡಶರ್ಮ, ಅಂಗನವಾಡಿ ಮೇಲ್ವಿಚಾರಕಿ ಬಸವ್ವ, ಗ್ರಾಪಂ ಕಾರ್ಯದರ್ಶಿ ಡಿ.ಎನ್.ಭಾಸ್ಕರರೆಡ್ಡಿ, ಕರ ವಸೂಲಿಗಾರ ಡಿ.ಎಸ್.ಬೈಯಾರೆಡ್ಡಿ, ಡಿಇಒ ಎ.ಶಂಕರಪ್ರಸಾದ್ ಇತರರು ಇದ್ದರು.