ಶೀಘ್ರವೇ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ 
ರಾಜ್ಯ

ಶೀಘ್ರವೇ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ

ಪ್ರಮುಖ ಮುಖ್ಯಾಂಶಗಳು

  • ಶೀಘ್ರವೇ ಡಿ.ಕೆ ಶಿವಕುಮಾರ ಮುಖ್ಯಮಂತ್ರಿ
  • ಬಿಜೆಪಿ ಮಾಜಿ ಸಂಸದ ರಮೇಶ ಕತ್ತಿ ಭವಿಷ್ಯ
  • ಯಾವ ಕ್ಷಣದಲ್ಲಿಯು ಸಿಎಂ ಬದಲಾವಣೆ ಬಗ್ಗೆ ಕತ್ತಿ ಸುಳಿವು

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆಯಾಗಿ ಶೀಘ್ರದಲ್ಲಿಯೇ ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅಧಿಕಾರ ಹಾಗೂ ಅನುದಾನಕ್ಕಾಗಿ ಜನಪ್ರತಿನಿಧಿಗಳ ನಡುವೆ ಮೂಡಿಬಂದಿದೆ ಒಡಕಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಈಗಿರುವ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿದರೆ ಬರುವ ಜೂನ ಒಳಗೆ ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಇನ್ನೊಂದು ಪೂರಕ ಬಜೆಟ್ ಮಂಡಿಸಬಹುದು.

17 ಬಜೆಟ್ ಮಂಡಿಸಿ ಅನುಭವವಿರುವ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ದಲ್ಲಿ ರಾಜ್ಯ ಕೋಟಿ ಸಾಲಕ್ಕೆ ಸಿಲುಕಿದೆ. ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ನಡೆದಿರುವ ಆಂತರಿಕ ಬೆಳವಣಿಗೆ ಹಾಗೂ ಇಂದಿನ ಬಜೆಟ್ ನೋಡಿದರೆ ಸಿದ್ದರಾಮಯ್ಯ ಸರ್ಕಾರ ಪತನವಾಗುವುದು ನಿಶ್ಚಿತ ಹೇಳಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯ:

ಬಿಜೆಪಿಯಲ್ಲಿ ಅಂಕಿ ಅಂಶಗಳ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡದೆ ಮಲತಾಯಿ ಧೋರಣೆ ತೋರಿದೆ. ಎಲ್ಲ ಇತಿಹಾಸಗಳ ಹಿಂದೆ ಹಾಕಿದ್ದ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಬಜೆಟ್ ಮಂಡಿಸಿದ್ದರೆ ಅವರ ಇತಿಹಾಸ ಇನ್ನೊಂದು ಪುಟದಲ್ಲಿ ಸೇರಿದೆ. ಆದರೆ ಹಿಂದುಳಿದ ಜನರ ಪರ ಹೋರಾಡಿದ ಸಿದ್ದರಾಮಯ್ಯ ಕಾಂಗ್ರೆಸ್ ಆಡಳಿದಲ್ಲಿ ಬದಲಾಗಿದ್ದಾರೆ. ಜನತಾಪರಿವಾರದಲ್ಲಿದ್ದ ಸಿದ್ದರಾಮಯ್ಯ ಇದ್ದಿದ್ದರೆ ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಸ್ಪಂದಿಸಬಹುದಿತ್ತು.

ಅನ್ಯಾಯ ಸಹಿಸಬೇಡಿ:

ಪ್ರತಿಭಟನೆ ಹಾಗೂ ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸಬೇಕಾದ ಅನಿವಾರ್ಯತೆ ಇದ್ದು, ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಅಧಿಕಾರದ ಆಸೆಗಾಗಿ ಬಾಯಿ ಮುಚ್ಚಿಕೊಂಡರೆ ಭವಿಷ್ಯದ ಪೀಳಿಗೆ ಇಂದಿನ ಆಡಳಿತವನ್ನು ಎಂದಿಗೂ ಮೆಚ್ಚುವುದಿಲ್ಲ. ಅಭಿವೃದ್ಧಿ ಆಗದಿದ್ದರೆ ಬರುವ ದಿನಮಾನಗಳಲ್ಲಿ ಪ್ರತ್ಯೇಕವಾದ ಉತ್ತರ ಕರ್ನಾಟಕಕ್ಕೆ ಬೇಡಿಕೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.