ಕೆಂಭಾವಿ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡ ಮಾಸಿಕ ಶಿವಾನುಭವಗೋಷ್ಠಿಯನ್ನು ಪುರಾಣಿಕ ರಮೇಶ ಶಾಸಿ ಉದ್ಘಾಟಿಸಿದರು. ಶ್ರೀ ಚನ್ನಬಸವ ಶಿವಾಚಾರ್ಯರು, ಯಮುನೇಶ ಯಾಳಗಿ, ಶರಣಕುಮಾರ ಯಾಳಗಿ, ಡಾ.ಯಂಕನಗೌಡ ಇದ್ದರು. 
ರಾಜ್ಯ

ಫಲಾಪೇಕ್ಷೆ ಇಲ್ಲದ ಧರ್ಮಕಾರ್ಯ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಪುರಾಣಿಕ ರಮೇಶ ಶಾಸಿ ಸಲಹೆ
  • ಕೆಂಭಾವಿಯಲ್ಲಿ ಮಾಸಿಕ ಶಿವಾನುಭವಗೋಷ್ಠಿ
ಕೆಂಭಾವಿ: ಪೂಜೆ ಪುನಸ್ಕಾರ, ದಾನ ಧರ್ಮ, ಪರೋಪಕಾರ ಪರಹಿತ ಸೇರಿ ಇತರೆ ಧರ್ಮ ಕಾರ್ಯಗಳು ಯಾವುದೇ ಫಲಾಪೇೆ ಇಲ್ಲದೆ ಅತ್ಯಂತ ಭಕ್ತಿ ಭಾವದಿಂದ ಮಾಡಿದಾಗ ಮಾತ್ರ ಭಗವಂತ ತೃಪ್ತಿಯಾಗಲು ಸಾಧ್ಯ ಎಂದು ಪುರಾಣಿಕ ರಮೇಶ ಶಾಸಿ ಯಾಳಗಿ ಹೇಳಿದರು.
ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದಿಂದ ಸೋಮವಾರ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ, ಅಂತಸ್ತು, ಅಷ್ಟ ಐಶ್ವರ್ಯ ಇದ್ದರೆ ಸಾಲದು ನಮ್ಮಲ್ಲಿರುವ ಅರಿಷಡ್​ವರ್ಗಗಳನ್ನು ಮೆಟ್ಟಿ ನಿಲ್ಲಲು ಅರಿವಿನ ಅಮೃತ ಉಣಬಡಿಸುವ ಇಂಥ ಶಿವಾನುಭ ಚಿಂತನ ಶಿಬಿರದಲ್ಲಿ ಪಾಲ್ಗೊಂಡಾಗ ಮಾತ್ರ ಅದು ಸಾಧ್ಯವಾಗಲಿದೆ ಎಂದರು.
ಬಚ್ಚಿಟ್ಟು ತಿನ್ನುವುದಕ್ಕಿಂತ ಕಾಗೆ, ಕೋಳಿ, ಪಶು ಪಗಳಂತೆ ಹಂಚಿಕೊಂಡು ತಿನ್ನಬೇಕು. ಹಂಚಿದ ಕೈ ತುತ್ತು ಬರುವ ಆಪತ್ತುಗಳನ್ನು ದೂರಮಾಡಿ ದೇವ ದರ್ಶನ ಭಾಗ್ಯಕ್ಕೆ ರಹದಾರಿ ಮಾಡುತ್ತದೆ ಎಂದು ಕಿವಿಮಾತು ನುಡಿದರು.
ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯಮುನೇಶ ಯಾಳಗಿ ಮತ್ತು ಶರಣಕುಮಾರ ಯಾಳಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಿಜಗುಣಿ ವಿಶ್ವಕರ್ಮ, ಅಭಿಷೇಕ ಪಾಟೀಲ, ಅವ್ವಣ್ಣ ಮಡಿವಾಳರ್​ ಸೇರಿದಂತೆ ಹಲವರಿದ್ದರು. ಡಾ. ಯಂಕನಗೌಡ ಪಾಟೀಲ್​ ನಿರೂಪಿಸಿ ವಂದಿಸಿದರು.