District administration accelerates digital census 
ರಾಜ್ಯ

ಜಿಲ್ಲಾಡಳಿತದಿಂದ ಡಿಜಿಟಲ್​ ಜನಗಣತಿ ಚುರುಕು

ಚಿಕ್ಕಬಳ್ಳಾಪುರ ಡೆಸ್ಕ್
*3082 ಬ್ಲಾಕ್​ ರಚನೆ, 2,537 ಗಣತಿದಾರರು, 442 ಮೇಲ್ವಿಚಾರಕರ ನೇಮಕ
ಚಿಕ್ಕಬಳ್ಳಾಪುರ: ಡಿಜಿಟಲ್​ ಜನಗಣತಿ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಜಿಲ್ಲಾಡಳಿತ ನಿರ್ವಹಣೆ ಚಟುವಟಿಕೆಯನ್ನು ಚುರುಕುಗೊಳಿಸಿದೆ.
"

33 ಪ್ರಶ್ನೆಗಳಲ್ಲಿ ಮಾಹಿತಿ

ನಗಣತಿಯು ಸಂವಿಧಾನಾತ್ಮಕ ಮತ್ತು ಶಾಸನಬದ್ಧ ಚಟುವಟಿಕೆಯಾಗಿದ್ದು, ಏ.16 ರಿಂದ ಮೇ 15 ರವರೆಗೆ ಮನೆ ಮನೆಗೆ ಭೇಟಿ ನೀಡುವ ಜನಗಣತಿ ಕಾಯ್ದೆ 1948 ಸೆಕ್ಷನ್​ 8 ರಂತೆ ಮತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ ಆರ್​ಡಿ. 119.ಟಿಎನ್​ಆರ್​.2026, ದಿನಾಂಕ 6&3&2026 ರ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ವಸತಿ ಗುಣಮಟ್ಟ, ಸೌಕರ್ಯಗಳು (ನೀರು, ವಿದ್ಯುತ್​ ಮತ್ತು ಶೌಚಗೃಹ, ಸ್ವತ್ತುಗಳು ಸೇರಿ ಇತರ ವಿಚಾರಗಳಿಗೆ ಸಂಬಂಧಿಸಿದಂತೆ 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ.ಜನಗಣತಿಯ ಮೊದಲನೇ ಹಂತವು ಪ್ರತಿಯೊಂದು ಕುಟುಂಬ ರಚನೆ ಮತ್ತು ಮ್ಯಾಪ್​ಅನ್ನು ಒಳಗೊಂಡಿದ್ದು, 2027ನೇ ಸಾಲಿನಲ್ಲಿ ಫೆಬ್ರವರಿಯಿಂದ 2ನೇ ಹಂತದ ಜನಸಂಖ್ಯಾ ಗಣತಿ ಪ್ರಕ್ರಿಯೆ ನಡೆಯಲಿದೆ.

"

ಸ್ವ ಜನಗಣತಿ

ನಗಣತಿ ಕಾರ್ಯದ ಮೊದಲನೇ ಹಂತವಾಗಿ ಸ್ವಯಂ ಜನಗಣತಿ ಕಾರ್ಯವು ಏ.1 ರಿಂದ ಏ.15 ರವರೆಗೆ ನಡೆದಿದೆ. ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ನೇರವಾಗಿ ಜನಗಣತಿ ನಿರ್ದೇಶನಾಲಯದ ಸ್ವಗಣತಿ ಪೋರ್ಟಲ್​ ಮೂಲಕ ಮೊಬೈಲ್​ ಸಂಖ್ಯೆಯನ್ನು ಬಳಸಿ ಲಾಗಿನ್​ ಆಗಿ, ಅಗತ್ಯ ಮಾಹಿತಿ ನಮೂದಿಸಿದ್ದಾರೆ. ಇದಕ್ಕೆ ಸೃಜನೆಯ ಐಡಿ ಪಡೆದುಕೊಂಡಿದ್ದಾರೆ. ಇನ್ನು ಗಣತಿದಾರರು ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗೆ ಏ.16ರಿಂದ ಮೇ 15 ರವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ.

"

ನಗಣತಿಯ ಮಾಹಿತಿಗಳು ಯೋಜನೆ, ಸಮಾಜ ಕಲ್ಯಾಣ ಯೋಜನೆಗಳು, ಸಂಪನ್ಮೂಲ ಹಂಚಿಕೆ ಮತ್ತು ಕ್ಷೇತ್ರಗಳ ಗಡಿ ರ್ನಿಣಯಕ್ಕೆ ಅಡಿಪಾಯವನ್ನು ರೂಪಿಸುತ್ತವೆ.ಇದಕ್ಕೆ ಜಿಲ್ಲೆಯ ಜನರು ಮಾಹಿತಿ ನೀಡಬೇಕು. ಸ್ವಯಂ ಗಣತಿ ಪೂರ್ಣಗೊಂಡಿರುವ ಸಾರ್ವಜನಿಕರು ಗಣತಿ ಗುರುತಿನ ಸಂಖ್ಯೆಯನ್ನು ಕಡ್ಡಾಯವಾಗಿ ಗಣತಿದಾರರಿಗೆ ನೀಡಿ, ಕಾರ್ಯ ಯಶಸ್ವಿಗೊಳಿಸಬೇಕು.

> ಜಿ.ಪ್ರಭು, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ 50 ಕ್ಷೇತ್ರ ತರಬೇತುದಾರರು ಕಾರ್ಯನಿರ್ವಹಿಸಲಿದ್ದಾರೆ. ಜನಗಣತಿ ನಿರ್ದೇಶನಾಲಯದ ಅಧಿಕಾರಿಗಳಿಂದ ತರಬೇತಿಯನ್ನು ಮಾ.17ರಿಂದ ಮಾ.20 ರವರೆಗೆ ನಡೆದಿದೆ.