ಉದ್ಯಮಿ ಒಕ್ಕಲಿಗರ ಎಕ್ಸ್​ಪೋದಲ್ಲಿ ಮಳಿಗೆಗೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ 
ರಾಜ್ಯ

ಸಿಎಂ ಸ್ಥಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ; ಬಂಡೆಗೆ ಉಳಿಪೆಟ್ಟು ಜಾಸ್ತಿ ಎಂದು ವಿಶ್ಲೇಷಣೆ

ಪ್ರಶಾಂತ ರಿಪ್ಪನ್​ಪೇಟೆ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಸ್ಥಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಡಿಸಿಎಂ
  • ಬಂಡೆಗೆ ಉಳಿಪೆಟ್ಟು ಜಾಸ್ತಿ ಎಂದು ಡಿಕೆಶಿ ವಿಶ್ಲೇಷಣೆ
  • ಅಭಿಮಾನಿಗಳು ಅನುಮಾನ ಪಡುವುದು ಬೇಡ ಎಂದು ಭರವಸೆ

ಬೆಂಗಳೂರು:ಯಾವುದೇ ಗಾಡ್ಫಾದರ್‌ಗಳಿಲ್ಲದೆ ಈ ಹಂತಕ್ಕೆಬೆಳೆದು ಬಂದಿದ್ದು,ಮುಂದೆ ನಮ್ಮಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋಕಾಯ್ದು ನೋಡಬೇಕು.ನನಗಂತೂ ವಿಶ್ವಾಸಇದೆ ಎಂದು ಸಿಎಂ ಸ್ಥಾನದ ಕುರಿತುಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅರಮನೆಮೈದಾನದಲ್ಲಿ ಆಯೋಜಿಸಿದ್ದ ಉದ್ಯಮಿಒಕ್ಕಲಿಗ ಎಕ್ಸ್‌ಪೋ ಸಮಾರೋಪಸಮಾರಂಭದಲ್ಲಿ ಭಾಗಿಯಾಗಿಮಾತನಾಡಿದರು.

ನಮ್ಮತಂದೆ, ತಾತಯಾರೂ ದೊಡ್ಡ ಮಂತ್ರಿ,ಮುಖ್ಯಮಂತ್ರಿಅಥವಾ ಪ್ರಧಾನಮಂತ್ರಿಯಾಗಿರಲಿಲ್ಲ.ಸಾಮಾನ್ಯ ಗ್ರಾಮಪಂಚಾಯಿತಿ ಸದಸ್ಯರಾಗಿದ್ದರು.ಆದರೆ ನಾನುನಿರಂತರ ಶ್ರಮದಿಂದ ಇಲ್ಲಿಗೆಬಂದು, ಎಲ್ಲರೊಂದಿಗೆಹೋರಾಡಿ ಈ ಹಂತಕ್ಕೆ ಬೆಳೆದುಬಂದಿದ್ದೇನೆ.ನಮ್ಮವರೆ ನಮ್ಮವಿರುದ್ಧ ಮಾತನಾಡುತ್ತಾರೆ. ಕುಮಾರಸ್ವಾಮಿಯವರುಮುಖ್ಯಮಂತ್ರಿಗಳಾದಾಗ ಎಷ್ಟೆಲ್ಲಾಶ್ರಮ ಪಟ್ಟಿದ್ದೇನೆ ಎಂಬುದುನನಗೇ ಗೊತ್ತು.ಆದರೆ ಅವರು ನನ್ನವಿರುದ್ಧ ‘ಬೆನ್ನಿಗೆ ಚೂರಿಹಾಕಿದ್ದಾರೆ’ ಎಂದು ಆರೋಪಮಾಡಿದ್ದಾರೆ.ಅವರು ತಮ್ಮಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿಎಂದು ಕುಮಾರಸ್ವಾಮಿಗೆ ತಿರುಗೇಟುನೀಡಿದ ಡಿಕೆಶಿ,ಯಾರು ಸ್ಟ್ರಾಂಗ್ಇರುತ್ತಾರೋ ಅವರಿಗೆ ಶತ್ರುಗಳುಹೆಚ್ಚು. ನನಗೆಬಂಡೆ ಎನ್ನುತ್ತಾರೆ.ಬಂಡೆಗೆ ಉಳಿಪೆಟ್ಟುಹೆಚ್ಚು. ‘ಬಂಡೆಪ್ರಕೃತಿ,ಕೆತ್ತಿದರೆಆಕೃತಿ, ಪೂಜಿಸುವುದುಸಂಸ್ಕೃತಿ’ ಎಂದು ವಿಶ್ಲೇಷಿಸಿದರು.

