ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜಯಂತಿ ನಿಮಿತ್ತ ಶಹಾಪುರದಲ್ಲಿ ಮಂಗಳವಾರ ಆರ್.ಚನ್ನಬಸ್ಸು ವನದುರ್ಗ, ನೀಲಕಂಠ ಬಡಿಗೇರ ಕರಪತ್ರ ಬಿಡುಗಡೆ ಮಾಡಿದರು. ಗೌಡಪ್ಪಗೌಡ ಆಲ್ದಾಳ, ಶ್ರೀಶೈಲ ಹೊಸ್ಮನಿ, ಶೇಖರ ದೊರೆ, ರಾಜು ಅಣಬಿ, ಚನ್ನಪ್ಪ ಆನೇಗುಂದಿ, ಡಾ.ರವೀಂದ್ರನಾಥ ಹೊಸ್ಮನಿ, ರಂಗನಾಥ ದೊರೆ, ಶ್ರೀಶೈಲ ಬಿರಾದಾರ, ಪ್ರಕಾಶ ದೊರೆ, ಬಸವರಾಜ ಸಿನ್ನೂರ್ ಇತರರಿದ್ದರು.
- ಆಯೋಜಕರಾದ ಚನ್ನಬಸ್ಸು &ಬಡಿಗೇರ ಮಾಹಿತಿ
- ಶಹಾಪುರದಲ್ಲಿ ಕಾರ್ಯಕ್ರಮ ಆಯೋಜನೆ
ಶಹಾಪುರ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸ್ವಾಭಿಮಾನಿ ಬಳಗದಿಂದ ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಮೇ 31ರಂದು ಭೀ.ಗುಡಿಯ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಭಾಗ ಮಟ್ಟದ ಕವಿಗೋಷ್ಠಿ, ಕೋಲ್ಮಿಂಚಿನ ಬೆಳಕು ಪುಸ್ತಕ ಲೋಕಾರ್ಪಣೆ ಹಾಗೂ ಬುದ್ಧ ಬಸವ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಆರ್.ಚನ್ನಬಸ್ಸು ವನದುರ್ಗ, ನೀಲಕಂಠ ಬಡಿಗೇರ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ, ಸಹೋದರತ್ವ, ಮಾನವೀಯತೆ ಹಾಗೂ ಸಂವಿಧಾನಿಕ ಮೌಲ್ಯ ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಇಂದಿನ ಯುವ ಪೀಳಿಗೆಗೆ ಅವರ ವಿಚಾರಧಾರೆಗಳ ಅರಿವು ಮೂಡಿಸುವುದು ಬಹಳ ಅಗತ್ಯವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಸಾಹಿತ್ಯ, ಸಂಸತಿ ಮತ್ತು ಸಾಮಾಜಿಕ ಜಾಗೃತಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ವಿಭಾಗ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದ್ದು, 150 ಹೆಚ್ಚು ಜನ ಕವಿಗಳು ಪಾಲ್ಗೊಳ್ಳುವ ನಿರೀೆ ಇದೆ. ಸಾಹಿತ್ಯಾಸಕ್ತರು, ಯುವಕರು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಗೌಡಪ್ಪಗೌಡ ಆಲ್ದಾಳ, ಶ್ರೀಶೈಲ ಹೊಸ್ಮನಿ, ಶೇಖರ ದೊರೆ, ರಾಜು ಅಣಬಿ, ಚನ್ನಪ್ಪ ಆನೇಗುಂದಿ, ಡಾ.ರವೀಂದ್ರನಾಥ ಹೊಸ್ಮನಿ, ರಂಗನಾಥ ದೊರೆ, ಶ್ರೀಶೈಲ ಬಿರಾದಾರ, ಪ್ರಕಾಶ ದೊರೆ, ಬಸವರಾಜ ಸಿನ್ನೂರ್ ಇತರರಿದ್ದರು.