DK Shivakumar CM oath 
ರಾಜ್ಯ

ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್; ಜೂ.3ರಂದು ಲೋಕ ಭವನದಲ್ಲಿ ಪದಗ್ರಹಣ..DK Shivakumar

ಪ್ರಮುಖ ಮುಖ್ಯಾಂಶಗಳು

  • ಲೋಕಭವನದಲ್ಲಿ ಸಿಎಂ ಪದಗ್ರಹಣ ಕಾರ್ಯಕ್ರಮ ಆಯೋಜನೆ
  • ಜೂನ್​ 3ರಂದು ಡಿಕೆ ಶಿವಕುಮಾರ್​ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ
  • ಡಿಕೆ ಶಿವಕುಮಾರ್​ರೊಂದಿಗೆ 12 ಮಂದಿ ಸಚಿವರು ಪ್ರಮಾಣ ವಚನ ಸ್ವೀಕಾರ?
ಬೆಂಗಳೂರು:  ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ  ಡಿಕೆ ಶಿವಕುಮಾರ್  ಅವರು ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದ ಗಾಜಿನ ಮನೆಯಲ್ಲಿ ಸರಳವಾಗಿ ಸಮಾರಂಭ ನಡೆಯಲಿದೆ ಎನ್ನುವ  ಮಾಹಿತಿಯನ್ನು ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್  ಅವರು ನೀಡಿದ್ದಾರೆ.

ರಾಜ್ಯಪಾಲರ ಜೊತೆ ಚರ್ಚೆ

ಇಂದು ರಾಜ್ಯಪಾಲ ಥಾವರ್​​ ಚಂದ್​ ಗೆಹಲೋಟ್​ರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗವು, ಡಿಕೆ ಶಿವಕುಮಾರ್​ ಅವರೊಂದಿಗೆ ನೂತನ ಸಚಿವ ಸಂಪುಟ ಪದಗ್ರಹಣ ಸ್ವೀಕಾರದ ಬಗ್ಗೆ ಮಾತುಕತೆ ನಡೆಸಿವೆ ಎನ್ನಲಾಗಿದೆ.

ಲೋಕಭವನದಲ್ಲಿ ಸಮಾರಂಭ

ವಿಧಾನಸೌಧದ ಬಳಿ  ಪದಗ್ರಹಣ ಸಮಾರಂಭ ನಡೆಯಬೇಕು ಎನ್ನುವುದು ಡಿಕೆ ಶಿವಕುಮಾರ್​ ಅವರ ಆಶಯವಾಗಿತ್ತು. ಆದರೆ ಹೈಕಮಾಂಡ್​  ಸೂಚನೆಯಂತೆ, ಸರಳವಾಗಿ ಲೋಕಭವನದ ಗ್ಲಾಸ್​ಹೌಸ್​​ನಲ್ಲಿ ಸಮಾರಂಭ ಆಯೋಜಿಸಲಾಗುತ್ತದೆ.  ಹೆಚ್ಚು ಜನರು ಸೇರಿ ಅಹಿತಕರ ಘಟನೆ ನಡೆಯದಂತೆ ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಾಗಿದೆ ಎನ್ನಲಾಗುತ್ತಿದೆ. 
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮೇ.28ರಂದು ರಾಜೀನಾಮೆ ನೀಡಿದ್ದಾರೆ. ಇಂದು (ಮೇ.30) ಸಂಜೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಕೆ ಶಿವಕುಮಾ‌ರ್ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಈಗಾಗಲೇ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಡಿಕೆ ಶಿವಕುಮಾರ್​ ಅವರೊಂದಿಗೆ 12ರಿಂದ 14 ಸಚಿವರು ಜೂನ್​ 3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).