ಚೇಳೂರು: ಬಾಗೇಪಲ್ಲಿಯಿಂದ ತಿರುಪತಿಗೆ ಹೊರಡುವ ಬಸ್ ಮಾರ್ಗ ಬದಲಾಯಿಸಬಾರದೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಸ್ತುತ ಬಸ್ ಚಲಿಸುತ್ತಿರುವ ಮಾರ್ಗವು ನಮಗೆಲ್ಲರಿಗೂ ಅನುಕೂಲಕರವಾಗಿದೆ.
ಇತ್ತೀಚೆಗೆ ಗೌರಿಬಿದನೂರುನಿಂದ ಬರುವಂತೆ ಮಾರ್ಗ ಬದಲಾಯಿಸಲು ಇಲಾಖೆ ನಿರ್ಧರಿಸಿದೆ. ಈ ಮಾರ್ಗ ಬದಲಾವಣೆಯಾದರೆ ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ತೊಂದರೆಯಾಗಲಿದೆ.
ಪ್ರಸ್ತುತ ಬಾಗೇಪಲ್ಲಿ ಪಟ್ಟಣದಿಂದ ಬೆಳಗಿನ ಜಾವವಿರುವ ಒಂದೇ ಒಂದು ಬಸ್ ಇದು 6.40 ಗಂಟೆಗೆ ಪಾತಪಾಳ್ಯ ಮಾರ್ಗವಾಗಿ ಚೇಳೂರಿನಿಂದ ತಿರುಪತಿಗೆ ಹೋಗುತ್ತಿದ್ದು, ಜನತೆಗೆ ಅನುಕೂಲಕರವಾಗಿದೆ. ಆದ್ದರಿಂದ ಹಳೆಯ ಮಾರ್ಗವನ್ನೇ ಮುಂದುವರಿಸಲು ಜನ ಮನವಿ ಮಾಡಿದ್ದಾರೆ.ಟಕದಿಂದ ಹೆಚ್ಚಿನ ಪ್ರಮಾಣದಲ್ಲಿ ಬಸ್ಗಳು ಬಿಟ್ಟರೆ ಜನತೆಗೆ ಅನುಕೂಲವಾಗುತ್ತದೆ. ಈ ಗ್ರಾಮೀಣ ಭಾಗಗಳಲ್ಲಿ ಬಸ್ಗಳು ವಿರಳ.
ಡಿಎಎಸ್ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಬಸ್ ಮಾರ್ಗ ಬದಲಾಯಿಸದೆ, ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಡಿಪೋ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.