ಬೆಂಗಳೂರಿನಲ್ಲಿ ಮಂಗಳವಾರ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿದ ಅತಿ ಹಿಂದುಳಿದ ಸ್ವಾಮೀಜಿಗಳ ನಿಯೋಗ ಮನವಿಪತ್ರ ಸಲ್ಲಿಸಿತು. ಬಸವನಾಗಿ ದೇವ ಶರಣರು, ದೊಡ್ಡೇಂದ್ರ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯರು ಇತರರಿದ್ದರು. 
ರಾಜ್ಯ

ಮಧ್ಯಸ್ಥಿಕೆ ವಹಿಸಲು ಡಿಕೆಶಿ ಅಭಯ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಡಾ.ಪ್ರಣವಾನಂದ ಶ್ರೀಗಳ ಪಾದಯಾತ್ರೆ
  • ಹಿಂದುಳಿದ ವರ್ಗಗಳ ಸ್ವಾಮೀಜಿ ನಿಯೋಗ ಡಿಸಿಎಂ ಭೇಟಿ
ಕಲಬುರಗಿ: ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಾ.ಪ್ರಣವಾನಂದ ಶ್ರೀಗಳು ನಡೆಸುತ್ತಿರುವ ಐತಿಹಾಸಿಕ ಪಾದಯಾತ್ರೆಯನ್ನು ಮಧ್ಯಸ್ಥಿಕೆ ವಹಿಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಅವರ ನಿವಾಸದಲ್ಲಿ ಭೇಟಿಯಾದ ಅತಿ ಹಿಂದುಳಿದ ಸ್ವಾಮೀಜಿಗಳ ರಾಷ್ಟ್ರೀಯ ಅಧ್ಯ ಬಸವನಾಗಿ ದೇವ ಶರಣರು ನೇತೃತ್ವದ ನಿಯೋಗದೊಂದಿಗೆ ಮಹತ್ವದ ಚರ್ಚೆ ನಡೆಸಿ ಪಾದಯಾತ್ರೆ ಸುಖಾಂತ್ಯಗೊಳಿಸಲು ಚಿತ್ರದುರ್ಗದಲ್ಲಿ ತಾವು ವೈಯಕ್ತಿಕವಾಗಿ, ಸಂಪುಟದರ್ಜೆ ಸಚಿವರು ಅಥವಾ ಉಸ್ತುವಾರಿ ಸಚಿವರ ಮೂಲಕ ಸ್ವಾಮೀಜಿಗಳ ಜತೆ ಮಾತುಕತೆ ನಡೆಸಲಾಗುವುದು. ಈಗಾಗಲೇ 22 ಸ್ವಾಮೀಜಿಗಳಿಗೆ ನಿವೇಶನ ನೀಡುವ ಹಳೆಯ ಪ್ರಸ್ತಾಪ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಅತಿ ಹಿಂದುಳಿದ ವರ್ಗಗಳ ಸಮಸ್ಯೆ ಹಾಗೂ ಡಾ.ಪ್ರಣವಾನಂದ ಶ್ರೀಗಳ ಪಾದಯಾತ್ರೆಯ ಕುರಿತಾಗಿ ಕೂಡಲೇ ಕ್ರಮ ಕೈಗೊಳ್ಳಲು ಆಪ್ತ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಉಪಮುಖ್ಯಮಂತ್ರಿಗಳನ್ನು ಭೇಟಿಯಾಗುವ ಮುನ್ನ ಮಾಜಿ ಸಂಸದ ಡಿ.ಕೆ ಸುರೇಶ್​ ಅವರನ್ನು ಭೇಟಿಯಾಗಿ ಅತಿ ಹಿಂದುಳಿದ ಸ್ವಾಮೀಜಿಗಳ ಹೋರಾಟ ಮತ್ತು ಡಾ.ಪ್ರಣವಾನಂದ ಶ್ರೀಗಳ ಪಾದಯಾತ್ರೆಯ ಬಗ್ಗೆ ಗಮನ ಸೆಳೆಯಲಾಯಿತು.
