ನುಗ್ಗೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಕೆ. ನಂಜುಂಡಸ್ವಾಮಿ ಹಾಗೂ ನಿವೃತ್ತ ಶಿಕ್ಷಕ ಸಿ.ಜಿ. ರಾಮೇಗೌಡ ಅವರನ್ನು ವಿದ್ಯಾರ್ಥಿಗಳು ಅಭಿನಂದಿಸಿದರು. ಕೃಪಾ ಶಂಕರ್, ಗಂಗಾಧರ್, ಪ್ರೇಮ್ ಕುಮಾರಿ, ಮಂಜುಳಾ, ಸಂಧ್ಯಾ ಇತರರಿದ್ದರು.
ನುಗ್ಗೇಹಳ್ಳಿ: ನಾವು ಮಾಡುವ ಕೆಲಸವನ್ನು ಕೇವಲ ಹೊಟ್ಟೆಪಾಡಿಗಾಗಿ ಮಾಡದೆ ಅದನ್ನು ಪವಿತ್ರ ಸೇವೆ ಎಂದು ಭಾವಿಸಿ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿದರೆ ಆ ಕೆಲಸದಲ್ಲೇ ನೆಮ್ಮದಿ ಕಾಣಬಹುದು ಎಂದು ನಿವೃತ್ತ ಉಪನ್ಯಾಸಕ ಕೆ.ಎಸ್. ನಂಜುಂಡಸ್ವಾಮಿ ತಿಳಿಸಿದರು.
ನುಗ್ಗೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1985-86ನೇ ಸಾಲಿನ ವಿದ್ಯಾರ್ಥಿಗಳು ಪೇಟೆ ಬೀದಿ ವೀರಶೈವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದೇವರನ್ನು ಎಲ್ಲೋ ಹುಡುಕುವ ಬದಲು, ನಾವು ಮಾಡುವ ವೃತ್ತಿಯಲ್ಲಿಯೇ ಕಾಣಬೇಕು. ಸೋಮಾರಿತನ ಬಿಟ್ಟು ಶ್ರಮಜೀವಿಯಾಗುವುದೇ ಜೀವನದ ನಿಜವಾದ ಗುರಿಯಾಗಬೇಕು. ಸಮಾಜದಲ್ಲಿ ಯಾವುದೇ ವೃತ್ತಿ ಮೇಲಲ್ಲ ಅಥವಾ ಕೀಳಲ್ಲ. ಕಸ ಗುಡಿಸುವವನಿಂದ ಹಿಡಿದು ಗುರುವಿನವರೆಗೂ ಪ್ರತಿಯೊಬ್ಬರ ಕಾಯಕವೂ ಗೌರವಯುತವಾದದ್ದು. ಕಾಯಕವನ್ನು ಕೇವಲ ಲಾಭಕ್ಕಾಗಿ ಮಾಡುವುದಲ್ಲ, ಅದರಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು. ಪರರ ಶ್ರಮವನ್ನು ಕಸಿದುಕೊಳ್ಳದೆ ತನ್ನ ಬೆವರಿನ ಹನಿಯಿಂದ ಬದುಕುವುದೇ ನಿಜವಾದ ಜೀವನ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಕೆ.ಎಸ್.ನಂಜುಂಡಸ್ವಾಮಿ, ನಿವೃತ್ತ ಶಿಕ್ಷಕ ಸಿ.ಜಿ. ರಾಮೇಗೌಡ, ಲಂಡನ್‌ನಲ್ಲಿ ವಾಸವಿರುವ ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದ ದಾಸಪುರದ ಪೀಟರ್, ವಾಲಿಬಾಲ್ ಆಟದಲ್ಲಿ ನೂರಕ್ಕೂ ಹೆಚ್ಚು ಪ್ರಶಸ್ತಿ ಪಡೆದು ಮಿಂಚಿನ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದ ಹೃದಯ ರಾಜ್ ಅವರನ್ನು 1985-86ನೇ ಸಾಲಿನ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ, ಕೃಪಾಶಂಕರ್ ವಿದ್ಯುತ್ ಗುತ್ತಿಗೆದಾರ ಗಂಗಾಧರ್ (ಪಾಪಣ್ಣ) ಮೂಡಿಗೆರೆ ಉಮೇಶ್, ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಪ್ರೇಮಕುಮಾರಿ, ಮಂಜುಳಾ, ಕುಮುದಾ, ಮೀನಾಕ್ಷಿ, ಸಂಧ್ಯಾ, ಶಂಕರೇಗೌಡ, ನಾಗೇಂದ್ರ, ಜೋಸೆಫ್, ಜಾನ್ ರೊನಾಲ್ಡ್, ಶಶಿಕಲಾ ನಾಗರಾಜ್, ಎನ್.ಎಸ್. ಗಿರೀಶ್, ಎನ್.ಎಸ್. ಪ್ರಕಾಶ್, ಸುಜಾತಾ ಕುಮಾರ್, ಮಹಾದೇವಪ್ಪ, ಲೋಕೇಶ್, ಅಕ್ಕಿ ಉಮೇಶ್, ಇತರರಿದ್ದರು.