ಬೀದರ್ನಲ್ಲಿ ಆಯೋಜಿಸಿದ್ದ ಗೊಂಡ ಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ತುಕಾರಾಮ ಚಿಮಕೋಡೆ ಮಾತನಾಡಿದರು. ಮಾಳಪ್ಪ ಅಡಸಾರೆ, ವೆಂಕಟೇಶ ಎಕಲಾರಕರ್, ಲೋಕೇಶ ಮರ್ಜಾಪುರ ಇತರರಿದ್ದರು.
ಬೀದರ್: ಗೊಂಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಆ.15ರಂದು ಜಿಲ್ಲಾಮಟ್ಟದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ.
ನಗರದ ಗಾಂಧಿಗಂಜ್ನ ಕನಕ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೋಡೆ ಈ ವಿಷಯ ತಿಳಿಸಿದರು. ಅಂದು ನಗರದಲ್ಲಿ ಅಲಂಕೃತ ವಾಹನದಲ್ಲಿ ಭಾರತ ಮಾತೆ ಹಾಗೂ ಸಂಗೊಳ್ಳಿ ರಾಯಣ್ಣ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಗುವುದು. ನಂತರ ವೇದಿಕೆ ಸಮಾರಂಭ ಜರುಗಲಿದೆ. ರಾಜಕೀಯ ಗಣ್ಯರು, ಸಮಾಜದ ಹೋರಾಟಗಾರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಾಣಿಕ ಲದ್ದೆ, ಪ್ರಮುಖರಾದ ರತಿಕಾಂತ ಜೋಜನಾ, ರವಿ ದುರ್ಗೆ, ಬಾಬುರಾವ ಮಲ್ಕಾಪುರೆ, ಮಾಳಪ್ಪ ಅಡಸಾರೆ, ಎಂ.ಎಸ್. ಕಟಗಿ, ರಮೇಶ ಮರ್ಜಾಪುರ, ಲೋಕೇಶ ಮರ್ಜಾಪುರ, ಸಂತೋಷ ಜೋಳದಾಪಕೆ, ನರಸಪ್ಪ ಯಾಕತಪುರ, ವೆಂಕಟೇಶ ಎಕಲಾರಕರ್, ಡಾ.ಉದಯಸಿಂಗ್, ಆನಂದ ಖಾಶೆಂಪುರ, ಶಿವು ಟೊಳ್ಳೆ, ಕಲ್ಲಪ್ಪ ಬೆನಕನಳ್ಳಿ, ಬಜರಂಗ ಖಾಶೆಂಪುರ, ಸಂಗಪ್ಪ ಚಿದ್ರಿ, ಕುಶಾಲ್ ಹಾಸಗೊಂಡ, ಬೊಮ್ಮಗೊಂಡ ಚಿಟ್ಟಾ, ದತ್ತು, ವಿಶ್ವನಾಥ, ಶಿವರಾಜ, ದೀಪಕ್ ಚಿದ್ರಿ, ಕಲ್ಲಪ್ಪ, ಗಣೇಶ ಇತರರಿದ್ದರು.