ಉಪಮುಖ್ಯಮಂತ್ರಿಗಳನ್ನು ಭೇಟಿಯಾದ ಅತಿ ಹಿಂದುಳಿದ ಸ್ವಾಮೀಜಿಗಳ ರಾಷ್ಟ್ರೀಯ ಅಧ್ಯ ಬಸವನಾಗಿ ದೇವ ಶರಣರು ನಿಯೋಗದ ನೇತೃತ್ವ ವಹಿಸಿದ್ದು ಡಾ.ಪ್ರಣವಾನಂದ ಶ್ರೀಗಳು ನಡೆಸುತ್ತಿರುವ ಪಾದಯಾತ್ರೆ ಕೇವಲ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಸಮಸ್ಯೆಯಲ್ಲ. ಅತಿ ಹಿಂದುಳಿದವರು ಅನುಭವಿಸುತ್ತಿರುವ ಸಮಸ್ಯೆಯಾಗಿರುವುದರಿಂದ ಅವರೊಂದಿಗೆ ಪಾದಯಾತ್ರೆಯಲ್ಲಿ ಕೈಜೋಡಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜನವರಿ 6ರಂದು ಪ್ರಾರಂಭಗೊಂಡ ಪಾದಯಾತ್ರೆಯು 21 ದಿನ ಪೂರೈಸಿ ಈಗ ಮಧ್ಯ ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿದೆ. ಪಾದಯಾತ್ರೆ ಇನ್ನೂ ಮುಂದುವರಿದರೆ ಮುಜುಗರ ಉಂಟಾಗುವ ಸಾಧ್ಯತೆ ಇದೆ. 18 ಬೇಡಿಕೆಗಳಲ್ಲಿ ಕನಿಷ್ಠ ಐದು ಬೇಡಿಕೆಗಳನ್ನಾದರೂ ಇತ್ಯರ್ಥಪಡಿಸಲು ಸರ್ಕಾರ ಮುಂದಾಗ ಬೇಕಾಗಿದೆ. ಆದರೆ ಇನ್ನೂ ಯಾವುದೇ ಸ್ಪಂದನೆ ನೀಡದಿರುವುದು ಅತ್ಯಂತ ಖೇದಕರ ಸಂಗತಿ. ಹೀಗಾಗಿ ಉಪಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶ ಮಾಡಿ ಪಾದಯಾತ್ರೆಯನ್ನು ನಿಲ್ಲಿಸುವಂತೆ ಸ್ವಾಮೀಜಿಗಳ ಜತೆ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿಪತ್ರ ನೀಡಿ ಆಗ್ರಹಿಸಿದರು.
ನಿಯೋಗದಲ್ಲಿ ಅತಿ ಹಿಂದುಳಿದ ಸ್ವಾಮೀಜಿಗಳ ಖಜಾಂಚಿ ದೊಡ್ಡೇಂದ್ರ ಸ್ವಾಮೀಜಿ, ಉಪಾಧ್ಯ ಕುಂಬಾರ ಗುಂಡಯ್ಯ ಸ್ವಾಮೀಜಿ ಹಾಗೂ ಸಂಟನಾ ಕಾರ್ಯದರ್ಶಿ ಶಿವಮೂರ್ತಿ ಶಿವಾಚಾರ್ಯರು ಇದ್ದರು.
"

ಸಮಸ್ಯೆ ಬಗೆಹರಿಸಲು ಸಾಧ್ಯವಿರುವ ಬೇಡಿಕೆಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ ಸ್ವಾಮೀಜಿಯವರು ಪಾದಯಾತ್ರೆ ಕೈ ಬಿಡುವಂತೆ ಮನವೊಲಿಸಲಾಗುವುದು. ಅತಿ ಹಿಂದುಳಿದ ಸ್ವಾಮೀಜಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 60-40 ನಿವೇಶನ ನೀಡುವುದಾಗಿ ತಾವು ನೀಡಿದ ಭರವಸೆ ಕೂಡಲೇ ಈಡೇರಿಸಲಾಗುವುದು.

ಡಿ.ಕೆ.ಶಿವಕುಮಾರ್​,

ಉಪ ಮುಖ್ಯಮಂತ್ರಿ.