*District administration provides assistance to girl suffering from brain cancer 
ರಾಜ್ಯ

*ಮಿದುಳು ಕ್ಯಾನ್ಸರ್‌ಗೆ ತುತ್ತಾದ ಬಾಲಕಿಗೆ ಜಿಲ್ಲಾಡಳಿತದ ನೆರವು

ಗುಬ್ಬಿ: ಆಧಾರ್ ಕಾರ್ಡ್‌ನಲ್ಲಿ ಕನ್ನಡದಲ್ಲಿ ಹೆಸರು ಇಲ್ಲದೆ ಸಮಸ್ಯೆ ಎದುರಿಸಿದ್ದ ಮಿದುಳು ಕ್ಯಾನ್ಸರ್‌ಗೆ ತುತ್ತಾದ ಬಾಲಕಿಗೆ ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಾಲ್ಕು ದಿನದಲ್ಲಿ ಆಧಾರ್ ತಿದ್ದುಪಡಿ ಹಾಗೂ ಬಿಪಿಎಲ್ ಕಾರ್ಡ್ ಸಿದ್ಧ ಮಾಡಿ ಕುಟುಂಬಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಹಸ್ತಾಂತರ ಮಾಡಿದ್ದಾರೆ.
ಪಟ್ಟಣದ ಸಮೀಪದ ಜಿ.ಹರಿವೇಸಂದ್ರ ಗ್ರಾಮದ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಹತ್ತು ವರ್ಷದ ಪುತ್ರಿ ಐದು ತಿಂಗಳ ಹಿಂದೆ ಜ್ವರದಿಂದ ಬಳಲಿ ನಂತರ ಕೈ ಕಾಲು ಸ್ವಾಧೀನ ಇಲ್ಲದಂತಾಗಿ ನಿಮ್ಹಾನ್ಸ್‌ಗೆ ತೆರಳಿದಾಗ ಮಿದುಳು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ವಿಚಾರ ತಿಳಿದು ಬಂದಿತ್ತು. ಚಿಕಿತ್ಸೆಗೆ ತೆರಳಿದಾಗ ಬಾಲಕಿಯ ಆಧಾರ್ ಕಾರ್ಡ್ ಸರಿ ಇಲ್ಲದ ಬಗ್ಗೆ ತಿಳಿದು ತಿದ್ದುಪಡಿಗೆ ನಿರಂತರ ಪ್ರಯತ್ನ ಪಟ್ಟಿದ್ದರೂ ಪ್ರಯೋಜನ ಆಗಿರಲಿಲ್ಲ.
ಈ ವಿಷಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಸ್ಪಂದಿಸಿದ ಜಿಲ್ಲಾಡಳಿತ ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ಬಾಲಕಿಯ ಮನೆಗೆ ಸಿಬ್ಬಂದಿ ತೆ ಬಂದು ಆಧಾರ್‌ಕಾರ್ಡ್ ತಿದ್ದುಪಡಿ ಮಾಡಿಸಿದ್ದಾರೆ. ನಂತರ ಬಿಪಿಎಲ್ ಕಾರ್ಡ್‌ಗೆ ಬಾಲಕಿ ಹೆಸರು ಸೇರ್ಪಡೆ ಮಾಡಿದ ತಾಲೂಕು ಆಡಳಿತ ಪಡಿತರ ಚೀಟಿ ಸಿದ್ಧಪಡಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಿದರು.