ಕವಿ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಕಲಬುರಗಿಯಲ್ಲಿ ಬುಧವಾರ ಬಿಡುಗಡೆ ಮಾಡಿದರು. ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ ಇತರರಿದ್ದರು. 
ರಾಜ್ಯ

ಜಿಲ್ಲಾ ಮಟ್ಟದ ಕವಿ ಸಮ್ಮೇಳನ 31ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಕಸಾಪ ಜಿಲ್ಲಾಧ್ಯಕ್ಷ ತೇಗಲತಿಪ್ಪಿ ಮಾಹಿತಿ
  • ಕನ್ನಡ ಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾ ಮತ್ತು ತಾಲೂಕು ಟಕದ ಸಹಯೋಗದಡಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಮೇ 31ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಪ್ರಥಮ ಕವಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್​ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.
ಪತ್ರಕರ್ತ, ಚಿತ್ತಾಪುರದ ಲಿಂ.ನಾಗಯ್ಯ ಸ್ವಾಮಿ ಅಲ್ಲೂರ ವೇದಿಕೆಯಡಿ ಹಿರಿಯ ಸಾಹಿತಿ ನರಸಿಂಗರಾವ್​ ಹೇಮನೂರ ಸರ್ವಾಧ್ಯಕ್ಷತೆಯ ಸಮ್ಮೇಳನವನ್ನು ಶಹಾಪುರ ಏಕದಂಡಗಿ ಮಠದ ಶ್ರೀ ಅಜ್ಜೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಗೋದುತಾಯಿ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಸೀಮಾ ಪಾಟೀಲ್​, ಸಾಹಿತ್ಯ ಪ್ರೇರಕ ಸಿದ್ರಾಮಯ್ಯ ಹಿರೇಮಠ, ಕಸಾಪ ತಾಲೂಕು ಅಧ್ಯೆ ಶಿವಲೀಲಾ ಕಲಗುರ್ಕಿ, ಸ್ವಾಗತ ಸಮಿತಿಯ ಸುರೇಶ ಪಾಟೀಲ ಜೋಗೂರ, ಶಿವಾನಂದ ಹೊನಗುಂಟಿ, ರಾಜೇಶ್ವರಿ ಸಾಹು ಮುಖ್ಯ ಅತಿಥಿಗಳಾಗಿರುವರು.
ಮಧ್ಯಾಹ್ನ 12.30ಕ್ಕೆ ಕಾವ್ಯ ರಸಗಂಗೆ ಮನವು ತೊಳೆದಂಗೆ ಗೋಷ್ಠಿಯಲ್ಲಿ ಕಾವ್ಯ ಪರಂಪರೆ ಹಾಗೂ ಪ್ರಸ್ತುತ ಸವಾಲುಗಳು ಕುರಿತು ಲೇಖಕಿ ಡಾ.ಕಾವ್ಯಶ್ರೀ ಮಹಾಗಾಂವಕರ್​ ಮತ್ತು ಸಮ್ಮೇಳನಾಧ್ಯಕ್ಷರ ಬದುಕು&ಬರಹ ಕುರಿತು ಉಪನ್ಯಾಸಕ ಡಾ.ಲಕ್ಷಿ$್ಮಕಾಂತ ಪಂಚಾಳ ಮಾತನಾಡಲಿದ್ದಾರೆ. 1.45ಕ್ಕೆ ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಅಧ್ಯಕ್ಷತೆಯಲ್ಲಿ ನುಡಿ ತೋರಣ ಕವಿಗೋಷ್ಠಿ, 3.30ಕ್ಕೆ ಜರುಗಲಿರುವ ಸಮಾರೋಪದಲ್ಲಿ ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಮಾತನಾಡುವರು.
ಸಾಹಿತ್ಯ ೇತ್ರಕ್ಕೆ ಅಮೋ ಕೊಡುಗೆ ನೀಡಿದ ಡಾ.ಜಗನ್ನಾಥ ತರನಳ್ಳಿ, ವೆಂಕಟೇಶ ಜನಾದ್ರಿ, ಮಲ್ಲಿನಾಥ ಆಲೇಗಾಂವ, ಮಲ್ಲಮ್ಮ ಕಾಳಗಿ, ಡಾ.ಪ್ರೇಮಾ ಅಪಚಂದ, ರಾಜೇಂದ್ರ ಝಳಕಿ, ಡಾ.ನಾಗರಾಜ ಹೆಬ್ಬಾಳ, ಗಿರೀಶಗೌಡ ಇನಾಮದಾರ, ಡಾ.ಮಿರಾಜ್​ ಪಾಶಾ ಅವರಿಗೆ ಕಾವ್ಯ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.