Do not gang up among activists
ತುರುವೇಕೆರೆ: ಜೆಡಿಎಸ್ನಿಂದ ದೊಡ್ಡಾಘಟ್ಟ ಚಂದ್ರೇಶ್ ಟಿಕೇಟ್ ಕೇಳಲಿ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಕಾರ್ಯಕ್ರಮದ ನೆಪದಲ್ಲಿ ಕಾರ್ಯಕರ್ತರ ನಡುವೆ ಜೆಡಿಎಸ್ನಲ್ಲಿ ಗುಂಪುಗಾರಿಕೆ ಮಾಡಬಾರದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ನಿಂದ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಎಸ್ಐಆರ್ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್ಗೆ ಬಂದಾಗ ತಾಲೂಕಿನಲ್ಲಿ 7 ಸಾವಿರ ಮತಗಳು ಪಕ್ಷಕ್ಕೆ ಬಂದಿದ್ದವು. ಸುಮಾರು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ ಈಗ 70 ಸಾವಿರಕ್ಕೂ ಹೆಚ್ಚು ಮತಗಳು ಬರುವ ಹಾಗೆ ಸಂಘಟನೆ ಮಾಡಿದ್ದೇನೆ. ಜೆಡಿಎಸ್ನಿಂದ ನಾಲ್ಕು ಭಾರಿ ಶಾಸಕರನ್ನಾಗಿದ್ದೇನೆ ಎಂದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿಯೇ ಕಡೇ ಚುನಾವಣೆ ಎಂದು ಘೋಷಿಸಿ ರಾಜಕೀಯ ನಿವೃತ್ತಿ ಪಡೆಯಲು ನಿರ್ಧಾರ ಮಾಡಿದ್ದೇನು. ಆದರೆ ಮಾಜಿ ಸಿಎಂ ಎಚ್.ಡಿ.ಕುಮಾರ್ಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಳಿ ಕರೆದುಕೊಂಡು ಹೋಗಿ ಎನ್ಡಿಎ ಮೈತ್ರಿಯಾಗಿದ್ದು, ಮುಂದೆ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಬಂದರೆ ಮಂತ್ರಿಯಾಗುವ ಅವಕಾಶ ಇದೆ ಅದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಸೂಚಿಸಿದರು. ಅದ್ದರಿಂದ ಎನ್ಡಿಎ ಅಭ್ಯಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದರು.
ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಹಾಲಿ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆ ಟಿಕೇಟ್ ನೀಡುವಂತೆ ಮಾತುಕತೆಯಾಗಿದೆ. ಚುನಾವಣೆ ಇನ್ನು 2 ವರ್ಷ ಇದೆ ಅಭ್ಯರ್ಥಿ ವಿಚಾರ ಅಪ್ರಸ್ಥುತ ಅದರೂ ತಾಲೂಕಿನಲ್ಲಿ ಚಂದ್ರೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂಬ ಮಾತುಗಳನ್ನು ಮುಖಂಡರು ಪ್ರಸ್ಥಾಪಿಸಿದ್ದಾರೆ. ಆದರೆ ಟಿಕೇಟ್ ವಿಚಾರವಾಗಿ ನನಗೆ ಹಾಗೂ ಬಿಜೆಪಿ ಮಾಜಿ ಶಾಸಕ ಮಸಾಲಜಯರಾಮ್ ನಡುವೆ ಟಿಕೇಟ್ ಪೈಪೋಟಿ ಇರುವುದು ಚಂದ್ರೇಶ್ದೊಂದಿಗೆ ಅಲ್ಲ. ಕಾರ್ಯಕರ್ತರು ಅರ್ಥಮಾಡಿಕೊಳ್ಳಿ ಎಂದರು.
ವೆಂಕಟಾಪುರ ಯೋಗೀಶ್, ರಂಗನಾಥ್, ಮೂರ್ತಣ್ಣ ಸಿ.ಎಸ್.ಪುರ, ಲೀಲಾವತಿಗಿಡ್ಡಯ್ಯ, ನರಸೇಗೌಡ, ನಂಜೇಗೌಡ, ಜಯರಾಮ್, ತಿಮ್ಮೇಗೌಡ, ಎ.ಬಿ.ಜಗದೀಶ್ ಇದ್ದರು.