ಕಲಬುರಗಿ ಡಿಸಿ ಕಚೇರಿ ಆವರಣದಲ್ಲಿರುವ ದಕ್ಷಿಣ ಮತಕ್ಷೇತ್ರದ ಕಚೇರಿ ಎದುರು ಶಾಸಕ ಅಲ್ಲಮಪ್ರಭು ಪಾಟೀಲ್ ವಿಕಲಾಂಗರಿಗೆ ಗುರುವಾರ ತ್ರಿಚಕ್ರವಾಹನ ವಿತರಿಸಿದರು. ಲಾಲ್ ಅಹ್ಮದ್ ಬಾಂಬೆ ಶೇಠ್ ಇತರರಿದ್ದರು.
ಕಲಬುರಗಿ: ದಕ್ಷಿಣ ಮತಕ್ಷೇತ್ರದ ಅಡಿಯ 12 ಜನ ವಿಕಲಾಂಗರಿಗೆ ಶಾಸಕ ಅಲ್ಲಮಪ್ರಭು ಪಾಟೀಲರು ತಮ್ಮ ಕಚೇರಿ ಆವರಣದಲ್ಲಿ ಗುರುವಾರ ತ್ರಿಚಕ್ರ ವಾಹನ ವಿತರಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ವರ್ಷ 35, ನಂತರದಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ 35 ವಾಹನ ವಿತರಿಸಲಾಗಿತ್ತು. ಇದೀಗ ವಿತರಿಸಿದ 12 ಸೇರಿ ಈವರೆಗೆ 82 ಜನ ವಿಕಲಾಂಗರಿಗೆ ವಾಹನ ನೀಡಿ ಬೆಂಬಲಿಸಲಾಗಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯ 55 ವಾರ್ಡ್ ಹಾಗೂ 28 ಹಳ್ಳಿ ಸೇರಿ ದಣ ಮತೇತ್ರದ ವ್ಯಾಪ್ತಿಯ ಎಲ್ಲಾ ಕಡೆಗಳಲ್ಲಿರುವ ವಿಕಲಾಂಗರಿಗೆ ವಾಹನದ ನೆರವಿನಿಂದ ತಮ್ಮ ದಿನದ ಕೆಲಸಗಳಲ್ಲಿ ತೊಡಗಲು ಅನುಕೂಲ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಉಳಿದವರಿಗೂ ವಾಹನಗಳನ್ನು ನೀಡಲಾಗುತ್ತದೆ ಎಂದರು.
ಕಲಬುರಗಿ ದಕ್ಷಿಣ ಮತೇತ್ರದಲ್ಲಿ ಯಾರೊಬ್ಬ ವಿಕಲಾಂಗರೂ ವಾಹನ ಇಲ್ಲದೆ ಹೊರಗೆ ಬರಬಾರದು. ಅರ್ಹರು ಹಾಗೂ ಕಾನೂನಿನಂತೆ ಪ್ರಮಾಣಪತ್ರ ಹೊಂದಿದವರಿಗೆ ವಾಹನ ನೀಡಲು ಕ್ರಮ ಕೈಗೊಳ್ಳಲಾಗುವುದು. ಅರ್ಹ ಇಬ್ಬರು ವಿಕಲಾಂಗರಿಗೆ ರಾಶಿ ಯಂತ್ರ ನೀಡಲಾಗುತ್ತಿದೆ ಎಂದು ಹೇಳಿದರು.
ಲಾಲ್ ಅಹ್ಮದ್ ಬಾಂಬೆ ಶೇಠ್, ಕಾಂಗ್ರೆಸ್ ಮುಖಂಡರು ಹಾಜರಿದ್ದರು.