ರಾಜಕೀಯದುರುದ್ದೇಶದಿಂದ ನನ್ನನ್ನುಜೈಲಿಗೆ ಕಳುಹಿಸಿದರು.ಆಗ ಸಮುದಾಯದಬಂಧುಗಳು ನನ್ನ ಪರವಾಗಿ ನಿಂತಿದ್ದಾರೆ.ಈಗಲೂ ನನ್ನಭವಿಷ್ಯಕ್ಕಾಗಿ ದೇವರಲ್ಲಿಪ್ರಾರ್ಥನೆ ಮಾಡುತ್ತಿದ್ದಾರೆ.ಪ್ರಯತ್ನಗಳುವ್ಯರ್ಥವಾಗಬಹುದು.ಆದರೆ ಪ್ರಾರ್ಥನೆಗಳುಎಂದಿಗೂ ವಿಲವಾಗುವುದಿಲ್ಲ.ನನ್ನ ಭವಿಷ್ಯದಬಗ್ಗೆ ಯಾರೂ ಚಿಂತೆ ಮಾಡುವಅಗತ್ಯವಿಲ್ಲ ಎಂದು ಡಿಕೆಶಿ ಇದೇವೇಳೆ ಮಾರ್ಮಿಕವಾಗಿ ನುಡಿದರು.

ಸಂಕ್ರಾಂತಿ ನಂತರ ಸಿಹಿಸುದ್ದಿ ?

ಒಕ್ಕಲಿಗ ನಾಯಕರ ಕೊಡುಗೆಯನ್ನು ಈ ರಾಜ್ಯ ಎಂದೂ ಮರೆಯುವಂತಿಲ್ಲ. ಕೆ.ಸಿ.ರೆಡ್ಡಿ ದೇವೇಗೌಡ, ಕುಮಾರಸ್ವಾಮಿಯವರನ್ನು ಸ್ಮರಿಸುವಂತೆ, ಡಿ.ಕೆ.ಶಿವಕುಮಾರ್ ಅವರು ಮಾಡಿರುವ ಕಾರ್ಯಗಳು ಸಾಕಷ್ಟಿವೆ. ಪಾವಗಡದ ಸೋಲಾರ್ ಪ್ಲಾಂಟ್, ಗ್ರೇಟರ್ ಬೆಂಗಳೂರು ಮತ್ತಿತರ ಯೋಜನೆಗಳು ಇತಿಹಾಸದ ಪುಟದಲ್ಲಿ ಶಾಶ್ವತವಾಗಿರಲಿವೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ. ಇಡೀ ಸಮುದಾಯ ಡಿಕೆಶಿಯವರನ್ನು ಉನ್ನತ ಸ್ಥಾನದಲ್ಲಿ ನೋಡಲು ಕಾತುರದಿಂದ ಕಾಯುತ್ತಿದೆ. ಸಂಕ್ರಾಂತಿ ನಂತರ ಪಕ್ಷದ ಹೈಕಮಾಂಡ್ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಆದಿಚುಂಚನಗಿರಿ ಶ್ರೀಗಳು ಸಮುದಾಯದ ನಾಯಕರಿಗೆ ಅನ್ಯಾಯವಾದರೆ 1993ರಲ್ಲಿ ನಡೆದ ಹೋರಾಟ ಮರುಕಳಿಸಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದರು.