Do not fear the tax notice. 
ರಾಜ್ಯ

ತೆರಿಗೆ ನೋಟಿಸ್​ಗೆ ಭಯಬೇಡ

ಕೋಲಾರ:

ತೆರಿಗೆ ಇಲಾಖೆಯಿಂದ ನೋಟಿಸ್​ ಬಂದಾಗ ತೆರಿಗೆದಾರರು ಆತಂಕಪಡುವ ಅಗತ್ಯವಿಲ್ಲ. ನೋಟಿಸ್​ಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಇಲಾಖೆಗೆ ಸಲ್ಲಿಸುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಮೀರಾ ಪಂಡಿತ್​ ತಿಳಿಸಿದರು.

ರಾಜ್ಯ ತೆರಿಗೆ ಸಲಹೆಗಾರರ ಸಂ ಹಾಗೂ ಜಿಲ್ಲಾ ತೆರಿಗೆ ಸಲಹೆಗಾರರ ಸಂದ ಆಶ್ರಯದಲ್ಲಿ ಶುಕ್ರವಾರ ನಗರ ಹೊರವಲಯದ ಅಜ್ಜಪ್ಪನಹಳ್ಳಿ ಗೇಟ್​ನಲ್ಲಿರುವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ತೆರಿಗೆ ಸಮ್ಮೇಳನ ಹಾಗೂ ತೆರಿಗೆ ಸಲಹೆಗಾರರ ದಿನಾಚರಣೆಯಲ್ಲಿ ಮಾತನಾಡಿದರು.

ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು

ಗುತ್ತಿಗೆದಾರ ಹಾಗೂ ಶಿಕ್ಷಣೋದ್ಯಮಿ ವಿ.ಕೃಷ್ಣಾರೆಡ್ಡಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶ ವ್ಯಕ್ತಪಡಿಸಿ ಪ್ರತಿ ವರ್ಷ ಇಬ್ಬರು ಬಡ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರ ಶಿಕ್ಷಣಕ್ಕೆ ನೆರವು ನೀಡಿ, ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕೆ ಸೇರುವಂತೆ ಸಹಕಾರ ನೀಡಲಾಗುತ್ತಿದೆ, ಇದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಹೇಳಿದರು.

ನೋಟಿಸ್​ ಎಂಬುದು ಇಲಾಖೆಯ ತೆರಿಗೆದಾರರನ್ನು ಸಂಪರ್ಕಿಸಿ ನಿಖರ ಮಾಹಿತಿ ಪಡೆಯಲು ಇರುವ ಸಾಧನ ಅಷ್ಟೆ. ಇದಕ್ಕೆ ಗ್ರಾಹಕರು ಭಯಪಡುವ ಅವಶ್ಯ ಇಲ್ಲ. ಇಲಾಖೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ತೆರಿಗೆದಾರರಿಗೆ ಸಾಕಷ್ಟು ಅನುಕೂಲವಾಗಿದೆ. ನೋಟಿಸ್​ಗಳಿಗೆ ಉತ್ತರ ಹಾಗೂ ಅಗತ್ಯ ದಾಖಲೆಗಳನ್ನು ಆನ್​ಲೈನ್​ ಮೂಲಕವೇ ಸಲ್ಲಿಸಬಹುದಾಗಿದ್ದು, ಪ್ರತಿ ವಿಚಾರಕ್ಕೂ ಕಚೇರಿಗೆ ತೆರಳಿ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ತೆರಿಗೆ ಸಲಹೆಗಾರರು ಮತ್ತು ತೆರಿಗೆದಾರರು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ವ್ಯವಸ್ಥೆಯನ್ನು ಸರಳಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದಿನ ಬದಲಾಗುತ್ತಿರುವ ತೆರಿಗೆ ವ್ಯವಸ್ಥೆ ಹಾಗೂ ಹೊಸ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ತೆರಿಗೆ ಸಲಹೆಗಾರರಿಗೆ ನಿರಂತರ ತರಭೇತಿ ಅಗತ್ಯವಿದೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಸಲಹೆಗಾರರ ೇತ್ರಕ್ಕೆ ಬಂದು ಅವಕಾಶ ಬಳಸಿಕೊಳ್ಳಬೇಕು ಎಂದರು.
ಸಂದ ಅಧ್ಯಕ್ಷ ಎಸ್​.ನಂಜುಂಡಪ್ರಸಾದ್​ ಮಾತನಾಡಿ, ತೆರಿಗೆ ಸಲಹೆಗಾರರು ಸಂಟಿತರಾಗಬೇಕು. ನಾವು ಸಂಟಿತರಾದರೆ ತೆರಿಗೆ ವಂಚನೆ ತಪ್ಪಿಸಬಹುದು. ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವ ಮೂಲಕ ದಂಡ ತಪ್ಪಿಸಬಹುದು. ಈ ಎಲ್ಲದರ ಅರಿವು ಮೂಡಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.
ಜಿಲ್ಲಾ ತೆರಿಗೆ ಸಲಹೆಗಾರರ ಸಂದ ಅಧ್ಯಕ್ಷ ರಾಜ್​ಕುಮಾರ್​ ಮಾತನಾಡಿ, ಸಂದಲ್ಲಿ 52 ಸದಸ್ಯರಿದ್ದು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ತೆರಿಗೆ ಪಾವತಿ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿ ನೋಟಿಸ್​, ದಂಡ, ಬಡ್ಡಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಸರಿಯಾದ ದಾಖಲೆ ಹಾಗೂ ಮಾಹಿತಿ ನೀಡಬೇಕು ಎಂದು ಹೇಳಿದರು.
ರಾಜ್ಯ ಹಾಗೂ ಜಿಲ್ಲಾ ಸಂದ ಪದಾಧಿಕಾರಿಗಳಾದ ರವೀಂದ್ರ ವಿ.ಶೆಟ್ಟಿ, ಸೋಮಲಿಂಗಪ್ಪ, ಅಬ್ದುಲ್​ ಬಷೀರ್​ ಸಾಬ್​ ಇತರರು ಇದ್ದರು.